ETV Bharat / city

ಅಮಾಯಕರನ್ನು ಬಂಧಿಸಿದ್ದರೆ ಬಿಟ್ಟುಬಿಡಿ: ಡಿ.ಜೆ.ಹಳ್ಳಿ ಪೊಲೀಸರಿಗೆ ಅಖಂಡ ಮನವಿ - ಡಿ.ಜೆ ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ

ಸೆರೆ ಸಿಕ್ಕ ವಿಡಿಯೋಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ‌‌. ಆದರೆ‌‌ ತನಿಖೆ ವೇಳೆ ಇವರು ಆರೋಪಿಗಳಲ್ಲ, ಅಮಾಯಕರು ಎಂದು ಕಂಡು ಬಂದರೆ ಬಿಡಲಿ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

MLA Akhanda Srinivasa Murthy
ಶಾಸಕ ಅಖಂಡ ಶ್ರೀನಿವಾಸಮೂರ್ತಿ
author img

By

Published : Aug 21, 2020, 5:24 PM IST

ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಅಮಾಯಕರನ್ನು ಬಂಧಿಸಿದ್ದರೆ ಬಿಟ್ಟುಬಿಡಿ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪಿಗಳನ್ನು ಹೊರತುಪಡಿಸಿ ಅಮಾಯಕರನ್ನು ಬಿಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೇನೆ. ಸೆರೆ ಸಿಕ್ಕ ವಿಡಿಯೋಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ‌‌. ಆದರೆ‌‌ ತನಿಖೆ ವೇಳೆ ಇವರು ಆರೋಪಿಗಳಲ್ಲ, ಅಮಾಯಕರು ಎಂದು ಕಂಡು ಬಂದರೆ ಬಿಡಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.

ಮಾಧ್ಯಮಗಳೊಂದಿಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ

ನಾನು‌ ಜವಾಬ್ದಾರಿ ಇರುವ ಶಾಸಕ.‌ ಅಮಾಯಕರ ಕುಟುಂಬಸ್ಥರ ಅಳಲು ಕೇಳಬೇಕಾಗಿರುವುದು ನನ್ನ ಕರ್ತವ್ಯ. ಹೀಗಾಗಿ ಅವರ ಪರವಾಗಿ ಠಾಣೆಗೆ ಬಂದಿದ್ದೇನೆ‌. ಅಮಾಯಕರನ್ನು ಬಿಡುವ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಸುಟ್ಟಿರುವುದು ನನ್ನ ಮನೆ, ನಷ್ಟವಾಗಿರುವುದು ನನಗೆ‌. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದರು.

ಪೊಲೀಸ್ ವಾಹನ ಸೇರಿದಂತೆ ಸಾರ್ವಜನಿಕರ ವಾಹನಗಳನ್ನು ಸುಟ್ಟಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಸಕರು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.

ಶಾಸಕರ‌ ಬಳಿ ಅಳಲು ತೋಡಿಕೊಂಡ ಮಹಿಳೆಯರು:

ಅಖಂಡ ಶ್ರೀನಿವಾಸಮೂರ್ತಿ ಠಾಣೆಯಿಂದ ನಿರ್ಗಮಿಸುತ್ತಿದ್ದಂತೆ ಬಂಧಿತ ಆರೋಪಿಗಳ ಕುಟುಂಬಸ್ಥರು ಶಾಸಕರ ಬಳಿ ತಮ್ಮ ಮಕ್ಕಳ ಭಾವಚಿತ್ರ ಹಿಡಿದು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು‌. ಅಲ್ಲದೆ ನಮ್ಮ ಮಕ್ಕಳು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸರು ನಮಗೆ ಯಾವ ಮಾಹಿತಿಯೂ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ನಿರಪರಾಧಿಗಳಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ಅಮಾಯಕರನ್ನು ಬಂಧಿಸಿದ್ದರೆ ಬಿಡುಗಡೆ ಮಾಡುವಂತೆ ಹೇಳಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.