ETV Bharat / city

ಸ್ವಾತಂತ್ರ್ಯ ಅಮೃತ ಮಹೋತ್ಸವ: ತಿರಂಗಾ ಹಾರಿಸುವ ಮುನ್ನ, ಹಾರಿಸಿದ ನಂತರ ರಾಷ್ಟ್ರಧ್ವಜದ ಘನತೆ ಬಗ್ಗೆ ಎಚ್ಚರವಿರಲಿ - ತಿರಂಗ ಬಾವುಟ ಹಾರಿಸುವ ಮುನ್ನ ಪಾಲಿಸಬೆಕಾದ ನಿಯಮಗಳು

ದೇಶದ ಧ್ವಜವೆಂದರೆ ಅದು ನಮ್ಮೆಲ್ಲರ ಹೆಮ್ಮೆ. ಎಲ್ಲದಕ್ಕಿಂತ ರಾಷ್ಟ್ರಧ್ವಜದ ಪಾವಿತ್ರ್ಯತೆ ಅತ್ಯಂತ ಮುಖ್ಯವಾದದ್ದು. ಆದರೆ, ಈ ಬಾರಿ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಈ ನಿಯಮ ಸಡಿಲ ಮಾಡಲಾಗಿದೆ. ತಿರಂಗ ಹಾರಿಸುವ ಮುನ್ನ, ಹಾರಿಸಿದ ನಂತರ ಯಾವೆಲ್ಲಾ ನಿಯಮಗಳನ್ನ ಪಾಲಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

ತಿರಂಗ
Tiranga Flag code
author img

By

Published : Aug 13, 2022, 9:12 AM IST

ಬೆಂಗಳೂರು: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಸಡಗರ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಕೇಂದ್ರ ಸರ್ಕಾರದ ಕರೆಯಂತೆ ಮನೆ, ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿರುವ ತಿರಂಗಾ ಹಾರಿಸಿ ದೇಶಭಕ್ತಿ ವ್ಯಕ್ತಪಡಿಸಲು ಎಲ್ಲರೂ ಕಾತರರಾಗಿದ್ದಾರೆ. ಈ ಅತ್ಯುತ್ಸಾಹದ ನಡುವೆ ರಾಷ್ಟ್ರಧ್ವಜ ಹಾರಿಸುವಾಗ ಅರಿವಿಗೆ ಬಾರದಂತೆ ಎಡವಟ್ಟುಗಳಾಗಿ ಪವಿತ್ರವಾದ ಧ್ವಜಕ್ಕೆ ಅವಮಾನ ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಕೇಂದ್ರ ಸರ್ಕಾರವು ರಾಷ್ಟ್ರದ್ವಜ ಸಂಹಿತೆಗೆ ಕೆಲವು ತಿದ್ದುಪಡಿಗಳನ್ನು ತಂದಿದ್ದು, ಆ ಪ್ರಕಾರ ತಿರಂಗ ಬಾವುಟ ಹಾರಿಸುವ ಮುನ್ನ ಪಾಲಿಸಬೆಕಾದ ನಿಯಮಗಳು ಹಾಗೂ ದ್ವಜಾರೋಹಣದ ನಂತರ ಅನುಸರಿಸಬೆಕಾದ ನಿಯಮಗಳು ಯಾವವು ಎನ್ನುವುದನ್ನ ನೀಡಲಾಗಿದೆ. ಧ್ವಜಾರೋಹಣ ನೆರವೇರಿಸುವವರು ತಪ್ಪದೇ ಧ್ವಜ ಸಂಹಿತೆಯ ಈ ನಿಯಮಗಳನ್ನು ಅಳವಡಿಸಿಕೊಂಡು ರಾಷ್ಟ್ರಧ್ವಜದ ಘನತೆ ಕಾಪಾಡಬೇಕಾಗಿದೆ.

ಈ ಮೊದಲು ರಾಷ್ಟ್ರದ್ವಜವನ್ನು ಬೆಳಗ್ಗೆ ಹಾರಿಸಿ ಸಂಜೆ ವೇಳೆಗೆ ಕೆಳಗಿಳಿಸಬೇಕಿತ್ತು. ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಧ್ವಜ ಸಂಹಿತೆಯ ಕಲಂ 11 ರ ಪ್ಯಾರಗ್ರಾಫ್ 2.2 ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವ ಪ್ರಕಾರ, ಜನ ಸಾಮಾನ್ಯರು ತಮ್ಮ ಮನೆಗಳಲ್ಲಿ ಹಗಲಿರಳು ಧ್ವಜ ಹಾರಿಸಬಹುದಾಗಿದೆ.

ರಾಷ್ಟ್ರಧ್ವಜ ಸಂಹಿತೆ ಪ್ರಕಾರ ಸರ್ವರೂ ಧ್ವಜ ಹಾರಿಸುವ ಮುನ್ನ ಮತ್ತು ಧ್ವಜ ಹಾರಿಸಿದ ನಂತರ ಎಚ್ಚರಿಕೆ ವಹಿಸಬೆಕಾದ ಅಂಶಗಳು ಹೀಗಿವೆ:

1) ಧ್ವಜ ಹಾರಿಸುವಾಗ ಕೇಸರಿ ಬಣ್ಣ ಮೇಲಿರಬೇಕು. ಹಸಿರು ಬಣ್ಣ ಕೆಳಗಿರಬೇಕು.
2) ಧ್ವಜ ತಲೆಕೆಳಗಾಗಿ ಅಂದರೆ ಹಸಿರು ಬಣ್ಣ ಮೇಲಿರುವಂತೆ, ಕೇಸರಿ ಬಣ್ಣ ಕೆಳಗೆ ಮಾಡಿ ಹಾರಿಸಬಾರದು.
3) ಹರಿದಿರುವ, ಧಕ್ಕೆಯಾಗಿರುವ ಧ್ವಜ ಹಾರಿಸಲೇಬಾರದು
4) ರಾಷ್ಟ್ರದ ಧ್ವಜವನ್ನು ಅಲಂಕಾರಿಕ ವಸ್ತುವಂತೆ ಉಪಯೋಗಿಸುವಂತಿಲ್ಲ
5) ರಾಷ್ಟ್ರ ಧ್ವಜ ಹಾರಾಡುವಾಗ ಅದಕ್ಕೆ ಎತ್ತರದಲ್ಲಿ ಬೇರಾವುದೇ ಧ್ವಜ ಹಾರಿಸುವಂತಿಲ್ಲ
6) ನಾವು ತೊಡುವ ಬಟ್ಟೆಯಲ್ಲಿ ರಾಷ್ಟ್ರ ಧ್ವಜವನ್ನು ಸೊಂಟಕ್ಕಿಂತ ಕೆಳಭಾಗದಲ್ಲಿ ಉಪಯೋಗಿಸುವಂತಿಲ್ಲ
7) ಧ್ವಜವನ್ನು ಕತ್ತರಿಸಿ ಉಪಯೋಗಿಸುವಂತಿಲ್ಲ
8) ಧ್ವಜವನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ತಾಕಿಸುವಂತಿಲ್ಲ
9) ಅಕಸ್ಮಾತ್ ಧ್ವಜ ಹರಿದರೆ ಅಥವಾ ಹಳತಾದರೆ ಅದನ್ನು ಯಾರಿಗೂ ಕಾಣದಂತೆ ಖಾಸಗಿಯಾಗಿ ಅಗ್ನಿಗೆ ಅರ್ಪಿಸಬೇಕು
10) ಯಾವುದೇ ಕಾರಣಕ್ಜೂ ಧ್ವಜವನ್ನ ರಸ್ತೆಯಲ್ಲಿ. ತೊಟ್ಟಿಯಲ್ಲಿ ಬೀಸಾಡುವಂತಿಲ್ಲ.

ರಾಷ್ಟ್ರದ ಧ್ವಜವು ದೇವರ ಪ್ರತಿಮೆಯಷ್ಟೇ ಪವಿತ್ರವಾಗಿದ್ದು, ಅದನ್ನ ಎಲ್ಲೆಂದರಲ್ಲಿ ಇಡುವಂತಿಲ್ಲ, ಬೀಸಾಡುವಂತಿಲ್ಲ. ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ಧ್ವಜ ಹಾರಿಸಿದ ಮೇಲೆ ಅದನ್ನ ಜೋಪಾನವಾಗಿ ಮನೆಯಲ್ಲೇ ಎತ್ತಿಡಿ. ಧ್ವಜವನ್ನ ಬೀದಿಗಳಲ್ಲಿ ಬಿಸಾಡಬಾರದು. ಈ ಎಲ್ಲ ಅಪಾಯದ ಬಗ್ಗೆ ನಾವು ಎಚ್ಚರ ವಹಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.