ಬೆಂಗಳೂರು: ಮಂತ್ರಿ ಭಾಗ್ಯದ ವಿಷಯ ವಿಧಾನ ಪರಿಷತ್ನಲ್ಲಿ ಪ್ರಸ್ತಾಪಗೊಂಡು ಬಿಜೆಪಿ, ಜೆಡಿಎಸ್ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿದ ಪ್ರಸಂಗ ನಡೆಯಿತು.
ಬೆಂಗಳೂರಿಗೆ ಒಬ್ಬ ಉಸ್ತುವಾರಿ ಮಂತ್ರಿ ನೇಮಕ ಮಾಡುವಂತೆ ಕಾಂಗ್ರೆಸ್ನ ಯು.ವಿ.ವೆಂಕಟೇಶ್ ಸರ್ಕಾರಕ್ಕೆ ಆಗ್ರಹಿಸಿದರು. ಒಬ್ಬ ಉಸ್ತುವಾರಿ ಸಚಿವರಿಲ್ಲದೇ ಬೆಂಗಳೂರಿನ ಅಭಿವೃದ್ಧಿಯಾಗುತ್ತಿಲ್ಲ. ಕೆಲ ಜಿಲ್ಲೆಗಳಿಗೆ ಜಿಲ್ಲಾ ಸಚಿವರನ್ನು ನೇಮಕ ಮಾಡಿಲ್ಲ. ಈ ಸರ್ಕಾರ ಇದ್ಯೋ ಇಲ್ವೋ ಗೊತ್ತಿಲ್ಲ. ಹೀಗೆಯೇ ಆದರೆ ಸರ್ಕಾರಕ್ಕೆ ಜಾಸ್ತಿ ಆಯಸ್ಸು ಇರೋದಿಲ್ಲ ಎಂದರು. ಸರ್ಕಾರದ ಯೋಜನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದಾರೆ. ಈ ಸರ್ಕಾರ ಏನು ಮಾಡ್ತಿಲ್ಲ ಎಂದು ಸರ್ಕಾರದ ವಿರುದ್ಧ ವೆಂಕಟೇಶ್ ಕಿಡಿಕಾರಿದರು.
ಈ ವೇಳೆ ಪದೇ ಪದೇ ಮಧ್ಯಪ್ರವೇಶಿಸುತ್ತಿದ್ದ ಬಿಜೆಪಿ ಸದಸ್ಯ ನಾರಯಣಸ್ವಾಮಿಗೆ ವೆಂಕಟೇಶ್ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಜೆಡಿಎಸ್ ಸದಸ್ಯ ಬೋಜೇಗೌಡ ನಾರಾಯಣಸ್ವಾಮಿ ಅವರ ಕಾಲೆಳೆದರು. ಎಷ್ಟೇ ಮಾತಾಡಿದರೂ ಮಂತ್ರಿಯಾಗಲ್ಲ, ನಿಮ್ಮ ಟ್ಯಾಲೆಂಟ್ ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸಿ. ಇಲ್ಲಿ ಎಷ್ಟೇ ಮತಾಡಿದರೂ ಯಾವುದೇ ಉಪಯೋಗ ಇಲ್ಲ ಎಂದರು.
ಬೋಜೇಗೌಡಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ಹೆಚ್.ಡಿ.ಕುಮಾರಸ್ವಾಮಿ ಅವರ ಕೈ ನಿಮ್ಮ ಹೆಗಲ ಮೇಲಿದ್ದರೂ ನೀವು ಮಂತ್ರಿಯಾಗಲಿಲ್ಲ ಬಿಡಿ ಎಂದು ಟಾಂಗ್ ನೀಡಿದರು.