ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ನಿರೀಕ್ಷೆಯಿಟ್ಟುಕೊಂಡಿಲ್ಲ, ಆದರೆ ನ್ಯಾಯ ಸಿಗುವುದೆಂಬ ನಂಬಿಕೆ ಇದೆ ಎಂದು ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಅನರ್ಹ ಶಾಸಕರ ಬಗ್ಗೆ ಸುಪ್ರೀಂ ತೀರ್ಪಿಗೂ ಮುನ್ನ ಮಹದೇವಪುರದಲ್ಲಿರುವ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂಟಿಬಿ, ಸುಪ್ರೀಂಕೋರ್ಟ್ನಲ್ಲಿ ತೀರ್ಪು ವ್ಯತಿರಿಕ್ತವಾಗಿ ಬಂದರೆ, ಕಾರ್ಯಕರ್ತರು ಮತ್ತು ಮಗನ ಬಳಿ ಚರ್ಚೆ ನಡೆಸಿ ತೀರ್ಮಾನಿಸುವೆ. ಬಿಜೆಪಿ ನನ್ನ ಬೆನ್ನಿಗೆ ನಿಲ್ಲಲಿದೆ ಎಂದು ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಜನರ ಆಶೀರ್ವಾದ ಬಯಸಿದ ಡಾ ಕೆ. ಸುಧಾಕರ್
ಇತ್ತ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಕೆ ಸುಧಾಕರ್, ಜನರ ಆಶೀರ್ವಾದ ಬಯಸಿ ಟ್ವೀಟ್ ಮಾಡಿದ್ದಾರೆ. ನನಗೆ ನಿಮ್ಮ ಆಶೀರ್ವಾದ ಬೇಕಾಗಿದೆ. ನನ್ನ ವಿಜಯೋತ್ಸವಕ್ಕೆ ಪ್ರಾರ್ಥಿಸಿ, ನನ್ನ ಕ್ಷೇತ್ರ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ನನ್ನ ಸೇವೆಯನ್ನು ಅರ್ಪಿಸುತ್ತೇನೆ. ಈ ನಿಟ್ಟಿನಲ್ಲಿ ನನಗೆ ಇನ್ನಷ್ಟು ಸರ್ವಶಕ್ತಿಯನ್ನು ನೀಡಿ ಆಶೀರ್ವದಿಸಲು ಬೇಡುತ್ತೇನೆ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.