ETV Bharat / city

ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ : ಟ್ರಾವೆಲ್ಸ್​ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ - money from travelers

ದುಪ್ಪಟ್ಟು ಹಾಗೂ ಡೈನಾಮಿಕ್ ದರಗಳ ವಸೂಲಿ ಮಾಡುತ್ತಿಲ್ಲ. ಕೆಲ ಮಾಲೀಕರಿಗೆ ಎಷ್ಟು ದರ ನಿಗದಿ‌ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ‌. ಆದರೆ, ಮುಂದಿನ ಹಬ್ಬದ ದಿನಗಳಲ್ಲಿ ಬಸ್​ಗಳ ಕೊರತೆ ಉಂಟಾದರೆ ಪ್ರಯಾಣದ ದರ ಹೆಚ್ಚಿಸುತ್ತೇವೆ..

ರಾಧಾಕೃಷ್ಣ ಹೊಳ್ಳ
ರಾಧಾಕೃಷ್ಣ ಹೊಳ್ಳ
author img

By

Published : Apr 7, 2021, 3:38 PM IST

ಬೆಂಗಳೂರು : ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ. ಮುಂದಿನ ಹಬ್ಬದ ದಿನಗಳಲ್ಲಿ ಬಸ್​ಗಳ ಕೊರತೆ ಉಂಟಾದರೆ ಪ್ರಯಾಣದ ದರ ಹೆಚ್ಚಿಸುತ್ತೇವೆ ಎಂದು ಖಾಸಗಿ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದರು.

ಈ ಕುರಿತು ಮಾತನಾಡಿದ ಅವರು, 15 ದಿನದ ಹಿಂದೆ ಸಾರಿಗೆ ನೌಕರರು ಬಂದ್ ಮಾಡುವುದು ನಿಗದಿಯಾಗಿತ್ತು.‌ ಮಾ.27ಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ಖಾಸಗಿ ಬಸ್ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ನಿನ್ನೆ ರಾತ್ರಿಯಿಂದ ಸುಮಾರು 500ಕ್ಕೂ ಹೆಚ್ಚು ಖಾಸಗಿ ಬಸ್​ಗಳು ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆ ನಡೆಸಿವೆ ಎಂದರು.

ಮೈಸೂರು ರಸ್ತೆಯಲ್ಲೇ 500 ಬಸ್ ಕಾರ್ಯಾಚರಣೆ ನಡೆಸುತ್ತಿವೆ. ಅದರಲ್ಲಿ ಕೇವಲ 100 ಬಸ್​ಗಳಿಗೆ ಪ್ರಯಾಣಿಕರು ಲಭ್ಯವಾಗಿದ್ದಾರೆ. ಮಾಗಡಿ ರಸ್ತೆ ಮತ್ತು ಯಲಹಂಕದಲ್ಲೂ ಇದೇ ಪರಿಸ್ಥಿತಿ ಇದೆ. ಬೆಂಗಳೂರಿನ ಎಲ್ಲ ಭಾಗದಿಂದಲೂ ಖಾಸಗಿ ಮಾಲೀಕರು ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.

ಈಟಿವಿ ಭಾರತದೊಂದಿಗೆ ಜತೆಗೆ ಖಾಸಗಿ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ

ಈಗ ಕಾರ್ಯಾಚರಣೆ ನಡೆಸುತ್ತಿರುವ ಬಹುತೇಕ ಎಲ್ಲಾ ಬಸ್​ಗಳು ಕಾರ್ಪೊರೇಟ್ ಕಂಪನಿ, ಪ್ರವಾಸಕ್ಕೆ ತೆರಳುತ್ತಿದ್ದ ಬಸ್​ಗಳಾಗಿವೆ. ನಿಗದಿತ ದರಗಳ ಬಗ್ಗೆ ಈವರೆಗೂ ನಮಗೆ ಸರ್ಕಾರ ಅಥವಾ ಸಾರಿಗೆ ಇಲಾಖೆಯಿಂದ ಖಚಿತ ಮಾಹಿತಿ ದೊರೆತಿಲ್ಲ ಎಂದರು.

ದುಪ್ಪಟ್ಟು ಹಾಗೂ ಡೈನಾಮಿಕ್ ದರಗಳ ವಸೂಲಿ ಮಾಡುತ್ತಿಲ್ಲ. ಕೆಲ ಮಾಲೀಕರಿಗೆ ಎಷ್ಟು ದರ ನಿಗದಿ‌ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ‌. ಆದರೆ, ಮುಂದಿನ ಹಬ್ಬದ ದಿನಗಳಲ್ಲಿ ಬಸ್​ಗಳ ಕೊರತೆ ಉಂಟಾದರೆ ಪ್ರಯಾಣದ ದರ ಹೆಚ್ಚಿಸುತ್ತೇವೆ ಎಂದರು.

ಇದನ್ನೂ ಓದಿ.. ಶೇ.8ರಷ್ಟು ಸಂಬಳ ಹೆಚ್ಚಿಸಲು ಸರ್ಕಾರ ಬದ್ಧ, ಮುಷ್ಕರ ಕೈಬಿಡದಿದ್ರೆ ಕಠಿಣ ಕ್ರಮ: ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.