ETV Bharat / city

ಕೋರ್ಟ್ ಅನುಮತಿ ಇಲ್ಲದೆ ಯಾವುದೇ ಕೇಸ್ ಹಿಂಪಡೆಯಲ್ಲ: ಸಚಿವ ಮಾಧುಸ್ವಾಮಿ

ಸಾರ್ವಜನಿಕ ಆಸ್ತಿಗೆ ಹಾನಿ, ಕೊಲೆ ಯತ್ನದ ಕೇಸ್​ಗಳನ್ನು ವಾಪಸ್ ಪಡೆಯೋದಿಲ್ಲ ಎಂದು ಸಚಿವ ಜೆ ಸಿ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Minister J C Madhuswamy
ಸಚಿವ ಜೆ ಸಿ ಮಾಧುಸ್ವಾಮಿ
author img

By

Published : Aug 12, 2022, 10:26 PM IST

ಬೆಂಗಳೂರು: ಶಾಸಕರ ಮೇಲಿನ ಕೇಸ್ ವಾಪಸ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ನಾನೇ ಉಪಸಮಿತಿಯ ಅಧ್ಯಕ್ಷನಾಗಿದ್ದು, ಕೋರ್ಟ್ ಅನುಮತಿ ಇಲ್ಲದೆ ಯಾವುದೇ ಕೇಸ್ ಹಿಂಪಡೆಯಲ್ಲ ಎಂದರು.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕ ಆಸ್ತಿಗೆ ಹಾನಿ, ಕೊಲೆ ಯತ್ನದ ಕೇಸ್​ಗಳನ್ನು ವಾಪಸ್ ಪಡೆಯೋದಿಲ್ಲ.‌ ಪೊಲೀಸ್ ಇಲಾಖೆ ವಾಪಸ್ ಪಡೆಯಬೇಡಿ ಅನ್ನುತ್ತದೆ. ವಾಪಸ್ ಪಡೆಯಿರಿ ಅಂತ ಎಲ್ಲೂ ಹೇಳಲ್ಲ. ಸರ್ಕಾರವೇ ಇದಕ್ಕೂ ಮೀರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಸಚಿವ ಜೆ ಸಿ ಮಾಧುಸ್ವಾಮಿ ಮಾತನಾಡಿದರು.

ಸಂಘಟನೆಗಳ ಕೇಸ್ ವಾಪಸ್ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ರೈತರು, ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಾರೆ. ಪ್ರತಿಭಟನೆ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ನಾವು ಈ ಹಿಂದಿನ 30 ಕೇಸ್ ಡಿಸ್‌ಪೋಸ್ ಮಾಡಿದ್ದೇವೆ. ನಾವು ವಿತ್ ಡ್ರಾ ಮಾಡಿ ಶಿಫಾರಸು ಮಾಡ್ತೇವೆ. ಕೋರ್ಟ್ ಅದನ್ನು ಒಪ್ಪಿಕೊಳ್ಳಬೇಕು. ಹಾಗಾದರೆ ಮಾತ್ರ ಅದು ವಾಪಸ್ ಆಗಲಿದೆ ಎಂದು ಹೇಳಿದರು.

ಲಂಚ, ಮಂಚದ ಬಗ್ಗೆ ಶಾಸಕ ಪ್ರಿಯಾಂಕಾ ಖರ್ಗೆ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಅವರ ಮಾತಿಗೆ ದಾಖಲೆ ಕೊಟ್ಟು ಮಾತಾಡಲಿ ಎಂದರು.

ಇದನ್ನೂ ಓದಿ: ಒಬ್ಬ ಮಾಜಿ ಎಂಎಲ್​ಎ ಹೇಳಿದ್ರೆ ಸಿಎಂ ಬದಲಾಗ್ತೇರೇನ್ರಿ?: ಸಚಿವ ಮಾಧುಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.