ಬೆಂಗಳೂರು : ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದು ಮಾದಕ ದಂಧೆ ಆರಂಭಿಸಿದ್ದ ಆರೋಪಿಯನ್ನ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಬಂಧಿಸಿದೆ. ನೈಜೀರಿಯಾ ಮೂಲದ ಕ್ಲಿಂಟನ್ ಕೋಸಿ ಇಫೆಜಿಕಾ ಬಂಧಿತ ಆರೋಪಿ.
ಸುಲಭವಾಗಿ ಹಣ ಗಳಿಸಲು ಮಾದಕ ಪದಾರ್ಥ ಮಾರಾಟದ ಹಾದಿ ಹಿಡಿದಿದ್ದ ಆರೋಪಿ ದೆಹಲಿಯಲ್ಲಿರುವ ನೈಜೀರಿಯಾ ಮೂಲದ ವ್ಯಕ್ತಿಯಿಂದ ವಿವಿಧ ಮಾದಕ ಪದಾರ್ಥಗಳನ್ನ ಖರೀದಿಸಿ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಹೀಗೆ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯೊಳಗೆ ದಂಧೆಯಲ್ಲಿ ನಿರತನಾಗಿದ್ದಾಗ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 45 ಲಕ್ಷ ಮೌಲ್ಯದ 221ಗ್ರಾಂ ಎಂಡಿಎಂಎ, ಒಂದು ಕಾರು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಭೀಕರ ಅಪಘಾತ : ಹೊತ್ತಿ ಉರಿದ ಬಸ್ನಲ್ಲಿ 8 ಜನ ಸಜೀವ ದಹನ ಶಂಕೆ!