ETV Bharat / city

ಸಭಾಧ್ಯಕ್ಷರು 10ನಿಮಿಷ ಕಾದರೂ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕರಿಸಲು ಆಗಮಿಸಲಿಲ್ಲ: ವಿಧಾನಸಭೆ ಸಚಿವಾಲಯ ಸ್ಪಷ್ಟನೆ - ಶಾಸಕ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ

ಸಮಯಕ್ಕೆ ಸರಿಯಾಗಿ ಪ್ರಮಾಣ ವಚನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಭೂಸನೂರು ರಮೇಶ್ ಬಾಳಪ್ಪ(Busnoor Ramesh Balappa) ಅವರು ಪ್ರಮಾಣ ವಚನವನ್ನು ತೆಗೆದುಕೊಂಡರು. ಆದರೆ, ಮಾನೆ ಶ್ರೀನಿವಾಸ್ (Mane Srinivas) ಅವರು ಪ್ರಮಾಣ ವಚನ ತೆಗೆದುಕೊಳ್ಳಲು ಸಭಾಧ್ಯಕ್ಷರು ಸುಮಾರು 10 ನಿಮಿಷಗಳ ಕಾಲ ಕಾದರೂ ಸಹ ಅವರು ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ..

ವಿಧಾನಸಭೆ ಸಚಿವಾಲಯ ಸ್ಪಷ್ಟನೆ
ವಿಧಾನಸಭೆ ಸಚಿವಾಲಯ ಸ್ಪಷ್ಟನೆ
author img

By

Published : Nov 12, 2021, 8:05 PM IST

ಬೆಂಗಳೂರು : ಸಭಾಧ್ಯಕ್ಷರು ಸುಮಾರು 10 ನಿಮಿಷಗಳ ಕಾಲ ಕಾದರೂ ಸಹ ಹಾನಗಲ್ ಕ್ಷೇತ್ರ ಉಪಚುನಾವಣೆಯಲ್ಲಿ ಆಯ್ಕೆಯಾದ ಶಾಸಕ ಶ್ರೀನಿವಾಸ್ ಮಾನೆ ಅವರು ಪ್ರಮಾಣ ವಚನ ತೆಗೆದುಕೊಳ್ಳಲು ವಾಪಸ್​ ಬಂದಿರಲಿಲ್ಲ. ಈ ಹಿನ್ನೆಲೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು ಎಂದು ವಿಧಾನಸಭೆ ಸಚಿವಾಲಯ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಿಂದ ಆಯ್ಕೆಯಾದ ಭೂಸನೂರು ರಮೇಶ್ ಬಾಳಪ್ಪ ಮತ್ತು ಹಾನಗಲ್ ಕ್ಷೇತ್ರದಿಂದ ಆಯ್ಕೆಯಾದ ಮಾನೆ ಶ್ರೀನಿವಾಸ್ ಅವರು ಪ್ರಮಾಣ ವಚನ ತೆಗೆದುಕೊಳ್ಳಲು ನಿನ್ನೆ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಬೆಳಗ್ಗೆ 10.45ರೊಳಗೆ ಆಗಮಿಸುವಂತೆ ಇಬ್ಬರು ಶಾಸಕರಿಗೂ ತಿಳಿಸಲಾಗಿತ್ತು. ಅದರಂತೆ, ಭೂಸನೂರು ರಮೇಶ್ ಬಾಳಪ್ಪ ಮತ್ತು ಮಾನೆ ಶ್ರೀನಿವಾಸ್ ಅವರು ಆಗಮಿಸಿದ್ದರು.

Press release
ಪತ್ರಿಕಾ ಪ್ರಕಟಣೆ

ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ ನಂತರ ಮಾನೆ ಶ್ರೀನಿವಾಸ್ ಅವರು ಸಭಾಧ್ಯಕ್ಷರೊಂದಿಗೆ ಮಾತನಾಡಿ ಎರಡು ನಿಮಿಷ ಹೊರ ಹೋಗಿ ಬರುವುದಾಗಿ ಕೋರಿದರು. ಆಗ ಸಭಾಧ್ಯಕ್ಷರು ಕಾರ್ಯಕ್ರಮ ಮುಗಿಸಿಕೊಂಡು ಹೋಗಲು ತಿಳಿಸಿದರು. ಆದಾಗ್ಯೂ, ಮಾನೆ ಶ್ರೀನಿವಾಸ ಅವರು ಆ ಸ್ಥಳದಿಂದ ನಿರ್ಗಮಿಸಿದರು.

ಸಮಯಕ್ಕೆ ಸರಿಯಾಗಿ ಪ್ರಮಾಣ ವಚನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಭೂಸನೂರು ರಮೇಶ್ ಬಾಳಪ್ಪ ಅವರು ಪ್ರಮಾಣ ವಚನವನ್ನು ತೆಗೆದುಕೊಂಡರು. ಆದರೆ, ಮಾನೆ ಶ್ರೀನಿವಾಸ್ ಅವರು ಪ್ರಮಾಣ ವಚನ ತೆಗೆದುಕೊಳ್ಳಲು ಸಭಾಧ್ಯಕ್ಷರು ಸುಮಾರು 10 ನಿಮಿಷಗಳ ಕಾಲ ಕಾದರೂ ಸಹ ಅವರು ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಆದರೆ, ಮಾನೆ ಶ್ರೀನಿವಾಸ್ ಅವರಿಗೆ ಪ್ರಮಾಣ ವಚನ ತೆಗೆದುಕೊಳ್ಳಲು ನಿನ್ನೆ ಮಧ್ಯಾಹ್ನ 12 ಗಂಟೆಗೆ ಸಭಾಧ್ಯಕ್ಷರು ಸಮಯವನ್ನು ನೀಡಿದ್ದರೂ ಪ್ರಮಾಣ ವಚನ ಬೋಧಿಸಲು ಸಭಾಧ್ಯಕ್ಷರು ಕಚೇರಿಗೆ ಬಂದಿರಲಿಲ್ಲ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.

ಮಾನೆ ಶ್ರೀನಿವಾಸ್ ಅವರು ಪ್ರಮಾಣ ವಚನ ತೆಗೆದುಕೊಳ್ಳಲು ನಿನ್ನೆ ಮಧ್ಯಾಹ್ನ 12 ಗಂಟೆಗೆ ಸಮಯವನ್ನು ಸಭಾಧ್ಯಕ್ಷರಾಗಲಿ ಅಥವಾ ವಿಧಾನಸಭೆ ಸಚಿವಾಲಯದಿಂದಾಗಲಿ ಅಧಿಕೃತವಾಗಿ ನಿಗದಿಪಡಿಸಿರಲಿಲ್ಲ ಎಂದು ಮಾಧ್ಯಮ ಪ್ರಕಟಣೆಯಲ್ಲಿ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಸ್ಪಷ್ಟನೆ ನೀಡಿದ್ದಾರೆ.

ಓದಿ: ಬೆಂಗಳೂರಲ್ಲಿ ಮುಂದಿನ 3 ದಿನವೂ ಮಳೆ; 13 ಜಿಲ್ಲೆಗಳಲ್ಲಿ ಹೈ ಅಲರ್ಟ್​​​ ಘೋಷಿಸಿದ ಹವಾಮಾನ ಇಲಾಖೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.