ETV Bharat / city

ಹೈಕೋರ್ಟ್‌ನಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಕೇಸ್​ ವಿಚಾರಣೆ ವೇಳೆ ಅಧಿಕಾರಿಗಳು ಗೈರಾಗುವಂತಿಲ್ಲ; ಸಿಎಸ್​ ಖಡಕ್​ ಆದೇಶ - ಬೆಂಗಳೂರು

ಸರ್ಕಾರಕ್ಕೆ ಸಂಬಂಧಿ ಪ್ರಕರಣಗಳ ವಿಚಾರಣೆ ವೇಳೆ ಸಂಬಂಧ ಪಟ್ಟ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ಹೈಕೋರ್ಟ್‌ಗೆ ಗೈರಾಗಬಾರದು. ಅನಾರೋಗ್ಯ ಇತರೆ ತುರ್ತು ಕಾರಣಗಳಿಂದ ಹಾಜರಾಗಲು ಆಗದಿದ್ದಲ್ಲಿ ಮೊದಲೇ ಅಧಿಕಾರಿಗಳು ಸರ್ಕಾರಿ ವಕೀಲರಿಗೆ ತಿಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

Officials may not be absent during the HC hearing of government-related cases; Govt. Circular
ಹೈಕೋರ್ಟ್‌ನಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವೇಳೆ ಅಧಿಕಾರಿಗಳು ಗೈರಾಗುವಂತಿಲ್ಲ; ಸರ್ಕಾರ ಸುತ್ತೋಲೆ
author img

By

Published : Nov 10, 2021, 1:48 PM IST

ಬೆಂಗಳೂರು: ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ನ್ಯಾಯಾಲಯಕ್ಕೆ ಗೈರಾಗಬಾರದು ಎಂದು ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ನ್ಯಾಯಾಲಯ ಅಧಿಕಾರಿಗಳಿಗೆ ಖುದ್ದು ಹಾಜರಾಗುವಂತೆ ಆದೇಶ ಮಾಡಿದಾಗ ಸಂಬಂಧಿಸಿದ ಅಧಿಕಾರಿಗಳು ಗೈರಾಗುವಂತಿಲ್ಲ. ಅನಾರೋಗ್ಯ ಇತರೆ ತುರ್ತು ಕಾರಣಗಳಿಂದ ಹಾಜರಾಗಲು ಆಗದಿದ್ದಲ್ಲಿ ಮೊದಲೇ ಅಧಿಕಾರಿಗಳು ಸರ್ಕಾರಿ ವಕೀಲರಿಗೆ ತಿಳಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ವಸತಿ ಮತ್ತು ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವೇಳೆ ಅಧಿಕಾರಿಗಳು ಗೈರಾಗಿದ್ದರು. ಇದಕ್ಕೆ ಕೋರ್ಟ್ ಗರಂ ಆಗಿ ಸರ್ಕಾರವನ್ನು ತರಾಟೆ ತೆಗೆದುಕೊಂಡಿತ್ತು. ನಂತರ ಮತ್ತೆ ಹೀಗಾಗುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಕ್ಷಮೆ ಯಾಚಿಸಿದ್ದರು. ಹೀಗಾಗಿ ಸರ್ಕಾರದಿಂದ ಇಂದು ಸುತ್ತೋಲೆ ಹೊರಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.