ETV Bharat / city

ಮಾಲ್, ಸಿನಿಮಾ ಥಿಯೇಟರ್​ ಎಂಟ್ರಿಗೆ 2 ಡೋಸ್ ಲಸಿಕೆ ಕಡ್ಡಾಯ.. ಬಿಬಿಎಂಪಿಯಿಂದ ಹೆಚ್ಚುವರಿ ಮಾರ್ಗಸೂಚಿ - ಮಾಲ್​ ಸಿನಿಮಾ ಥಿಯೇಟರ್​ಗೆ ಬರಲು ಲಸಿಕೆ ಕಡ್ಡಾಯ

ಬೆಂಗಳೂರಿನಲ್ಲಿ ಒಮಿಕ್ರಾನ್ ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಇನ್ನಷ್ಟು ಕಟ್ಟೆಚ್ಚರ ವಹಿಸಿದೆ. ಸರ್ಕಾರ ಈಗಾಗಲೇ ಕೊರೋನಾ ಮಾರ್ಗಸೂಚಿ ಪ್ರಕಟಿಸಿದೆ. ಇದರ ಮುಂದುವರೆದ ಭಾಗವಾಗಿ ಪಾಲಿಕೆ ಇನ್ನಷ್ಟು ಸೂಚನೆ ಹಾಗೂ ಕ್ರಮಗಳನ್ನ ಜಾರಿ ಮಾಡಿದೆ.

bbmp
ಬಿಬಿಎಂಪಿ
author img

By

Published : Dec 5, 2021, 10:34 PM IST

ಬೆಂಗಳೂರು: ಬೆಂಗಳೂರಿನಲ್ಲಿ ಒಮಿಕ್ರಾನ್ ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಇನ್ನಷ್ಟು ಕಟ್ಟೆಚ್ಚರ ವಹಿಸಿದೆ. ಸರ್ಕಾರ ಈಗಾಗಲೇ ಕೊರೋನಾ ಮಾರ್ಗಸೂಚಿ ಪ್ರಕಟಿಸಿದೆ. ಇದರ ಮುಂದುವರೆದ ಭಾಗವಾಗಿ ಪಾಲಿಕೆ ಭಾನುವಾರ ಇನ್ನಷ್ಟು ಸೂಚನೆ ಹಾಗೂ ಕ್ರಮಗಳನ್ನ ಜಾರಿಗೊಳಿಸಿದ.

ಬೆಂಗಳೂರಿನ ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಮಾಲ್‌ಗಳು, ಸಿನಿಮಾ ಹಾಲ್‌ಗಳು, ಥಿಯೇಟರ್‌ಗಳಿಗೆ ಜನರು ಪ್ರವೇಶಿಸಲು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎಂಬುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಇಷ್ಟು ಮಾತ್ರವಲ್ಲದೇ, ಮಾಲೀಕರು ಅಥವಾ ವ್ಯವಸ್ಥಾಪಕರು ಮಾಸ್ಕ್, ಸಾಮಾಜಿಕ ಅಂತರ ಮತ್ತು ಇತರ ಕೋವಿಡ್ ನಿಯಮಾವಳಿಗಳನ್ನು ಸಿಬ್ಬಂದಿ ಮತ್ತು ಗ್ರಾಹಕರು ಎಲ್ಲಾ ಸಮಯದಲ್ಲಿಯೂ ನಿರ್ವಹಿಸುತ್ತಿದ್ದಾರೆಯೇ? ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಗ್ರಾಹಕರ ಸ್ಕ್ರೀನಿಂಗ್‌ಗಾಗಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿಬ್ಬಂದಿ ಮತ್ತು ಎಲ್ಲಾ ಗ್ರಾಹಕರ ಲಸಿಕೆ ಪ್ರಮಾಣಪತ್ರದ ಪರಿಶೀಲಿಸಿದ ಬಳಿಕವೇ ಪ್ರವೇಶಕ್ಕೆ ಅನುಮತಿಸಬೇಕು ಎಂದು ಸೂಚಿಸಿದೆ.

ರಹಸ್ಯ ಭೇಟಿ ಕೊಟ್ಟು ಪರಿಶೀಲಿಸಿ

ಈ ಎಲ್ಲಾ ಜಾಗದಲ್ಲಿ ಕೋವಿಡ್ ನಿಯಮ ಪಾಲನೆಯ ಖಚಿತತೆಯ ಬಗ್ಗೆ ತಿಳಿದುಕೊಳ್ಳಲು ರಹಸ್ಯ ಭೇಟಿ ಕೊಟ್ಟು ಪರಿಶೀಲಿಸಬೇಕು. ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಆರೋಗ್ಯ ಅಧಿಕಾರಿಗಳು ಯಾವುದೇ ಪೂರ್ವಸೂಚನೆಯಿಲ್ಲದೆ ಆಗಾಗ್ಗೆ ತಪಾಸಣೆಗಾಗಿ ಸಂಸ್ಥೆಗಳಿಗೆ ಭೇಟಿ ನೀಡಬೇಕು. ಉಲ್ಲಂಘನೆಯನ್ನು ಗಮನಿಸಿದರೆ, ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಇತರ ಸಂಬಂಧಿತ ಕಾನೂನು ನಿಬಂಧನೆಗಳ ಪ್ರಕಾರ ಕಠಿಣ ಕ್ರಮವನ್ನು ಕೈಗೊಳ್ಳಲು ಬಿಬಿಎಂಪಿ ಸೂಚಿಸಿದೆ.

ಇದನ್ನೂ ಓದಿ: ಬಿಎಸ್​ಎಫ್​ ಯೋಧರಿಗೆ ವಿಶ್ವದರ್ಜೆಯ ತಂತ್ರಜ್ಞಾನ ಒದಗಿಸಲು ಕೇಂದ್ರ ಸಿದ್ಧ: ಅಮಿತ್​ ಶಾ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.