ಬೆಂಗಳೂರು: ಮಂಗಳೂರು ಗಲಭೆ ಪೂರ್ವನಿಯೋಜಿತ ಅಂತಾ ಹೇಳಿದ್ದೆ. ಅದು ಇಂದು ನಿಜವಾಗಿದೆ. ಕಾಂಗ್ರೆಸ್ ಗಲಭೆಗೆ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಮಾಡಲು ಕೇರಳದಿಂದ ಬಂದಿದ್ರು ಅಂತಾ ಹೇಳಿದ್ವಿ ಈಗ ಮಾಧ್ಯಮಗಳಲ್ಲಿ ದೃಶ್ಯಾವಳಿಗಳನ್ನ ನೋಡ್ತಿದ್ದೇವೆ. ಕಾಂಗ್ರೆಸ್ನವರು, ಮಾಜಿ ಸಚಿವರೊಬ್ಬರು ಪೂರ್ವ ತಯಾರಿ ನಡೆಸಿದ್ದರಿಂದಲೇ ಹೇಳಿಕೆ ಕೊಟ್ಟಿದ್ದರು. ಅವರು ಪ್ರತಿಭಟನೆ ಮಾಡಲು ಬಂದಿರಲಿಲ್ಲ, ದಾಂಧಲೆ ಮಾಡಲು ಬಂದಿದ್ದರು. ಮುಖ ಮುಚ್ಚಿಕೊಂಡು ಕಲ್ಲು ಹೊಡೆದವರು ಯಾರು? ಅಮಾಯಕರಾ? ಗೂಂಡಾಗಳಾ? ಗೊತ್ತಾಗಬೇಕಿದೆ ಎಂದರು.
ಮಂಗಳೂರು ಗಲಭೆಗೆ ಕಾಂಗ್ರೆಸ್ ಕಾರಣ: ಕಟೀಲ್ ಆರೋಪ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ
ಮಂಗಳೂರು ಗಲಭೆಗೆ ಕಾಂಗ್ರೆಸ್ ಹಾಗೂ ಖಾದರ್ ನೇರ ಕಾರಣ ಎಂದು ಆರೋಪಿಸಿದ ಕಟೀಲ್. ಈ ಕುರಿತು ಉತ್ತರಿಸುವಂತೆ ಆಗ್ರಹ.
ಬೆಂಗಳೂರು: ಮಂಗಳೂರು ಗಲಭೆ ಪೂರ್ವನಿಯೋಜಿತ ಅಂತಾ ಹೇಳಿದ್ದೆ. ಅದು ಇಂದು ನಿಜವಾಗಿದೆ. ಕಾಂಗ್ರೆಸ್ ಗಲಭೆಗೆ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಮಾಡಲು ಕೇರಳದಿಂದ ಬಂದಿದ್ರು ಅಂತಾ ಹೇಳಿದ್ವಿ ಈಗ ಮಾಧ್ಯಮಗಳಲ್ಲಿ ದೃಶ್ಯಾವಳಿಗಳನ್ನ ನೋಡ್ತಿದ್ದೇವೆ. ಕಾಂಗ್ರೆಸ್ನವರು, ಮಾಜಿ ಸಚಿವರೊಬ್ಬರು ಪೂರ್ವ ತಯಾರಿ ನಡೆಸಿದ್ದರಿಂದಲೇ ಹೇಳಿಕೆ ಕೊಟ್ಟಿದ್ದರು. ಅವರು ಪ್ರತಿಭಟನೆ ಮಾಡಲು ಬಂದಿರಲಿಲ್ಲ, ದಾಂಧಲೆ ಮಾಡಲು ಬಂದಿದ್ದರು. ಮುಖ ಮುಚ್ಚಿಕೊಂಡು ಕಲ್ಲು ಹೊಡೆದವರು ಯಾರು? ಅಮಾಯಕರಾ? ಗೂಂಡಾಗಳಾ? ಗೊತ್ತಾಗಬೇಕಿದೆ ಎಂದರು.
ಬೆಂಗಳೂರು: ಮಂಗಳೂರು ಗಲಭೆ ಪೂರ್ವಯೋಜಿತವಾಗಿದ್ದು,ಘಟನೆಗೆ ಎಸ್ ಡಿಪಿಐ, ಪಿಎಫ್ ಐ, ಕಾಂಗ್ರೆಸ್ ಗಲಭೆಗೆ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಮಾಡಲು ಕೇರಳದಿಂದ ಬಂದಿದ್ರು ಅಂತಾ ಹೇಳಿದ್ವಿ ಈಗ ಮಾಧ್ಯಮಗಳಲ್ಲಿ ದೃಶ್ಯಾವಳಿಗಳನ್ನ ನೋಡ್ತಿದ್ದೇವೆ ಈ ಗಲಭೆಗೆ ಕಾರಣ ಕಾಂಗ್ರೆಸ್ ನವರು, ಮಾಜಿ ಸಚಿವರು ಒಬ್ಬರು ಪೂರ್ವ ತಯಾರಿ ನಡೆಸಿದ್ದರಿಂದಲೇ ಹೇಳಿಕೆ ಕೊಟ್ಟಿದ್ದರು ಅವರು ಪ್ರತಿಭಟನೆ ಮಾಡಲು ಬಂದಿರಲಿಲ್ಲ, ದಾಂದಲೆ ಮಾಡಲು ಬಂದಿದ್ದರು ಮುಖ ಮುಚ್ಚಿಕೊಂಡು ಕಲ್ಲು ಹೊಡೆದವರು ಯಾರು? ಅಮಾಯಕರಾ? ಗೂಂಡಾಗಳಾ? ಗೊತ್ತಾಗಬೇಕಿದೆ ಎಂದರು.
ಮಂಗಳೂರು ಗಲಭೆ ಪೂರ್ವಯೋಜಿತ ಮಂಗಳೂರು ಗಲಭೆ ಸುಳಿವು ಇತ್ತು ಕಾಶ್ಮೀರ ಶೈಲಿಯಲ್ಲಿ ಪೊಲೀಸರ ಮೇಲೆ ಅಕ್ರಮಣ ನಡೆಯಿತು ಆ ಪ್ರತಿಭಟನೆಗೆ ಕೇರಳದಿಂದ ಜನರು ಬಂದಿದ್ದರು ಮಾಜಿ ಸಚಿವರ ಹೇಳಿಕೆಯಿಂದ ಗಲಭೆಯ ವಾಸನೆ ಇತ್ತು, ಪ್ರತಿಭಟನೆಗೆ ಬಂದವರಲ್ಲಿ ಕೆಲವರ ಕೈಯಲ್ಲಿ ಶಸ್ತ್ರಗಳು ಇದ್ದವು, ಈ ಗಲಭೆಗೆ ಕಾಂಗ್ರೆಸ್ ಉತ್ತರಿಸಬೇಕು ಎಂದರು.
ಬೆಂಕಿ ಹಚ್ಚುತ್ತೇವೆ ಅಂತಾ ನಾನು ಹೇಳಿದ್ದೆ ಆಗ ಭಾವೋದ್ವೇಗಕ್ಕೆ ಒಳಗಾಗಿ ಹೇಳಿಕೆ ಕೊಟ್ಟಿದ್ದೆ ಅಂತಾ ಕ್ಷಮೆ ಕೂಡ ಕೇಳಿದ್ದೆ ಆಗ ಯಾವುದೇ ಗಲಾಟೆ ಆಗಲಿಲ್ಲ ಆದರೆ ಖಾದರ್ ಕೊಟ್ಟ ಹೇಳಿಕೆ ನಂತರ ಗಲಭೆ ಆಗಿದ್ದು ಹೇಗೆ ಎಂದು ಖಾದರ್ ಹೇಳಿಕೆಯಿಂದಲೇ ಗಲಭೆಯಾಗಿದೆ ಎಂದು ಆರೋಪಿಸಿದರು.
ತೇಜಸ್ವಿಸೂರ್ಯ ಪಂಕ್ಚರ್ ಹೇಳಿಕೆ ಯಾವ ಭಾವನೆಯಲ್ಲಿ ಹೇಳಿದ್ದಾರೋ ಅದು ಅವರನ್ನ ಕೇಳಬೇಕು ಎಂದರು.Body:.Conclusion: