ETV Bharat / city

ಕಲಾಪ ನಡೆಸುವುದು ಬೇಡ ನಡೀರಿ, ಎಲ್ಲರೂ ಪಿಕ್ನಿಕ್​​​​​ಗೆ ಹೋಗೋಣ : ಸಿದ್ದರಾಮಯ್ಯ ಮತ್ತೆ ಅಸಮಾಧಾನ..!

author img

By

Published : Feb 4, 2021, 5:11 PM IST

ಹೌದು ಸರಿಯಾಗಿ ಮಾತನಾಡುವವರು ಯತ್ನಾಳ್ ಒಬ್ಬರೇ ಎಂದು ಯತ್ನಾಳ್ ಪರ ಬ್ಯಾಟ್ ಬೀಸಿದರು. ನಂತರ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ನಾನು ಎಲ್ಲಾ ಸಚಿವರು ಇರುವಂತೆ ನೋಡಿಕೊಳ್ಳುತ್ತೇನೆ ಎಂದರು. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಸ್ಪೀಕರ್, ಸಚಿವರು ಸದನಕ್ಕೆ ಬಂದರೆ ಅವರ ಚೇಂಬರ್‌ನಲ್ಲಿ ಇರುವ ಶಾಸಕರು ಕೂಡಾ ಸದನಕ್ಕೆ ಬರುತ್ತಾರೆ. ಎಲ್ಲ ಸಚಿವರು ಅಧಿಕಾರಿಗಳು ಸದನದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದರು.

no-need-to-run-a-session-lets-us-go-picnic
ವಿಧಾನಸಭೆ ಕಲಾಪ

ಬೆಂಗಳೂರು: ವಿಧಾನಸಭೆ ಕಲಾಪ ನಡೆಸುವುದು ಬೇಡ ನಡೀರಿ, ಎಲ್ಲರೂ ಪಿಕ್ನಿಕ್​​​​ಗೆ ಹೋಗೋಣ ಎಂದು ಸದನದಲ್ಲಿ ಸಚಿವರು, ಅಧಿಕಾರಿಗಳ ಗೈರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಕಲಾಪ

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ಶಾಸಕರು ಮಾತನಾಡುತ್ತಿದ್ದ ವೇಳೆ ಡಿಸಿಎಂ ಗೋವಿಂದ ಕಾರಜೋಳ ಹೊರತುಪಡಿಸಿ ಯಾವೊಬ್ಬ ಸಚಿವರು ಇರಲಿಲ್ಲ. ಜೊತೆಗೆ ಅಧಿಕಾರಿಗಳು ಸಾಕಷ್ಟು ಮಂದಿ ಗೈರಾಗಿದ್ದರು. ಆಗ ಎದ್ದು ನಿಂತ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಚಿವರು, ಅಧಿಕಾರಿಗಳು ಇರಬೇಕು‌. ಇವರು ಇಲ್ಲದೇ ಚರ್ಚೆ ಮಾಡಿ ಏನು ಪ್ರಯೋಜನ?. ಅಸೆಂಬ್ಲಿ ಇಂದೇ ಮುಗಿಸಿ ಪಿಕ್ ನಿಕ್​ಗೆ ಹೋಗೊಣ ಎಂದು ಸ್ಪೀಕರ್ ಅವರಿಗೆ ಹೇಳಿದರು.

ಮಂತ್ರಿಯಾಗಲು ದೆಹಲಿಗೆ ಹೋಗುತ್ತಾರೆ, ಸಚಿವರಾದ ಮೇಲೆ ಸದನಕ್ಕೆ ಚಕ್ಕರ್ : ಆಗ ಸಿದ್ದರಾಮಯ್ಯ ಮಾತಿಗೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಂತ್ರಿಗಳಾಗುವುದಕ್ಕೆ ದೆಹಲಿ, ಬೆಂಗಳೂರಿನ ಸಿಎಂ ಮನೆಗೆ ಅಡ್ಡಾಡ್ತಾರೆ, ಮಂತ್ರಿ ಆದ ಮೇಲೆ ಸದನಕ್ಕೆ ಬರೋದಿಲ್ಲ. ಇಲ್ಲಿ ಸಿಎಂ ಇಲ್ಲ, ಸಚಿವರೂ ಇಲ್ಲ ಎಂದು ಯತ್ನಾಳ್ ಚುಚ್ಚಿದರು.

ಯತ್ನಾಳ್ ಮಾತಿನ ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಅಧಿಕಾರಿಗಳು ಇಲ್ಲ, ಸಚಿವರೂ ಇಲ್ಲ, ಕಾರಜೋಳ ಒಬ್ಬರೇ ಇದ್ದೀರಲ್ಲಾ, ಏನು ಎಲ್ಲದಕ್ಕೂ ನಿಮ್ಮಿಂದ ಉತ್ತರ ಕೊಡೋಕೆ ಆಗುತ್ತಾ? ಏನು ಸಚಿವರಾಗೋ ತನಕ ಲಾಬಿ ಏನು? ಓಡಾಡೋದು ಏನು? ಏನ್ರೀ ಯತ್ನಾಳ್ರೇ ಎಂದು ಸಿದ್ದರಾಮಯ್ಯ ಕೆಣಕಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯನವರೇ ನೀವು ಹೇಳೋದಲ್ಲದೇ ಯತ್ನಾಳ್​ರನ್ನು ಕರೀತೀರಾ ಎಂದರು.

ಆಗ ಸಿದ್ದರಾಮಯ್ಯ, ಹೌದು ಸರಿಯಾಗಿ ಮಾತನಾಡುವವರು ಯತ್ನಾಳ್ ಒಬ್ಬರೇ ಎಂದು ಯತ್ನಾಳ್ ಪರ ಬ್ಯಾಟ್ ಬೀಸಿದರು. ನಂತರ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ನಾನು ಎಲ್ಲಾ ಸಚಿವರು ಇರುವಂತೆ ನೋಡಿಕೊಳ್ಳುತ್ತೇನೆ ಎಂದರು. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಸ್ಪೀಕರ್, ಸಚಿವರು ಸದನಕ್ಕೆ ಬಂದರೆ ಅವರ ಚೇಂಬರ್‌ನಲ್ಲಿ ಇರುವ ಶಾಸಕರು ಕೂಡಾ ಸದನಕ್ಕೆ ಬರುತ್ತಾರೆ. ಎಲ್ಲ ಸಚಿವರು ಅಧಿಕಾರಿಗಳು ಸದನದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದರು.

ಗರಂ ಆದ ಮಾಜಿ ಸ್ಪೀಕರ್ ರಮೇಶ್ ಕುಮಾರ್ : ಸಚಿವರು ಆರಂಭದಲ್ಲಿ ಪೂರ್ಣ ಚಂದ್ರರಂತೆ ಇದ್ರು, ಈಗ ಅಮಾವಾಸ್ಯೆ ಹತ್ತಿರ ಬಂದ ಚಂದ್ರನಂತೆ ಆಗಿದ್ದಾರೆ‌. ಸಚಿವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟೀಕಿಸಿದರು. ನಾವಿದ್ದಾಗಲೂ ಹೀಗೇ ಇತ್ತು. ಸದನಕ್ಕೆ ಬರಲು ವ್ಯವದಾನ ಇಲ್ಲದವರು ಯಾಕೆ ಬರ್ತೀರಿ, ಬರಲೇ ಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಪುಟ ದರ್ಜೆಯ ಸಚಿವರಿಗೆ ಅನುಭವ ಇರಬೇಕು. ನಿಯಮಾವಳಿಗಳ ಬಗ್ಗೆ ಮಾಹಿತಿ ಇರಬೇಕು. ಆದರೆ, ನಮ್ಮಲ್ಲಿ ಎಲ್ಲರೂ ಸಂಪುಟ ಸಚಿವರೇ? ಈ ಸಂಪುಟ ದರ್ಜೆ ಸಚಿವರು ಲೈಬ್ರೆರಿಗೂ ಹೋಗುವುದಿಲ್ಲ, ಇಲಾಖೆ ಮಾಹಿತಿಯೂ ಹೊಂದಿಲ್ಲ, ನಿಯಮಾವಳಿಗಳ ಬಗ್ಗೆಯೂ ತಿಳಿದಿಲ್ಲ, ಸಂವಿಧಾನ, ನಿಯಮಾವಳಿಗಳ‌ ಅರಿವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.