ETV Bharat / city

2025ರೊಳಗಾಗಿ ನಮ್ಮ ಮೆಟ್ರೋ 2A ಮತ್ತು 2B ಹಂತಗಳ ಕಾಮಗಾರಿ ಪೂರ್ಣ : ಸಂಸದ ತೇಜಸ್ವಿ ಸೂರ್ಯ - MP Tejasvi Surya statement

ಜಯದೇವ ಮತ್ತು ಸಿಲ್ಕ್ ಬೋರ್ಡ್ ನಿಲ್ದಾಣಗಳು ಡಬಲ್ ಎಲಿವೆಟೆಡ್ ಸ್ಟೇಷನ್​​ಗಳಾಗಿರಲಿವೆ. ಅಲ್ಲದೇ, ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಮೆಟ್ರೋ ಅಧಿಕಾರಿಗಳು Comprehensive Mobility Plan ಅನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕಾಮಗಾರಿಗೆ ಅಗತ್ಯವಿರುವ ಶೇ.99ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ..

Bangalore
ಸಂಸದ ತೇಜಸ್ವಿ ಸೂರ್ಯ
author img

By

Published : Aug 7, 2021, 8:40 PM IST

ಬೆಂಗಳೂರು : ಜಾಗತಿಕವಾಗಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಅತೀ ವೇಗವಾಗಿ ಮುನ್ನುಗ್ಗುತ್ತಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆಯ ಪರಿಣಾಮಕಾರಿ ಪರಿಹಾರಕ್ಕೆ ನಮ್ಮ ಮೆಟ್ರೋ ಅತ್ಯಂತ ಸಹಕಾರಿಯಾಗಲಿದೆ. 2025ರೊಳಗಾಗಿ ಮೆಟ್ರೋ 2ರ, 2A ಮತ್ತು 2B ಹಂತಗಳು ಬೆಂಗಳೂರು ನಾಗರಿಕರ ಉಪಯೋಗಕ್ಕೆ ಹಾಗೂ ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗಲಿವೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

2025ರೊಳಗಾಗಿ ನಮ್ಮ ಮೆಟ್ರೋ 2A ಮತ್ತು 2B ಹಂತಗಳ ಕಾಮಗಾರಿ ಪೂರ್ಣ : ಸಂಸದ ತೇಜಸ್ವಿ ಸೂರ್ಯ

ಡೈರಿ ಸರ್ಕಲ್ ಬಳಿ ಟನಲ್ ಬೋರಿಂಗ್ ಮಷಿನ್ ಕಾಮಗಾರಿಯನ್ನು ಮೆಟ್ರೋ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು. ನಮ್ಮ‌ ಮೆಟ್ರೋದ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಎರಡನೇ ಹಂತದ ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ ಅಂಡರ್ ಗ್ರೌಂಡ್ ಸೆಕ್ಷನ್ ಕಾಮಗಾರಿ ಇದಾಗಿದೆ. ಡೈರಿ ಸರ್ಕಲ್ ಬಳಿ ನಡೆಯುತ್ತಿರುವ ಸುರಂಗ ಕಾಮಗಾರಿ ಫೇಸ್ 2, ರೀಚ್ 6ರ ವೆಲ್ಲಾರ ಜಂಕ್ಷನ್​​ನಿಂದ‌ ಜಯನಗರದವರೆಗೆ ಇರಲಿದೆ.‌

ಪ್ರಸ್ತುತ 56 ಕಿ.ಮೀ ಇರುವ ಮೆಟ್ರೋ ಮಾರ್ಗ 2025ರೊಳಗಾಗಿ 175 ಕಿ.ಮೀವರೆಗೂ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ. ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಮಟ್ಟದಲ್ಲಿ ಸಹಕಾರಿಯಾಗಲಿದೆ. ಈ ಕಾಮಗಾರಿ 2025ರೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಜಯದೇವ ಮತ್ತು ಸಿಲ್ಕ್ ಬೋರ್ಡ್ ನಿಲ್ದಾಣಗಳು ಡಬಲ್ ಎಲಿವೆಟೆಡ್ ಸ್ಟೇಷನ್​​ಗಳಾಗಿರಲಿವೆ. ಅಲ್ಲದೇ, ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಮೆಟ್ರೋ ಅಧಿಕಾರಿಗಳು Comprehensive Mobility Plan ಅನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕಾಮಗಾರಿಗೆ ಅಗತ್ಯವಿರುವ ಶೇ.99ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ಇದೇ ಸೆಪ್ಟೆಂಬರ್ ವೇಳೆಗೆ ಕೇಂದ್ರ ಸರ್ಕಾರದ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಮೆಟ್ರೋ ಸೇವೆಗಳಿಗೂ ಅಳವಡಿಸಲು ತೀರ್ಮಾನಿಸಲಾಗಿದೆ. ಈ ಕಾರ್ಡ್‌ ಅನ್ವಯ ದೇಶಾದ್ಯಂತ ಎಲ್ಲ ವಿಧದ ಸಾರಿಗೆ ಪ್ರಕಾರಗಳಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ತಿಳಿಸಿದರು.

ಮೆಟ್ರೋ ಕಾಮಗಾರಿಯ ಸಂದರ್ಭದಲ್ಲಿ ಸ್ಥಳಾಂತರಗೊಂಡಿರುವ ಮರಗಳ ಪರಿಹಾರವಾಗಿ 10 ಸಾವಿರಕ್ಕೂ ಅಧಿಕ ಮರಗಳನ್ನು ನೆಡಲು ನಮ್ಮ ಮೆಟ್ರೋ ಮುಂದೆ ಬಂದಿದೆ. ಸಾರ್ವಜನಿಕರನ್ನು ಸಹ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಇದೇ ಸಂದರ್ಭದಲ್ಲಿ ನಮ್ಮ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಮ್ ಪರ್ವೇಜ್ ಹಾಗೂ ನಿರ್ದೇಶಕರಾದ ರಾಧಾಕೃಷ್ಣ ರೆಡ್ಡಿ ಮೆಟ್ರೋ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.