ETV Bharat / city

ಲಾಕ್‌ಡೌನ್ ಆರ್ಥಿಕ ಸಂಕಷ್ಟದ ಮಧ್ಯೆ ಅತಿವೃಷ್ಟಿ ಪರಿಹಾರ ಧನ ಬಿಡುಗಡೆಯ ಸ್ಥಿತಿ-ಗತಿ ಹೇಗಿದೆ? - Economic Hardship

ಸುಮಾರು 6.5 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಪ್ರವಾಹದಿಂದ ನಷ್ಟ ಆಗಿತ್ತು. ಬೆಳೆ ನಷ್ಟವಾದ ರೈತರಿಗೆ ಈವರೆಗೆ ಸರ್ಕಾರ 1,185 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.

Overdue Compensation Release
ಅತಿವೃಷ್ಟಿ ಪರಿಹಾರಧನ
author img

By

Published : Jun 1, 2020, 12:08 AM IST

ಬೆಂಗಳೂರು: ಕಳೆದ ಬಾರಿಯ ಮಹಾ‌ಮಳೆಗೆ ಸಾವಿರಾರು‌ ಮನೆಗಳು, ಬೆಳೆಗಳು ನೀರು ಪಾಲಾಗಿದ್ದವು. ಅತಿವೃಷ್ಟಿಗೆ ಮನೆ, ಬೆಳೆ‌ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಧನವನ್ನೂ ಘೋಷಿಸಿತ್ತು. ಇದೀಗ ಲಾಕ್‌ಡೌನ್ ಆರ್ಥಿಕ ಸಂಕಷ್ಟದ ಮಧ್ಯೆ ಅತಿವೃಷ್ಟಿ ಪರಿಹಾರ ವಿತರಣೆಯ ಸ್ಥಿತಿಗತಿ ಹೇಗಿದೆ ನೋಡಿ.

ಲಾಕ್‌ಡೌನ್ ಆರ್ಥಿಕ ಸಂಕಷ್ಟದ ಮಧ್ಯೆ ಅತಿವೃಷ್ಟಿ ಪರಿಹಾರಧನ ಬಿಡುಗಡೆಯ ಸ್ಥಿತಿಗತಿ ಹೇಗಿದೆ?

ಕಳೆದ ವರ್ಷ ಆಗಸ್ಟ್, ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕ ಮಹಾ ಮಳೆಗೆ ತತ್ತರಿಸಿ ಹೋಗಿತ್ತು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮಹಾ ಮಳೆಯ ರೌದ್ರಾವತಾರಕ್ಕೆ ಸಾವಿರಾರು ಮಂದಿ ಮನೆ-ಮಠ, ತಾವು ಬೆಳೆದಿದ್ದ ಫಸಲನ್ನು ಕಳೆದುಕೊಂಡಿದ್ದರು. ಒಟ್ಟು 22 ಜಿಲ್ಲೆಗಳು ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದವು.

ಬೆಳೆ ನಷ್ಟ ಎಷ್ಟು, ಪರಿಹಾರ ಪಾವತಿ ಎಷ್ಟಾಗಿದೆ: ಮಹಾ ಮಳೆಗೆ ರಾಜ್ಯಾದ್ಯಂತ 6.5 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಕೊಚ್ಚಿ ಹೋಗಿದ್ದವು. ಆ ಮೂಲಕ ಸುಮಾರು 5,16,532 ರೈತರು ತಾವು ಬೆಳೆದಿದ್ದ ಬೆಳೆಗಳನ್ನು ಕಳೆದುಕೊಂಡಿದ್ದರು. ಈ ಸಂಬಂಧ ಸರ್ಕಾರ ಬೆಳೆ ಪರಿಹಾರವನ್ನು ಘೋಷಿಸಿತ್ತು.

Overdue Compensation Release
ಲಾಕ್‌ಡೌನ್ ಆರ್ಥಿಕ ಸಂಕಷ್ಟದ ಮಧ್ಯೆ ಅತಿವೃಷ್ಟಿ ಪರಿಹಾರಧನ ಬಿಡುಗಡೆಯ ಸ್ಥಿತಿಗತಿ ಹೇಗಿದೆ?

ಅದರಂತೆ ಮಳೆ ಆಧಾರಿತ ಭೂಮಿಯಲ್ಲಿನ ಬೆಳೆ‌ ಹಾನಿಗೆ ಪ್ರತಿ ಹೆಕ್ಟೇರ್​ಗೆ 16,800 ರೂ., ತೋಟಗಾರಿಕೆ ಬೆಳೆಗೆ 23,500 ರೂ. ಹಾಗು ನೀರಾವರಿ ಬೆಳೆಗೆ 28,000 ರೂ. ಪರಿಹಾರ ಘೋಷಿಸಲಾಗಿತ್ತು.

ಸುಮಾರು 6.5 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಪ್ರವಾಹದಿಂದ ನಷ್ಟ ಆಗಿತ್ತು. ಬೆಳೆ ನಷ್ಟವಾದ ರೈತರಿಗೆ ಈವರೆಗೆ ಸರ್ಕಾರ 1,185 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.

ಆದರೆ ರೈತ ಮುಖಂಡರು ಮಾತ್ರ ಬೆಳೆ ಹಾನಿ ಪರಿಹಾರ ಪಾವತಿ ಸಮರ್ಪಕವಾಗಿ ಆಗಿಲ್ಲ ಎಂದು ಆರೋಪಿಸಿದ್ದಾರೆ. ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲೇ ಸರ್ಕಾರ ವಿಫಲವಾಗಿದೆ. ಜೊತೆಗೆ ಘೋಷಿಸಿದ ಪರಿಹಾರ ಹಣ ಇನ್ನೂ ಹಲವು ರೈತರ ಕೈಸೇರಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ. ಈ ಸಂಬಂಧ ಲಾಕ್‌ಡೌನ್ ಮುನ್ನ ಪ್ರತಿಭಟನೆಯನ್ನೂ ಮಾಡಿದ್ದೆವು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮನೆ ಹಾನಿ ಪರಿಹಾರದ ಸ್ಥಿತಿಗತಿ ಏನಿದೆ?: ಪ್ರವಾಹದ ರುದ್ರನರ್ತನಕ್ಕೆ 32,482 ಮನೆಗಳು ಭಾಗಶ: ಮತ್ತು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು. ಭಾಗಶ: ಹಾನಿಗೊಳಗಾದ ಮನೆಗಳಿಗೆ ಸರ್ಕಾರ 1 ಲಕ್ಷ ರೂ. ಹಾಗೂ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ಕೊಡಲು ನಿರ್ಧರಿಸಿತ್ತು.

ಭಾಗಶ: ಮತ್ತು ಸಂಪೂರ್ಣ ಹಾನಿಗೊಳಗಾದ‌ ಮನೆಗಳ ಪೈಕಿ 32,424 ಮನೆಗಳಿಗೆ ತಲಾ 1 ಲಕ್ಷ ರೂ. ಬಿಡುಗಡೆ ಮಾಡಿದೆ. 11,037 ಮನೆಗಳಿಗೆ ತಲಾ 2 ಲಕ್ಷ ರೂ., 4582 ಮನೆಗಳಿಗೆ 3 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.

656 ಮನೆಗಳಿಗೆ ತಲಾ 4 ಲಕ್ಷ ರೂ. ನೀಡಲಾಗಿದೆ. ಒಟ್ಟು 47 ಮನೆಗಳಿಗೆ ಸಂಪೂರ್ಣ 5 ಲಕ್ಷ ರೂ. ಪರಿಹಾರ ಹಣ ನೀಡಲಾಗಿದೆ. ಆ ಮೂಲಕ ಒಟ್ಟು 557.67 ಕೋಟಿ ರೂ. ಪರಿಹಾರ ಹಣ ಪಾವತಿಸಲಾಗಿದೆ. ಇನ್ನು ಸುಮಾರು 12,662 ಮನೆಗಳ ಕಾಮಗಾರಿನೇ ಪ್ರಾರಂಭವಾಗಿಲ್ಲ.

ಇನ್ನು ಸಣ್ಣಪುಟ್ಟ ಹಾನಿಗೊಳಗಾದ ಮನೆಗಳ ದುರಸ್ತಿಗೆ 25,000 ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿತ್ತು. ಅದರಂತೆ ಸುಮಾರು 94,210 ಮನೆಗಳು ಹಾನಿಗೊಳಗಾಗಿವೆ. ಇದಕ್ಕಾಗಿ ಎನ್​ಡಿಆರ್​ಎಫ್ ವತಿಯಿಂದ 35.80 ಕೋಟಿ ರೂ. ಹಣ ಬಿಡುಗಡೆಯಾಗಿದ್ದರೆ, ರಾಜ್ಯ ಸರ್ಕಾರದ ವತಿಯಿಂದ 49.88 ಕೋಟಿ ರೂ.‌ ಪರಿಹಾರ ಹಣ ಬಿಡುಗಡೆಯಾಗಿದೆ. ಒಟ್ಟು 85.68 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ.

ಅತಿವೃಷ್ಟಿ ಸಂಬಂಧ ಪರಿಹಾರ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಯಾವುದೇ ವಿಳಂಬ ಮಾಡುತ್ತಿಲ್ಲ. ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಹಾಬಿಗೊಳಗಾದ ಮನೆಗಳ ನಿರ್ಮಾಣ ಕಾರ್ಯ ಸ್ಥಗಿತವಾಗಿತ್ತು. ಹೀಗಾಗಿ ಪರಿಹಾರ ಹಣ ಬಿಡುಗಡೆಯನ್ನು ತಡೆಹಿಡಿದಿದ್ದೆವು. ಈಗ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಈ ಟಿವಿ ಭಾರತ್​ಗೆ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.