ETV Bharat / city

ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ : ಸಿಎಂ ಬೊಮ್ಮಾಯಿ ವಿಶ್ವಾಸ - Rajya Sabha Polls

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಆತ್ಮಸಾಕ್ಷಿ ಮತ ಬೀಳಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಈ ಬಾರಿ ರಾಜ್ಯಸಭೆ ಚುನಾವಣೆ ಬೇರೆ ರೀತಿಯಲ್ಲಿ ನಡೆಯುತ್ತದೆ ಎಂದರು..

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Jun 6, 2022, 12:46 PM IST

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಲೇಹರ್ ಸಿಂಗ್ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಆತ್ಮಸಾಕ್ಷಿ ಮತಗಳು ಬೀಳಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈ ಬಾರಿ ರಾಜ್ಯಸಭೆ ಚುನಾವಣೆ ಬೇರೆ ರೀತಿಯಲ್ಲಿ ನಡೆಯುತ್ತದೆ. ನಿಮ್ಮ ಅಭ್ಯರ್ಥಿಗೂ ಆತ್ಮ‌ಸಾಕ್ಷಿ ಮತ ಬೀಳುತ್ತಾ? ಎಂಬ ಪ್ರಶ್ನೆಗೆ ಸಿಎಂ ಮಾರ್ಮಿಕವಾಗಿ ನುಡಿದರು.

ರಾಜ್ಯಸಭೆ ಚುನಾವಣೆ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು..

ಕಳೆದ‌ ಬಾರಿ ಬಹಿರಂಗವಾಗಿ ಏಳೆಂಟು ಕ್ರಾಸ್ ಮತದಾನ ಆಗಿತ್ತು. ಈ ಹಿಂದೆ ಗೌಪ್ಯ ಮತದಾನ ವೇಳೆ ಬೇರೆಯೇ ರೀತಿ ಆಗಿತ್ತು. ಈಗ ಚುನಾವಣೆಯಲ್ಲಿ ಬೇರೆ ರೀತಿಯ ಚುನಾವಣೆ ಆಗಲಿದೆ ಎಂದು ಸೂಚ್ಯವಾಗಿ ತಿಳಿಸಿದರು. ಇನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಆರೋಪ ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಅದರ ಹಿಂದೆ ರಾಜಕಾರಣ ಬಿಟ್ಟು ಬೇರೇನೂ ಇಲ್ಲ ಎಂದರು.

ಇದನ್ನೂ ಓದಿ : ರಾಜ್ಯಸಭೆಗೆ 3ನೇ ಅಭ್ಯರ್ಥಿ ಪ್ರಕಟಿಸಿದ ಬಿಜೆಪಿ : ಬಿಎಸ್ವೈ ಆಪ್ತ ಲೆಹರ್ ಸಿಂಗ್‌ಗೆ ಮಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.