ETV Bharat / city

ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ, ನಾವೆಲ್ಲ ಬಿಎಸ್​​ವೈ ಜೊತೆಗಿದ್ದೇವೆ: ರೇಣುಕಾಚಾರ್ಯ - Cm Change Issue

ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ನಾವು ಯಡಿಯೂರಪ್ಪ ಜೊತೆಗಿದ್ದೇವೆ. ಕೆಲವರಿಗೆ ಪಕ್ಕದ ಕ್ಷೇತ್ರ ಗೆಲ್ಲಿಸುವ ತಾಕತ್ತು ಇಲ್ಲ, ಆದರೂ ಅವರ ಬಗ್ಗೆ ಮಾತನಾಡ್ತಾರೆ. ಯತ್ನಾಳ್ ನಂತವರು ಹುಚ್ಚುಚ್ಚಾಗಿ ಮಾತಾಡ್ತಾರೆ. ಇದನ್ನು ಪ್ರತಿಪಕ್ಷಗಳು ಸದುಪಯೋಗ ಮಾಡಿಕೊಳ್ಳುತ್ತಿವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

MLA MP Renukacharya
ಶಾಸಕ ಎಂ.ಪಿ ರೇಣುಕಾಚಾರ್ಯ
author img

By

Published : Jun 7, 2021, 12:22 PM IST

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ನಾವೆಲ್ಲಾ ಅವರ ಜೊತೆಗಿದ್ದೇವೆ. ಕೊರೊನಾ ಮುಗಿಯುತ್ತಿದ್ದಂತೆ ಶಾಸಕರ ಸಹಿ ಸಂಗ್ರಹ ಪತ್ರವನ್ನು ಹೈಕಮಾಂಡ್​ಗೆ ರವಾನಿಸಿ ನಾಯಕತ್ವದ ವಿರುದ್ಧ ಮಾತನಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಡಿಯೂರಪ್ಪನವರ ಹೇಳಿಕೆಯನ್ನು ಸರಿಯಾಗಿ ಗಮನಿಸಿಲ್ಲ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೆಲವರು ದೆಹಲಿಗೆ ಹೋಗಿ ಏನೇನೋ ಮಾಡೋದು ಸರಿಯಲ್ಲ. ಯಡಿಯೂರಪ್ಪನವರು ಇಳಿ ವಯಸ್ಸಿನಲ್ಲೂ ಸಮರ್ಥವಾಗಿ ಕೋವಿಡ್ ತಡೆಗೆ ಶ್ರಮಿಸುತ್ತಿದ್ದಾರೆ. ಯಾರೋ ಒಂದಿಬ್ಬರು ಅಪಪ್ರಚಾರ ಮಾಡುವ ಕೆಲಸ ಮಾಡ್ತಿದ್ದಾರೆ ಎಂದರು.

ಕೆಲವರಿಗೆ ಪಕ್ಕದ ಕ್ಷೇತ್ರ ಗೆಲ್ಲಿಸುವ ತಾಕತ್ತೂ ಇಲ್ಲ, ಆದರೂ ಅವರ ಬಗ್ಗೆ ಮಾತನಾಡ್ತಾರೆ. ಯತ್ನಾಳರಂಥವರು ಹುಚ್ಚುಚ್ಚಾಗಿ ಮಾತಾಡ್ತಾರೆ. ಇದನ್ನು ಪ್ರತಿಪಕ್ಷಗಳು ಸದುಪಯೋಗ ಮಾಡಿಕೊಳ್ಳುತ್ತಿವೆ ಎಂದು ಟೀಕಿಸಿದರು.

ಯಡಿಯೂರಪ್ಪ ನಾಯಕತ್ವದಲ್ಲೇ, ಸಂಘಟನೆಯಿಂದಲೇ ಚುನಾವಣೆಗೆ ನಿಂತ ಕೆಲವರು ಚುನಾವಣೆಯಲ್ಲಿ ಸೋತು ಕಾಲು ಕೈ-ಹಿಡಿದು ಮಂತ್ರಿ ಆಗಿದ್ದಾರೆ. ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಸೈಕಲ್ ಪಕ್ಷದಿಂದ ನೂರೆಂಟು ಪಕ್ಷ ಸುತ್ತಾಡಿ ಬಂದವರು ಎಂದು ಹೆಸರು ಹೇಳದೇ ಯೋಗೇಶ್ವರ್ ವಿರುದ್ದ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಸಹಿ ಸಂಗ್ರಹವನ್ನು ನಾವೇನು ಕದ್ದು ಮುಚ್ಚಿ ಮಾಡಿಲ್ಲ. ನನ್ನ ಬಳಿ ಶಾಸಕರ ಸಹಿ ಸಂಗ್ರಹ ಪತ್ರ ಇರೋದು ನಿಜ. ನಾನು ನನ್ನ ಆತ್ಮಸಾಕ್ಷಿಯಾಗಿ ಎದೆ ಮುಟ್ಟಿಕೊಂಡು ಹೇಳುತ್ತೇನೆ. ನನ್ನ ಬಳಿ 65ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿರುವ ಪತ್ರ ಇದೆ. ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿ ಮುಂದುವರೆಸುವ ಪತ್ರ ಅದಾಗಿದ್ದು, ಕೊರೊನಾ ಮುಗಿದ ಕೂಡಲೇ ದೆಹಲಿಗೆ ಹೋಗಿ ಹೈಕಮಾಂಡ್ ತಲುಪಿಸುತ್ತೇವೆ. ಅಮಿತ್ ಶಾ ಸೇರಿದಂತೆ ಎಲ್ಲಾ ರಾಷ್ಟ್ರೀಯ ನಾಯಕರಿಗೆ ಪತ್ರ ಕಳುಹಿಸ್ತೇವೆ. ಪತ್ರದಲ್ಲಿ ಯಡಿಯೂರಪ್ಪ ವಿರುದ್ಧ ಮಾತಾಡುತ್ತಿರುವವರ ವಿರುದ್ದವೂ ಕ್ರಮ ಆಗಬೇಕು ಎಂದಿದೆ ಎಂದರು.

ಸಹಿ ಸಂಗ್ರಹದ ಹಿಂದೆ ವಿಜಯೇಂದ್ರ ಇದ್ದಾರೆ ಅಂತಾ ಕೆಲವರು ಹೇಳುತ್ತಾರೆ. ಆದರೆ, ನಮಗೆ ಅವರು ಮಾತು ಕೇಳಿ ಮಾಡುವಂತದ್ದು ಏನೂ ಇಲ್ಲ. ನಾವು ಸ್ವಇಚ್ಛೆಯಿಂದ ಸಹಿ ಸಂಗ್ರಹ ಮಾಡಿದ್ದೇವೆ. ಸಿಎಂ ವಿರುದ್ಧ ಮಾತಾಡುವವರಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ, ಇವರ ವಿರುದ್ದ ಕ್ರಮ ಆಗಬೇಕು. ಜೊತೆಗೆ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿ ಮುಂದುವರೆಯಬೇಕು. ಹೀಗಂತ ಸಹಿ ಸಂಗ್ರಹ ಪತ್ರ ಬರೆಯಲಾಗಿದೆ. ಅದನ್ನು ಶೀಘ್ರವೇ ಹೈಕಮಾಂಡ್​ಗೆ ಕಳುಹಿಸಿಕೊಡಲಾಗುತ್ತದೆ ಎಂದರು.

ನನಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕರೆ ಮಾಡಿದ್ದರು. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಮಾಡಿ ಅಂತ ಹೇಳಿದ್ದಾರೆ. ಜೊತೆಗೆ ಇಂತಹ ಸಂದರ್ಭದಲ್ಲಿ ಈ ಬೆಳವಣಿಗೆ ಎಲ್ಲಾ ಆಗಬಾರದು ಅಂತಲೂ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ವರ್ತಕರು, ಆದಾಯ ತೆರಿಗೆದಾರರ ಗಮನಕ್ಕೆ: ಇಂದಿನಿಂದ ಹೊಸ ಇ-ಪೋರ್ಟಲ್ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.