ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಅವರು ಇಂದು ಬೆಳಗ್ಗೆ ಉತ್ತಮ ಆಡಳಿತ ದಿನದ (ಗುಡ್ ಗವರ್ನೆನ್ಸ್ ಡೇ) ಪ್ರಯುಕ್ತ ಅರಮನೆ ನಗರ ವಾರ್ಡ್ನ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಅವರ ಕುಟುಂಬದ ಮುಖಾಂತರ ಪ್ರಧಾನಮಂತ್ರಿಗೆ ಅಭಿನಂದನಾ ಅಂಚೆ ಪತ್ರ ಬರೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 20 ವರ್ಷಗಳ ಸಮರ್ಥ- ಜನಪರ ಆಡಳಿತದ ಕುರಿತು ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಸಚಿವರು ಮನವಿ ಮಾಡಿದರು. ಕೇಂದ್ರ ಸರ್ಕಾರವು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೈಗೊಂಡಿರುವ ಯೋಜನೆಗಳು, ಕಾರ್ಯಕ್ರಮಗಳನ್ನು ಜನಮನಕ್ಕೆ ತಲುಪಿಸಬೇಕಿದೆ ಎಂದರು.
ಇದನ್ನೂ ಓದಿ: ವೋಟಿಗಾಗಿ ಆರ್‌ಎಸ್‌ಎಸ್ ದೂಷಿಸಿ ನಿಮ್ಮ ವ್ಯಕ್ತಿತ್ವವನ್ನ ಚಿಲ್ಲರೆ ಮಾಡಬೇಡಿ: ಹೆಚ್‌ಡಿಕೆಗೆ ಕಟೀಲ್ ಸಲಹೆ
ಈಗಾಗಲೇ ಪಕ್ಷದ ಮುಖಂಡರು ಪ್ರಧಾನಿಗೆ ಪತ್ರ ಬರೆದಿದ್ದು, ಈಗ ಕಾರ್ಯಕರ್ತರಿಂದ ಪತ್ರ ಬರೆಸುವ ಮೂಲಕ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಲು ಮುಂದಾಗಿದ್ದಾರೆ.