ಬೆಂಗಳೂರು: ಪಾದರಾಯನಪುರ ಹಲ್ಲೆ ಪ್ರಕರಣ ದೇಶದ್ರೋಹದ ಕೆಲಸವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪಿಸ್ಥರು ಆದರೂ ಅವರಿಗೆ ತಕ್ಷಣ ಶಿಕ್ಷೆ ಕೊಡಬೇಕು. ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸದ ಹಾಗೆ ನೋಡಬೇಕು ಎಂದು ತಿಳಿಸಿದರು.
ಇನ್ನು ಆಶಾ ಕಾರ್ಯಕರ್ತರಿಗೆ ತೊಂದರೆಯಾಗುವುದನ್ನು ನಾವು ಸಹಿಸಲ್ಲ, ವೈದ್ಯಾಧಿಕಾರಿಗಳು ಅವರ ರಕ್ಷಣೆಗೆ, ಪ್ರಾಣ ಉಳಿಸಲು ಹೋಗಿದ್ದರು. ಅವರ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಸರಿಯಲ್ಲ. ಈ ಕುರಿತು ಈಗಾಗಲೇ ಗೃಹ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಸಂಪುಟ ಸಭೆಯಲ್ಲೂ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
ರಾತ್ರಿ ವೇಳೆ ಅಧಿಕಾರಿಗಳು ಹೋಗ ಬಾರದಿತ್ತು ಎಂಬ ಜಮೀರ್ ಹೇಳಿಕೆಗೆ ಟಾಂಗ್ ನೀಡಿದ ಸಚಿವ ಶ್ರೀರಾಮುಲು, ಕ್ವಾರಂಟೈನ್ನಲ್ಲಿ ಕೇರ್ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಚಿಕಿತ್ಸೆ ಪ್ರಕ್ರಿಯೆಗಳನ್ನು ನಡೆಸಲು ನಮಗೆ ಯಾವುದೇ ಸಮಯ ಇರಲ್ಲ. ಕೊರೊನಾ ಚಿಕಿತ್ಸೆಗೆ ಯಾವುದೇ ಸಮಯ ನಿಗದಿ ಮಾಡಲು ಆಗುವುದಿಲ್ಲ. ಈ ಘಟನೆ ನಡೆದಿರುವುದು ತಪ್ಪು ಎಂದು ವಾಗ್ದಾಳಿ ನಡೆಸಿದರು.