ETV Bharat / city

ಪದವಿ, ಸ್ನಾತಕೋತ್ತರ‌ ಕೋರ್ಸ್​ಗಳಿಗೆ ಜ.15 ರಿಂದ‌ ಆಫ್​ಲೈನ್ ತರಗತಿ ಆರಂಭ: ಡಿಸಿಎಂ ಅಶ್ವತ್ಥ ನಾರಾಯಣ

ಜನವರಿ 1ರಿಂದ ಡಿಗ್ರಿ, ಸ್ನಾತಕೋತ್ತರ, ವೈದ್ಯಕಿಯ ‌ಕೋರ್ಸ್​ಗಳ ಅಂತಿಮ ವರ್ಷದ ತರಗತಿಗಳು ಪ್ರಾರಂಭವಾಗಿವೆ. ಈಗ ಉಳಿದೆಲ್ಲ ವರ್ಷಗಳ ಆಫ್​ಲೈನ್ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.

offline-classes-start-on-jan-15-for-graduate-and-postgraduate-courses-dcm-ashwaththanarayana
ಪದವಿ, ಸ್ನಾತಕೋತ್ತರ‌ ಕೋರ್ಸ್​ಗಳಿಗೆ ಜ.15ರಿಂದ‌ ಆಫ್​ಲೈನ್ ತರಗತಿ ಆರಂಭ: ಡಿಸಿಎಂ ಅಶ್ವತ್ಥನಾರಾಯಣ
author img

By

Published : Jan 11, 2021, 2:03 PM IST

ಬೆಂಗಳೂರು: ಪದವಿ ಹಾಗೂ ಸ್ನಾತಕೋತ್ತರ‌ ಕೋರ್ಸ್​ಗಳಿಗೆ ಜನವರಿ 15 ರಿಂದ‌ ಆಫ್​ಲೈನ್ ಕ್ಲಾಸ್ ಆರಂಭವಾಗಲಿವೆ ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಪದವಿ, ಸ್ನಾತಕೋತ್ತರ‌ ಕೋರ್ಸ್​ಗಳಿಗೆ ಜ.15ರಿಂದ‌ ಆಫ್​ಲೈನ್ ತರಗತಿ ಆರಂಭ: ಡಿಸಿಎಂ ಅಶ್ವತ್ಥನಾರಾಯಣ

ವಿಕಾಸಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನವರಿ 1ರಿಂದ ಡಿಗ್ರಿ, ಸ್ನಾತಕೋತ್ತರ, ವೈದ್ಯಕಿಯ ‌ಕೋರ್ಸ್​ಗಳ ಅಂತಿಮ ವರ್ಷದ ತರಗತಿಗಳು ಪ್ರಾರಂಭವಾಗಿವೆ. ಈಗ ಉಳಿದೆಲ್ಲ ವರ್ಷಗಳ ಆಫ್​ಲೈನ್ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ. ಡಿಪ್ಲೋಮಾ ತರಗತಿಗಳನ್ನು ಕೂಡ ಇದರ ಜೊತೆಗೆ ಆರಂಭಿಸಲಾಗುವುದು ಎಂದರು.

ಸಚಿವ ಸಂಪುಟ ವಿಸ್ತರಣೆ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಹೈಕಮಾಂಡ್ ಜೊತೆ ಸಂಪರ್ಕದಲ್ಲಿ ಇದ್ದಾರೆ. ಈ ಎಲ್ಲ ಮಾಹಿತಿಯನ್ನು ಸಿಎಂ ಯಡಿಯೂರಪ್ಪ ಅವರೇ ತಿಳಿಸುತ್ತಾರೆ. ಸಿಎಂ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂಗೆ ಪರಮಾಧಿಕಾರ ಇದೆ. ಅದೆಲ್ಲವನ್ನು ಸಿಎಂ ನೋಡಿಕೊಳ್ತಾರೆ. ಅದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.