ETV Bharat / city

ಹಳ್ಳಿಹಕ್ಕಿ ಜೊತೆ ಸಾಹುಕಾರನ ಪಿಸುಮಾತು.. ಸಿಎಂ ನಿರ್ದೇಶನ ಪಾಲಿಸಿದ ಜಾರಕಿಹೊಳಿ..

ಇದಕ್ಕೆ ಇಂಬು ನೀಡುವಂತೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಪದೇಪದೆ ವಿಶ್ವನಾಥ್​ರನ್ನು ಮಾತಿಗೆ ಎಳೆಯುವ ಪ್ರಯತ್ನ ನಡೆಸಿದ್ರೂ ಹಳ್ಳಿಹಕ್ಕಿ ಕೆರಳಲಿಲ್ಲ. ಸದನದಲ್ಲಿ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಕುಳಿತಿದ್ದರು. ಭೂ ಸುಧಾರಣಾ ಕಾಯ್ದೆ ವಿಚಾರದಲ್ಲಿ ಪ್ರತಿ ಪಕ್ಷದ ಪರ ಮಾತನಾಡಲು ಪ್ರೇರೇಪಿಸುವ ಪ್ರಯತ್ನ ನಡೆಸಿದರು ಪಾಟೀಲರು..

ವಿಧಾನ ಪರಿಷತ್
ವಿಧಾನ ಪರಿಷತ್
author img

By

Published : Dec 8, 2020, 4:55 PM IST

ಬೆಂಗಳೂರು : ವಿಧಾನ ಪರಿಷತ್ ಕಲಾಪ ನಡೆಯುವ ವೇಳೆ ಸದನದಲ್ಲೇ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್ ಜೊತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೆಲಕಾಲ ಮಾತುಕತೆ ನಡೆಸಿ ಗಮನ ಸೆಳೆದರು.

ವಿಧಾನ ಪರಿಷತ್​ನ ಬೆಳಗಿನ ಕಲಾಪದಲ್ಲಿ ಸಿಎಂ ಮಾತನಾಡಿ ನಿರ್ಗಮಿಸಿದ ಬೆನ್ನಲ್ಲೇ ಸದನಕ್ಕೆ ಆಗಮಿಸಿದ ಬೆಳಗಾವಿ ಸಾಹುಕಾರ, ನೇರವಾಗಿ ಹಳ್ಳಿಹಕ್ಕಿ ಬಳಿ ತೆರಳಿದರು. ಕೆಲ ಸಮಯ ಪಿಸು ಮಾತುಗಳಲ್ಲಿ ಚರ್ಚೆ ನಡೆಸಿರುವುದು ಸದನದ ಸದಸ್ಯರ ಗಮನ ಸೆಳೆಯಿತು. ನೂತನ ಶಿಕ್ಷಣ ನೀತಿ ವಿಚಾರದಲ್ಲಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿದ್ದ ವಿಶ್ವನಾಥ್ ನಡೆ ಬಗ್ಗೆ ಬಿಜೆಪಿ ಸದಸ್ಯರು ಅಸಮಧಾನಗೊಂಡಿದ್ದರು.

ಇಂದು ಮತ್ತೆ ಅಂತಹ ಸನ್ನಿವೇಶ ಬಾರದಿರಲಿ ಎಂದು ಸಿಎಂ ನಿರ್ದೇಶನದ ಮೇರೆಗೆ ಜಾರಕಿಹೊಳಿ ಮಾತುಕತೆ ನಡೆಸಿದರು. ಸದನದಲ್ಲಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ, ನಿಮ್ಮ ಜೊತೆ ನಾವಿದ್ದೇವೆ, ಮುಖ್ಯಮಂತ್ರಿಗಳೂ ಇದ್ದಾರೆ, ಆತುರದ ಪ್ರತಿಕ್ರಿಯೆ ಬೇಡ ಎಂದು ಮನವೊಲಿಸುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.

ಇದನ್ನೂ ಓದಿ.. ರೈತರಿಗೆ ಅನ್ಯಾಯವಾಗುವ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ: ಸಿಎಂ ಬಿಎಸ್​ವೈ

ಇದಕ್ಕೆ ಇಂಬು ನೀಡುವಂತೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಪದೇಪದೆ ವಿಶ್ವನಾಥ್​ರನ್ನು ಮಾತಿಗೆ ಎಳೆಯುವ ಪ್ರಯತ್ನ ನಡೆಸಿದ್ರೂ ಹಳ್ಳಿಹಕ್ಕಿ ಕೆರಳಲಿಲ್ಲ. ಸದನದಲ್ಲಿ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಕುಳಿತಿದ್ದರು. ಭೂ ಸುಧಾರಣಾ ಕಾಯ್ದೆ ವಿಚಾರದಲ್ಲಿ ಪ್ರತಿ ಪಕ್ಷದ ಪರ ಮಾತನಾಡಲು ಪ್ರೇರೇಪಿಸುವ ಪ್ರಯತ್ನ ನಡೆಸಿದರು ಪಾಟೀಲರು.

ಆ ವೇಳೆ ಎದ್ದು ನಿಂತ ಹೆಚ್‌ ವಿಶ್ವನಾಥ್ ಅವರು ಸದನದ ಕೇಂದ್ರ ಬಿಂದುವಾದರು. ನಿನ್ನೆ ರೀತಿ ಮತ್ತೆ ಸರ್ಕಾರದ ವಿರುದ್ಧ ಟೀಕೆ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಪ್ರತಿಪಕ್ಷ ಸದಸ್ಯರದ್ದಾಗಿತ್ತು. ಆದರೆ, ಎದ್ದು ನಿಂತ ಹೆಚ್‌ ವಿಶ್ವನಾಥ್ ಅವರು ಮೌನವಾಗಿಯೇ ಸದನದಿಂದ ಹೊರ ನಡೆದು ಪ್ರತಿಪಕ್ಷ ಸದಸ್ಯರ ಕುತೂಹಲಕ್ಕೆ ತಣ್ಣೀರೆರಚಿದರು.

ಕೈಗೆ ಕಪ್ಪು ಪಟ್ಟಿ : ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಕೈಗೆ ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಭಾಗಿಯಾದರು. ಹಿರಿಯ ಸದಸ್ಯ ಬಿ ಕೆ ಹರಿಪ್ರಸಾದ್ ಸೇರಿದಂತೆ ಕೆಲ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.