ETV Bharat / city

ನಾಳೆಯಿಂದ ಎಂಎಸ್​ಪಿ ಖರೀದಿ ಶುರು.. ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸಚಿವ ಉಮೇಶ್​ ಕತ್ತಿ ಸೂಚನೆ..

ಪ್ರತಿ ಕ್ವಿಂಟಲ್ ಮಾಲ್ದಂಡಿ ಬಿಳಿ ಜೋಳಕ್ಕೆ 2758 ರೂಪಾಯಿ, ಹೈಬ್ರೀಡ್ ಬಿಳಿ ಜೋಳಕ್ಕೆ 2738 ರೂಪಾಯಿ, ಗ್ರೇಡ್ ಎ ಭತ್ತಕ್ಕೆ 1960 ರೂಪಾಯಿ, ಸಾಮಾನ್ಯ ಗ್ರೇಡ್ ಭತ್ತಕ್ಕೆ 1940 ರೂಪಾಯಿ ಹಾಗೂ ರಾಗಿಗೆ 3377 ರೂಪಾಯಿ ದರ ನಿಗದಿ ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ..

umesh katti
ಉಮೇಶ್​ ಕತ್ತಿ ಸೂಚನೆ
author img

By

Published : Dec 31, 2021, 7:07 PM IST

ಬೆಂಗಳೂರು : ಜನವರಿ 1ರಿಂದ ಮಾರ್ಚ್ 31ರವರೆಗೆ ಎಂಎಸ್​ಪಿ ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಹಣ ನೇರವಾಗಿ ರೈತರ ಖಾತೆಗೆ ಜಮೆ ಆಗುವ ಪ್ರಕ್ರಿಯೆ ಇದಾಗಿದೆ. ಆದಷ್ಟು ಹೆಚ್ಚಿನ ರೈತರಿಗೆ ಈ ಯೋಜನೆಯ ಲಾಭ ಸಿಗುವಂತೆ ಕೆಲಸ ಮಾಡಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ ರೈತರಿಗೆ ಅನಕೂಲವಾಗುವ ದೃಷ್ಟಿಯಿಂದ ಎಂಎಸ್​ಪಿ ಯೋಜನೆ ಅಡಿಯಲ್ಲಿ ರಾಗಿ, ಜೋಳ ಹಾಗೂ ಭತ್ತ ಖರೀದಿ ಪ್ರಕ್ರಿಯೆ ರಾಜ್ಯಾದ್ಯಂತ ನಾಳೆಯಿಂದ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಸಂಜೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದರು.

ಎಂಎಸ್​ಪಿ ಯೋಜನೆ ರಾಜ್ಯದ ರೈತರಿಗೆ ಅನಕೂಲ ಆಗುವ ದೃಷ್ಟಿಯಿಂದ ಆರಂಭಿಸಲಾದ ಯೋಜನೆ. ಈ ಯೋಜನೆಯ ಲಾಭ ರಾಜ್ಯದ ಪ್ರತಿಯೊಬ್ಬ ರೈತರಿಗೂ ಸಿಗುವಂತಾಗಬೇಕು. ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳಿಂದ ಯಾವುದೇ ಕಾರಣಕ್ಕೂ ಖರೀದಿ ಮಾಡಕೂಡದು. ಒಂದು ವೇಳೆ ವ್ಯಾಪಾರಸ್ಥರಿಂದ ಖರೀದಿ ಮಾಡಿದರೆ, ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಪ್ರತಿ ಕ್ವಿಂಟಲ್ ಮಾಲ್ದಂಡಿ ಬಿಳಿ ಜೋಳಕ್ಕೆ 2758 ರೂಪಾಯಿ, ಹೈಬ್ರೀಡ್ ಬಿಳಿ ಜೋಳಕ್ಕೆ 2738 ರೂಪಾಯಿ, ಗ್ರೇಡ್ ಎ ಭತ್ತಕ್ಕೆ 1960 ರೂಪಾಯಿ, ಸಾಮಾನ್ಯ ಗ್ರೇಡ್ ಭತ್ತಕ್ಕೆ 1940 ರೂಪಾಯಿ ಹಾಗೂ ರಾಗಿಗೆ 3377 ರೂಪಾಯಿ ದರ ನಿಗದಿ ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಸಚಿವ ಕತ್ತಿ ತಿಳಿಸಿದರು.

ಇದನ್ನೂ ಓದಿ: ಇನ್ನು ಮುಂದೆ ರೈತರಿಗೆ ಉಚಿತವಾಗಿ ಸಿಗಲಿದೆ ಪಹಣಿ.. ಜನವರಿ 26ರಂದು ಯೋಜನೆಗೆ ಚಾಲನೆ : ಸಚಿವ ಆರ್.ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.