ETV Bharat / city

World Diabetes Day 2021: ಡಯಾಬಿಟೀಸ್​ನಿಂದ ನಿತ್ಯ ಸಾವಿನ ಸಂಖ್ಯೆ ಎಷ್ಟು ಗೊತ್ತಾ? - ಮಧುಮೇಹ ಕುರಿತು ಜಾಗೃತಿ

ಪ್ರಸ್ತುತ ಭಾರತದಲ್ಲಿ ಡಯಾಬಿಟೀಸ್ (Diabetes) ಬಹುದೊಡ್ಡ ಪಿಡುಗು. ದೇಶದಲ್ಲಿ ಪ್ರತಿನಿತ್ಯ 2,000 ಕ್ಕೂ ಹೆಚ್ಚು ಜನರು ಮಧುಮೇಹದಿಂದ ಸಾವನ್ನಪ್ಪುತ್ತಿದ್ದಾರೆ.

ಡಾ. ವಿನೋದ್ ಬಾಬು
diabetes
author img

By

Published : Nov 14, 2021, 9:58 AM IST

Updated : Nov 14, 2021, 11:05 AM IST

ಬೆಂಗಳೂರು: ಇಂದು ವಿಶ್ವ ಮಧುಮೇಹ ದಿನ (World Diabetes Day). ಮಧುಮೇಹ ಅಥವಾ ಡಯಾಬಿಟೀಸ್ ಎಂಬುದು ವಿಶ್ವವನ್ನು ಅತಿ ಹೆಚ್ಚು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ. ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಾದ್ಯಂತ ಪ್ರತಿವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ.

ವಿಶ್ವದಲ್ಲೇ ಅತೀ ಹೆಚ್ಚು ಮಧುಮೇಹ (Diabetes) ಹೊಂದಿರುವ ದೇಶ ಅಂದ್ರೆ ಚೀನಾ. ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ ಚೀನಾವನ್ನು ಮೀರಿಸಿ, ಭಾರತ ಮಧುಮೇಹದ ರಾಜಧಾನಿಯಾಗಲಿದೆಯಾ? ಎಂಬ ಆತಂಕವನ್ನು ವೈದ್ಯರು ಹೊರಹಾಕಿದ್ದಾರೆ. ಯಾಕಂದ್ರೆ, ಐವರನ್ನ ತಪಾಸಣೆ ಮಾಡಿದರೆ ಮೂವರಿಗೆ ಡಯಾಬಿಟೀಸ್ ಇರುವುದು ಪತ್ತೆಯಾಗುತ್ತಿದೆ.

ಮಧುಮೇಹ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದಿರಾ ನಗರದಲ್ಲಿ ಸೈಕ್ಲಥಾನ್ (ಸೈಕಲ್ ಜಾಥಾ) (Cycle jatha) ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮೋಹನ್ಸ್ ಡಯಾಬಿಟೀಸ್ ಸ್ಪೆಷಾಲಿಟೀಸ್ ಸೆಂಟರ್​ ಕನ್ಸಲ್ಟಂಟ್ ಡಾ. ವಿನೋದ್ ಬಾಬು, ವಿಶ್ವ ಮಧುಮೇಹ ದಿನ ಮಾತ್ರವಲ್ಲದೆ ಪ್ರತಿ ದಿನ, ಎಲ್ಲಾ ಸಂದರ್ಭಗಳಲ್ಲೂ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಹಾಗೂ ಮಧುಮೇಹದಿಂದ ದೂರವಿರುವುದು ಅತಿ ಮುಖ್ಯ ಎಂದರು.

ವ್ಯಕ್ತಿಯ ಆರೋಗ್ಯ ಮತ್ತು ದೈಹಿಕ ಸದೃಢತೆಗೆ ಸೈಕ್ಲಿಂಗ್ ಅತ್ಯುತ್ತಮ ವ್ಯಾಯಾಮ. ಜೊತೆಗೆ, ಸೈಕ್ಲಿಂಗ್ ಅನ್ನು ಸಾರ್ವಜನಿಕರು ತಮ್ಮ ದಿನ ನಿತ್ಯದ ಸಾರಿಗೆ ಸಾಧನವಾಗಿ, ಸಹಜ ಚಟುವಟಿಕೆಯಾಗಿ ಇಲ್ಲವೇ, ಒಂದು ಸ್ಪರ್ಧೆಯ ರೀತಿಯಲ್ಲಿ ಕೂಡ ಬಳಸಿಕೊಳ್ಳಬಹುದು. ಸೈಕ್ಲಿಂಗ್ ಸುಲಭದ ಹಾಗೂ ಇದು ಬಹುತೇಕ ಫಿಟ್ನೆಸ್ ಹಂತಗಳಿಗೆ ಹೊಂದಿಕೊಳ್ಳುವ ವ್ಯಾಯಾಮವಾಗಿದೆ ಎಂದು ಹೇಳಿದರು.

ಭಾರತದಲ್ಲಿ ನಿತ್ಯ 2,000 ಕ್ಕೂ ಹೆಚ್ಚು ಜನರು ಮಧುಮೇಹದಿಂದ ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಬಂದ ಮೇಲೆ ಶೇ.5-10 ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿದೆ. ಬಹಳ ಜನರಿಗೆ ರೋಗದ ಗುಣಲಕ್ಷಣಗಳೇ ಇರುವುದಿಲ್ಲ. ಹೀಗಾಗಿ, 30 ವರ್ಷ ದಾಟಿದ ಮೇಲೆ ರೋಗ ಲಕ್ಷಣ ಇರಲಿ, ಇಲ್ಲದಿರಲಿ ಪ್ರತಿ ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಡಯಾಬಿಟೀಸ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಡಾ.ವಿನೋದ್ ಬಾಬು ಸಲಹೆ ನೀಡಿದರು.

Last Updated : Nov 14, 2021, 11:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.