ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಗೋಪಾಲಯ್ಯ ಸಸಿ ನೆಟ್ಟು ಸಂಭ್ರಮಿಸಿದ್ದಾರೆ. ಇಂದು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಬರುವ ಶಂಕರಮಠ ವಾರ್ಡ್ನ ಕುರುಬರಹಳ್ಳಿಯ ಚಾಲುಕ್ಯ ವೃತ್ತದ ಪಾರ್ಕ್ನಲ್ಲಿ ಸಸಿ ನೆಟ್ಟರು.
ಈ ವೇಳೆ ಮಾತನಾಡಿದ ಸಚಿವರು, ನಮ್ಮ ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದೆ. ಮುಂದಿನ 3 ವರ್ಷಗಳ ಕಾಲ ಹೀಗೆ ಜನಪರ ಆಡಳಿತ, ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಚಿವ ಸಂಪುಟದ ಎಲ್ಲ ಸದಸ್ಯರು ಸಿಎಂ ಕೈ ಬಲಪಡಿಸುತ್ತೇವೆ ಎಂದರು.