ETV Bharat / city

ಸಿಲಿಕಾನ್​ ಸಿಟಿ ಜನರಿಗೆ ಕೊರೊನಾ ಭಯ: ಮನೆಯೇ ಫಿಟ್ನೆಸ್​ ಕೇಂದ್ರವಾಯ್ತು - corona in bengaluru

ದೈಹಿಕ ವ್ಯಾಯಾಮದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯ- ದೈಹಿಕ ಫಿಟ್ನೆಸ್ ಗೆ ಮೊರೆಹೋದ ಸಿಲಿಕಾನ್ ಸಿಟಿ ಜನ

fitness maintaining in home
ಮನೆಯಲ್ಲೇ ವ್ಯಾಯಾಮ
author img

By

Published : Jul 9, 2020, 5:11 PM IST

ಬೆಂಗಳೂರು: ಕೊರೊನಾದಿಂದ ಭಯದಿಂದ ತುಂಬಾ ಮಂದಿ ಮನೆಯಿಂದ ಹೊರಗೆ ಬರಲು ಹಿಂದುಮುಂದು ನೋಡುತ್ತಿದ್ದಾರೆ. ಜಿಮ್, ಪಾರ್ಕ್​, ಕ್ರೀಡಾಂಗಣಗಳು ಬಹುತೇಕ ಮುಚ್ಚಿದ ಕಾರಣದಿಂದ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ. ಆದರೂ ಕೂಡಾ ಫಿಟ್ನೆಸ್​ ಪ್ರಿಯರು ತಮ್ಮ ಮನೆಗಳಲ್ಲೇ ವರ್ಕೌಟ್​ ಮಾಡೋಕೆ ಮುಂದಾಗಿದ್ದಾರೆ.

ಲಾಕ್​​ಡೌನ್​ನಿಂದಾಗಿ ವರ್ಕ್ ಫ್ರಂ ಹೋಂನಲ್ಲಿರುವ ಉದ್ಯೋಗಿಗಳು, ಗೃಹಿಣಿಯರು ಕೂಡಾ ಹೆಚ್ಚೆಚ್ಚು ದೈಹಿಕ ಆರೋಗ್ಯಕ್ಕಾಗಿ ಯೋಗ, ವ್ಯಾಯಾಮಗಳ ಮೊರೆ ಹೋಗಿದ್ದಾರೆ. ನಗರದ ಮನೆಗಳ ಮಹಡಿಗಳೇ ಈಗ ವಾಕಿಂಗ್ ಟ್ರ್ಯಾಕ್​ ಆಗಿದ್ದು, ಪಾರ್ಕಿಂಗ್ ಜಾಗಗಳಲ್ಲಿಯೂ ಜಾಗಿಂಗ್​ ಮಾಡೋಕೆ ಮುಂದಾಗಿದ್ದಾರೆ.

ಮನೆಯಲ್ಲೇ ವ್ಯಾಯಾಮ

ಯುವತಿಯರಂತೂ ಯೋಗ, ಪ್ರಾಣಾಯಾಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ದೈಹಿಕ ಸೌಂದರ್ಯದ ಜೊತೆಗೆ ಶುದ್ಧ ಗಾಳಿ ಸೇವಿಸುವ ಮೂಲಕ ರೋಗದಿಂದ ದೂರ ಇರಲು ಪ್ರಯತ್ನಿಸುತ್ತಿದ್ದಾರೆ. ಈಗ ಸಾಕಷ್ಟು ಆನ್​ಲೈನ್ ಫಿಟ್ನೆಸ್ ಕ್ಲಾಸ್​​ಗಳು, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದ್ದು, ಅದರ ಮಾರ್ಗದರ್ಶನದಲ್ಲಿ ಮನೆಯಲ್ಲೇ ಯೋಗ, ಝುಂಬಾ, ವಿವಿಧ ವ್ಯಾಯಾಮಗಳನ್ನು ಮಾಡಲು ಸ್ವಲ್ಪ ಸಮಯ ಮೀಸಲಿಡುತ್ತಿದ್ದಾರೆ.

ತಜ್ಞರ ಪ್ರಕಾರ, ತಿಂದು ಸುಮ್ಮನೆ ಕುಳಿತುಕೊಳ್ಳುವ ಬದಲು ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಬಹಳ ಮುಖ್ಯ. ರೋಗಗಳು ತಕ್ಷಣ ದೇಹಕ್ಕೆ ಆಕ್ರಮಿಸುವುದನ್ನು ತಪ್ಪಿಸಲೂ ಕೂಡಾ ಇದು ಸಹಕಾರಿ ಎಂದಿದ್ದಾರೆ. ಕೊರೊನಾ ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್, ದೈಹಿಕ ಅಂತರ ಕಾಪಾಡುವ ಜೊತೆಗೆ ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡಲು ಕೂಡಾ ಸೂಚನೆ ನೀಡಲಾಗಿದೆ. ಹೀಗಾಗಿ ನಗರವಾಸಿಗಳು ಹೆಚ್ಚೆಚ್ಚು ಮನೆಯೊಳಗೇ ಅಥವಾ ಮಹಡಿ ಮೇಲೆ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ.

ಆಹಾರತಜ್ಞ ಕೆ.ಸಿ. ರಘು ಅವರು ಈಟಿವಿ ಭಾರತದ ಜೊತೆ ಮಾತನಾಡಿ, ನಮ್ಮ ದೇಹ ಬಹಳ ಸುಲಭವಾಗಿ ರೋಗ-ರುಜಿನಕ್ಕೆ ತುತ್ತಾಗುವ ದೇಹವಾಗಬಾರದು. ಕೊರೊನಾ ಸಂದರ್ಭದಲ್ಲಿ ಎರಡು ರೀತಿಯಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಸಜ್ಜಾಗಿಡಬೇಕು. ಯಾರು ಚೆನ್ನಾಗಿ ವ್ಯಾಯಾಮ, ಯೋಗ ಮಾಡುತ್ತಾರೋ, ಅವರಿಗೆ ಉರಿಯೂತ ಕಡಿಮೆಯಾಗುತ್ತದೆ. ಇದರಿಂದ ರೋಗಕ್ಕೆ ಬೇಗ ತುತ್ತಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಯೋಗ ಶಿಕ್ಷಕಿ ಸವಿತಾ ಕುಶಲ್​ ಮಾತನಾಡಿ, ಯೋಗಾಭ್ಯಾಸದಿಂದಲೂ ಕೊರೊನಾ ರೋಗವನ್ನು ದೂರ ಇಡಬಹುದು. ಕೆಟ್ಟ ಯೋಚನೆಗಳನ್ನು ದೂರ ಮಾಡಿ, ದಿನಕ್ಕೆ ಅರ್ಧ ಗಂಟೆ ಯೋಗಾಸನ ಮಾಡುವ ಮೂಲಕವೂ ಆರೋಗ್ಯಕರವಾಗಿರಲು ಸಾಧ್ಯ. ಮಕ್ಕಳಿಗೂ, ವಯಸ್ಸಾದವರಿಗೂ ಯೋಗ ಮಾಡಿಸಬಹುದು. ಮಾನಸಿಕ ನೆಮ್ಮದಿಗಾಗಿ ಯೋಗ, ಪ್ರಾಣಾಯಾಮ ತುಂಬಾ ಒಳ್ಳೆಯದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.