ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಈ ನಡುವೆ ಕೊರೊನಾ ವಾರಿಯರ್ಸ್ ಆಗಿ ಇಡೀ ನಗರವನ್ನ ಸ್ವಚ್ಛವಾಗಿಸುವ ಪೌರ ಕಾರ್ಮಿಕರಲ್ಲಿ ಇದೀಗ ಸೋಂಕು ಹೆಚ್ಚಾಗುತ್ತಿದೆ.
ರಾಯಪುರ ವಾರ್ಡ್ ನಲ್ಲಿ ವಾಸಿಸುವ 37 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ರಾಯಪುರದಲ್ಲಿ ಪೌರ ಕಾರ್ಮಿಕರಿಗೆ ರ್ಯಾಂಡಮ್ ಟೆಸ್ಟ್ ಮಾಡಲಾಗಿತ್ತು. ಈ ವೇಳೆ 37 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಎಲ್ಲರೂ ಎಸಿಮ್ಟಮ್ಯಾಟಿಕ್ ಇರುವ ರೋಗಿಗಳಾಗಿದ್ದಾರೆ.
ಹೀಗಾಗಿ BIEC ಕೋವಿಡ್ ಕೇರ್ ಸೆಂಟರ್ಗೆ ಕಳಿಸಲಾಗಿದೆ. ಪೌರ ಕಾರ್ಮಿಕರ ಕುಟುಂಬಕ್ಕೆ ಯಾವುದೇ ಸಮಸ್ಯೆ ಆಗದಂತೆ ಶಾಸಕ ಜಮೀರ್ ಅಹಮದ್ ಭರವಸೆ ನೀಡಿದ್ದು, ಒಂದು ತಿಂಗಳ ಪಡಿತರ ಸೇರಿ ಎಲ್ಲಾ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಶಾಸಕರ ಭರವಸೆ ಬಳಿಕ BIEC ಕೋವಿಡ್ ಕೇರ್ ಸೆಂಟರ್ಗೆ ಸೋಂಕಿತ ಪೌರಕಾರ್ಮಿಕರು ಶಿಫ್ಟ್ ಆಗಿದ್ದಾರೆ.