ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಬಹು ವರ್ಷಗಳಿಂದ ಕಾಯುತ್ತಿದ್ದ ತೃತೀಯ ಲಿಂಗಿಗಳ ಕನಸು ನನಸಾಗಿದೆ. ಇದೀಗ ಕರ್ನಾಟಕದಲ್ಲಿ ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ ಕಲ್ಪಿಸಿಲಾಗಿದೆ. ಪೊಲೀಸ್ ಇಲಾಖೆಯು ಮಂಗಳಮುಖಿಯ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಇತ್ತೀಚೆಗೆ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡುವಂತೆ ಮಂಗಳಮುಖಿಯರ ಸಮುದಾಯ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯ ತೃತೀಯ ಲಿಂಗಿಗಳ ಬೇಡಿಕೆಗೆ ಅಸ್ತು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಮಂಗಳಮುಖಿಯರಿಗಾಗಿ ರಾಜ್ಯ ಪೊಲೀಸ್ ಇಲಾಖೆ 5 ಹುದ್ದೆಗಳನ್ನು ಮೀಸಲಿರಿಸಿದೆ. ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪಡೆ (ಕೆಸ್ಆಆರ್ ಮತ್ತು ಐಆರ್ಬಿ) ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅವರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಯಿಂದ ಮಂಗಳಮುಖಿ ಎಂಬ ಧೃಡೀಕರಣ ಪತ್ರ ಕಡ್ಡಾಯವಾಗಿದೆ. ಧೃಡೀಕರಣ ಪತ್ರ ನೀಡಿಲ್ಲವಾದಲ್ಲಿ ಅಂತಹ ಅರ್ಜಿ ತಿರಸ್ಕೃತವಾಗಲಿದೆ.
ಸಂತಸ ವ್ಯಕ್ತಪಡಿಸಿದ ಮಂಗಳಮುಖಿ ಸಮುದಾಯ
ಇಲಾಖೆಯ ನಿರ್ಧಾರವನ್ನು ಮಂಗಳಮುಖಿಯರು ಸ್ವಾಗತಿಸಿದ್ದಾರೆ. ಸರ್ಕಾರದ ಇತರ ಸಂಸ್ಥೆಗಳು ಇಂತಹ ನಡೆಯನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ. "ಪೊಲೀಸ್ ಇಲಾಖೆ ನಿರ್ಧಾರ ಸ್ವಾಗತಾರ್ಹ. ನಮಗೆ ಈ ಹಿಂದೆ ಯಾವ ರೀತಿಯಾದ ಸೌಕರ್ಯಗಳು ಸಿಗುತ್ತಿರಲಿಲ್ಲ. ಈಗ ಒಂದೊಂದೇ ಸೌಕರ್ಯಗಳು ಸಿಗುತ್ತಿವೆ.
ಶೇ.1ರಷ್ಟು ಮೀಸಲಾತಿ ನೀಡಿರುವುದು ಖುಷಿ ತಂದಿದೆ. ಎಲ್ಲಾ ರಂಗದಲ್ಲೂ ಮಂಗಳಮುಖಿಯರಿಗೆ ಅವಕಾಶ ನೀಡಿ ಸಾಮಾನ್ಯರಂತೆ ನೋಡಿಕೊಳ್ಳಬೇಕು. ನಾನು ಕೂಡ ಎಂಎ ಜರ್ನಲಿಸಂ ಮಾಡಿದ್ದೇನೆ. ಪೊಲೀಸ್ ಇಲಾಖೆಗೆ ಸೇರಿಕೊಳ್ಳಲು ಅರ್ಜಿ ಸಲ್ಲಿಸುತ್ತೇನೆ" ಎಂದು ತೃತೀಯ ಲಿಂಗಿ ಸನಾ ತಿಳಿಸಿದ್ದಾರೆ.
ಇದನ್ನೂ ಓದಿ: ಲಾಯರ್ ಆದ ಮೈಸೂರಿನ ತೃತೀಯ ಲಿಂಗಿ.. ರಾಜ್ಯದಲ್ಲಿ ಮೊದಲಿಗರೆಂಬ ಖ್ಯಾತಿ ಇವರದು..
-
Yes. You read it right! Karnataka State Police is an equal opportunity organisation. We are recruiting men, women and even transgenders. pic.twitter.com/HhM3RtxpQv
— DGP KARNATAKA (@DgpKarnataka) December 21, 2021 " class="align-text-top noRightClick twitterSection" data="
">Yes. You read it right! Karnataka State Police is an equal opportunity organisation. We are recruiting men, women and even transgenders. pic.twitter.com/HhM3RtxpQv
— DGP KARNATAKA (@DgpKarnataka) December 21, 2021Yes. You read it right! Karnataka State Police is an equal opportunity organisation. We are recruiting men, women and even transgenders. pic.twitter.com/HhM3RtxpQv
— DGP KARNATAKA (@DgpKarnataka) December 21, 2021