ಬೆಂಗಳೂರು: ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ವಿದೇಶಗಳಿಂದ ಉಚಿತವಾಗಿ ಆಮದು ಮಾಡಿಕೊಳ್ಳುವ ಅಗತ್ಯ ಸಾಮಗ್ರಿಗಳಿಗೆ ಆಮದು ಶುಲ್ಕದಿಂದ ವಿನಾಯಿತಿ ಪಡೆಯುವ ಕುರಿತು ಪ್ರಮಾಣ ಪತ್ರ/ಧೃಡೀಕರಣ ನೀಡಲು ನೋಡಲ್ ಪ್ರಾಧಿಕಾರವನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಆಯುಕ್ತರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ರನ್ನು ಒಳಗೊಂಡ ನೋಡಲ್ ಪ್ರಾಧಿಕಾರ ನೇಮಕ ಮಾಡಲಾಗಿದೆ. ಕೋವಿಡ್ ಎರಡನೇ ಅಲೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಅಗತ್ಯ ಸಾಮಗ್ರಿಗಳನ್ನು ಆಸಕ್ತರು ಉಚಿತ ಆಮದು ಮಾಡಿಕೊಳ್ಳಲು ಇಚ್ಚಿಸಿದಲ್ಲಿ, ಅಂತಹ ಸಾಮಗ್ರಿಗಳಿಗೆ ಆಮದು ಶುಲ್ಕದಿಂದ ವಿನಾಯಿತಿ ಪಡೆಯಲು ರಾಜ್ಯ ಸರ್ಕಾರದಿಂದ ನೇಮಕವಾಗಿರುವ ನೋಡಲ್ ಪ್ರಾಧಿಕಾರದಿಂದ ಪ್ರಮಾಣ ಪತ್ರ/ದೃಢೀಕರಣ ಪಡೆಯಬಹುದು.
ಭಾರತ ಸರ್ಕಾರದ ಅಧಿಸೂಚನೆಯಲ್ಲಿ ನಮೂದಿಸಿರುವ ಕೆಲ ಸರಕುಗಳನ್ನು ಉಚಿತ ಆಮದು ಮಾಡಿಕೊಳ್ಳಲು ನಿಗದಿತ ಮಾದರಿಯಲ್ಲಿ ಇ-ಮೇಲ್ ವಿಳಾಸ importnodal.kar@gmail.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.