ETV Bharat / city

ಭೂಸ್ವಾಧೀನ ಪ್ರಕರಣಗಳಲ್ಲಿ ವಿಳಂಬ ತಪ್ಪಿಸಲು ಅಗತ್ಯ ಕ್ರಮ: ಸಚಿವ ಕಾರಜೋಳ - ಜಲ ಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ

ಸಿಂಗಟಾಲೂರು ಏತ ನೀರಾವರಿ ಯೋಜನೆ ಅಡಿಯಲ್ಲಿ ರೈತರಿಗೆ ಪರಿಹಾರ ನೀಡುವುದು ಬಾಕಿ ಇದ್ದರೆ, ಕ್ರಮ ಕೈಗೊಳ್ಳುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ವಿಧಾನಸಭೆಯಲ್ಲಿಂದು ಭರವಸೆ ನೀಡಿದ್ದಾರೆ.

minister govind karjol talk about land acquisition delay issue in assembly session
ಭೂಸ್ವಾಧೀನ ಪ್ರಕರಣಗಳಲ್ಲಿ ವಿಳಂಬ ತಪ್ಪಿಸಲು ಅಗತ್ಯ ಕ್ರಮ - ಸಚಿವ ಗೋವಿಂದ ಕಾರಜೋಳ
author img

By

Published : Sep 17, 2021, 8:19 PM IST

ಬೆಂಗಳೂರು: ಭೂಸ್ವಾಧೀನ ಪ್ರಕರಣಗಳಲ್ಲಿ ವಿಳಂಬ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ವಿಧಾನಸಭೆಯಲ್ಲಿ ತಿಳಿಸಿದರು.

ಭೂಸ್ವಾಧೀನ ಪ್ರಕರಣಗಳಲ್ಲಿ ವಿಳಂಬ ತಪ್ಪಿಸಲು ಅಗತ್ಯ ಕ್ರಮ - ಸಚಿವ ಗೋವಿಂದ ಕಾರಜೋಳ

ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ನೂತನ ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಅಡಿಯಲ್ಲಿ ಒಟ್ಟಾರೆಯಾಗಿ 3,639 ಎಕರೆ 37 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಸ್ವಾಧೀನಪಡಿಸಿಕೊಂಡ ಭೂಮಿಗೆ ಒಟ್ಟಾರೆಯಾಗಿ 43,87,82,731 ರೂ.ಗಳನ್ನು ಪಾವತಿಸಬೇಕಾಗಿದ್ದು, ಇದರಲ್ಲಿ 42,74,95,205 ರೂ.ಗಳ ಪರಿಹಾರ ಧನವನ್ನು ಪಾವತಿಸಲಾಗಿದೆ. ಬಾಕಿ ಇರುವ 1,12,87,526 ರೂ.ಗಳನ್ನು ಆದ್ಯತೆಯ ಮೇರೆಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಆದರೆ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ 30.17 ಕೋಟಿ ರೂ. ರೈತರಿಗೆ ಪರಿಹಾರ ನೀಡುವುದು ಬಾಕಿ ಇದೆ ಎಂದು ಪರಮೇಶ್ವರ ನಾಯ್ಕ ಹೇಳಿದಾಗ ಈ ವಿವರಗಳನ್ನು ಪರಿಶೀಲಿಸಿ, 2013ರ ಕಾಯಿದೆಯಂತೆ ಅಥವಾ ಅದಕ್ಕೂ ಮೊದಲಿನ ಕಾಯಿದೆಯಂತೆ ಪರಿಹಾರ ನೀಡುವುದು ಬಾಕಿ ಇದ್ದರೆ, ಎಲ್ಲಾ ಪರಿಹಾರವನ್ನು ರೈತರಿಗೆ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.