ಬೆಂಗಳೂರು: ಲಾಕೌಡೌನ್ ಸಂದರ್ಭ ಅನಗತ್ಯವಾಗಿ ಸಂಚಾರ ಮಾಡಿದ್ದ 40 ಸಾವಿರಕ್ಕೂ ಹೆಚ್ಚಿನ ವಾಹನಗಳು ಜಪ್ತಿಯಾಗಿವೆ. ಆದರೆ ಸದ್ಯ ದಾಖಲಾತಿಗಳನ್ನ ನೀಡಿದರೆ ಮಾತ್ರ ವಾಹನಗಳನ್ನ ಪಡೆಯಬಹುದೆಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಈಗಾಗಲೇ ಹಲವು ಜನರು ದಾಖಲೆಗಳನ್ನು ನೀಡಿ ತಮ್ಮ ವಾಹನ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇನ್ನುಳಿದ ವಾಹನ ಸವಾರರು ಸರಿಯಾದ ದಾಖಲಾತಿಗಳಿಲ್ಲದೆ ಆರ್ಟಿಒ ಕಚೇರಿಯತ್ತ ಮುಖ ಮಾಡಿದ್ದಾರೆ. ಆದ್ರೆ ಲಾಕ್ಡೌನ್ ಹಿನ್ನೆಲೆ ಆರ್ಟಿಒ ಕಚೇರಿಯ ಕೆಲಸಗಳು ಸ್ಥಗಿತವಾಗಿವೆ.
ಆರ್ಟಿಒ ಇನ್ಸ್‌ಪೆಕ್ಟರ್ ರಾಜಣ್ಣ ಮಾತನಾಡಿ, ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ವಿಳಾಸ ಬದಲಾವಣೆ, ವಾಹನ ನೋಂದಣಿ ಕಾರ್ಯವನ್ನು ಮಾತ್ರ ಮಾಡುತ್ತಿದ್ದೇವೆ. ಲೈಸನ್ಸ್, ಡಿಎಲ್ ಸಂಬಂಧಿತ ಯಾವುದೇ ಕೆಲಸ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕಾರ್ಯದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದರು.