ETV Bharat / city

ಬಾಕಿ ಉಳಿಸಿಕೊಂಡ ಎರಡು ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿ: ಸಚಿವ ಮುನೇನಕೊಪ್ಪ - ಕಬ್ಬು ಬೆಳೆಗಾರರ ಬಾಕಿ ಪಾವತಿ

ಕಬ್ಬು ಬೆಳೆಗಾರರಿಗೆ ಪಾವತಿ ಬಾಕಿ ಇಟ್ಟುಕೊಂಡು ಸತಾಯಿಸುತ್ತಿದ್ದ ಎರಡು ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಒಟ್ಟು 42.17 ಕೋಟಿ ರೂ. ಬಾಕಿ ಪೈಕಿ 26. 26 ಕೋಟಿ ರೂ. ಪಾವತಿಯಾಗಿದ್ದು, 15.91 ಕೋಟಿ ರೂ. ಬಾಕಿ ಇದೆ. ಈ ಪೈಕಿ ಬಸವೇಶ್ವರ ಶುಗರ್ಸ್ 9.50 ಕೋಟಿ ರೂ., ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಯಿಂದ 6.41 ಕೋಟಿ ರೂ. ಬಾಕಿ ಇದೆ.

Shankar Patil Munenakoppa
ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ
author img

By

Published : Oct 5, 2021, 12:47 PM IST

ಬೆಂಗಳೂರು: ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗೋದು ಬೇಡ, ಸಮಸ್ಯೆಯನ್ನು ಶೀಘ್ರ ಪರಿಹರಿಸೋದಾಗಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭರವಸೆ ನೀಡಿದ್ದಾರೆ. ಇದ್ರ ಜೊತೆಗೆ, ಕಬ್ಬು ಬೆಳೆಗಾರರಿಗೆ ಪಾವತಿ ಬಾಕಿ ಇಟ್ಟುಕೊಂಡು ಸತಾಯಿಸುತ್ತಿದ್ದ ಎರಡು ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ವಿಕಾಸಸೌಧದಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಸಚಿವರು, ರೈತರ ಹಣ ಬಾಕಿ ಪಾವತಿ ಬಗ್ಗೆ ಬೆಳಗಾವಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಸಿದ್ದೇವೆ. ಕಾರ್ಖಾನೆ ಮಾಲೀಕರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ರೈತರಿಗೆ ಬಾಕಿ ಇರುವ ಹಣ ನೀಡಲು ಸೂಚನೆ ನೀಡಲಾಗಿತ್ತು. ಈ ವರ್ಷ 42.17 ಕೋಟಿ ರೂ. ಮೊತ್ತ ಬಾಕಿ ಇತ್ತು. ಸೂಚನೆ ಹಿನ್ನೆಲೆ, ಕಾರ್ಖಾನೆಗಳು ಮೂರು ದಿನಗಳ ಒಳಗಾಗಿ 26.26 ಕೋಟಿ ರೂ. ಜಮೆ ಮಾಡಿವೆ ಎಂದು ತಿಳಿಸಿದರು.

ಬಾಕಿ ಎಷ್ಟು?:

ಒಟ್ಟು 42.17 ಕೋಟಿ ರೂ. ಬಾಕಿ ಪೈಕಿ 26. 26 ಕೋಟಿ ರೂ. ಪಾವತಿಯಾಗಿದ್ದು, 15.91 ಕೋಟಿ ರೂ. ಬಾಕಿ ಇದೆ. ಈ ಪೈಕಿ ಬಸವೇಶ್ವರ ಶುಗರ್ಸ್ 9.50 ಕೋಟಿ ರೂ., ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಯಿಂದ 6.41 ಕೋಟಿ ರೂ. ಬಾಕಿ ಇದೆ. ಈ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗೋದು ಬೇಡ. ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡುತ್ತೇನೆ. ರೈತರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ ಸಚಿವರು, ಎಫ್ ಆರ್ ಪಿ ದರ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಬೇಕಾಗುತ್ತದೆ. ನಾನು ಸಚಿವನಾದ ಮೇಲೆ ಎರಡು ಬಾರಿ ಕೇಂದ್ರ ಸಕ್ಕರೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ನಾನು ಸಚಿವನಾದ ಮೇಲೆ ಮೊದಲ ಹೆಜ್ಜೆ ಇಟ್ಟಿದ್ದೇನೆ, ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ಸರ್ಕಾರ ನೋಟಿಸ್ ಕೊಟ್ಟ ಮೇಲೆ 5 ಕಾರ್ಖಾನೆಗಳು ಬಾಕಿಯಿದ್ದ ಹಣ ಪೂರ್ತಿ ಮಾಡಿವೆ. ಇನ್ನೂ ಸಕ್ಕರೆ ಉದ್ಯಮ ನಷ್ಟದಲ್ಲೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಏಕಕಾಲಕ್ಕೆ ಕಬ್ಬಿನ ಕಾರ್ಖಾನೆಗಳ ಪ್ರಾರಂಭ:

ಇನ್ನು ಮುಂದೆ ರಾಜ್ಯದಲ್ಲಿ ಏಕಕಾಲಕ್ಕೆ ಕಬ್ಬಿನ ಕಾರ್ಖಾನೆಗಳನ್ನು ಪ್ರಾರಂಭ ಮಾಡಬೇಕು. ಈ‌ ಬಗ್ಗೆ ಈಗಾಗಲೇ ಎಲ್ಲ ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಮಾತಾಡಿದ್ದೇನೆ. ಕೆಲವರು ತಮಗೆ ಬೇಕಾದ ಸಮಯದಲ್ಲಿ ಕಾರ್ಖಾನೆ ಪ್ರಾರಂಭ ಮಾಡ್ತಾರೆ. ಇದರಿಂದ ಅನೇಕ ಸಮಸ್ಯೆ ಆಗುತ್ತಿದೆ. ಹೀಗಾಗಿ ಎಲ್ಲಾ ಕಾರ್ಖಾನೆಗಳಿಗೆ ಏಕ ಕಾಲಕ್ಕೆ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಮತ್ತೊಂದು ಸಭೆ ಮಾಡಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆಂದು ಭರವಸೆ ನೀಡಿದರು.

ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರವಾಗಿ ಮಾತನಾಡಿದ ಅವರು, ರೈತರ ಹಿತ ಕಾಪಾಡುತ್ತೇವೆ‌. ಕೆಲವರು ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಪ್ರತಿಷ್ಠೆಗೆ ಬಿದ್ದಿದ್ದಾರೆ. ಕೆಲವರು ಖಾಸಗಿಯವರಿಗೆ ಕೊಡಿ ಅಂತ ಒತ್ತಾಯ ಮಾಡಿದ್ದಾರೆ. ಮತ್ತೆ ಕೆಲವರು ಸರ್ಕಾರವೇ ನಡೆಸಲಿ ಎಂದು ಒತ್ತಾಯ ಮಾಡಿದ್ದಾರೆ. ಈವರೆಗೆ ಮೈಶುಗರ್ ಸಕ್ಕರೆ ಕಾರ್ಖಾನೆಗೆ 550 ಕೋಟಿ ರೂ. ಹಣ ನೀಡಲಾಗಿದೆ. ಅದೆಲ್ಲ ಲೆಕ್ಕ ಬರಬೇಕು. ಕ್ಯಾಬಿನೆಟ್​ನಲ್ಲಿ ಇಟ್ಟು ಚರ್ಚೆ ಮಾಡಿ ನಿರ್ಧಾರ ಮಾಡಬೇಕಿದೆ. ಕೆಲವು ಆಂತರಿಕ ವಿಚಾರದ ಚರ್ಚೆ ಮಾಡಿ ಮುಂದೆ ಕ್ಯಾಬಿನೆಟ್​ನಲ್ಲಿ ನಿರ್ಧಾರ ಮಾಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ಕಬ್ಬಿನ ಬಿಲ್​ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ 3 ದಿನಗಳ ಡೆಡ್​ಲೈನ್​: ಸಚಿವ ಮುನೇನಕೊಪ್ಪ

ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು:

ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಬೆಳಗಾವಿ- 0.69 ಕೋಟಿ ರೂ., ಜಮಖಂಡಿ ಶುಗರ್ಸ್ ಬಾಗಲಕೋಟೆ - 1.05 ಕೋಟಿ ರೂ., ನಿರಾಣಿ ಶುಗರ್ಸ್ - 5.67 ಕೋಟಿ ರೂ., ಸಾಯಿಪ್ರಿಯ ಶುಗರ್ಸ್ - 4.15 ಕೋಟಿ ರೂ., ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ- 2.09 ಕೋಟಿ ರೂ.ನಷ್ಟು ಪಾವತಿ ಬಾಕಿ ಇತ್ತು. ಒಟ್ಟು 7 ಕಾರ್ಖಾನೆಗಳಿಂದ 42.17 ಕೋಟಿ ಕಬ್ಬು ಬೆಳೆಗಾರರಿಗೆ ಪಾವತಿಯಾಗದೆ ಬಾಕಿ ಉಳಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.