ETV Bharat / city

ಜನಸಂಪರ್ಕ ಅಭಿಯಾನಕ್ಕಾಗಿ ಜೂ.30ರೊಳಗೆ ಎಲ್ಲಾ ಮಂಡಲ ಮಟ್ಟದ ರ‍್ಯಾಲಿ ನಡೆಸಿ: ರವಿ ಕುಮಾರ್ ಕರೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಪಕ್ಷ ಆಯೋಜಿಸಿರುವ ‘ಸಮರ್ಥ ನಾಯಕತ್ವ-ಸ್ವಾವಲಂಬಿ ಭಾರತ ಅಭಿಯಾನ’ದ ಅಂಗವಾಗಿ ವಿವಿಧ ಸಾಮಾಜಿಕ ಜಾಲತಾಣ ಬಳಸಿಕೊಂಡು ರಾಜ್ಯಾದ್ಯಂತ ಜೂ. 6ರಿಂದ 30ರವರೆಗೆ 600ಕ್ಕೂ ಹೆಚ್ಚು ರ‍್ಯಾಲಿ ಹಾಗೂ ಮನೆ-ಮನೆ ಸಂಪರ್ಕ ಕಾರ್ಯಕ್ರಮ ನಡೆಸಲಾಗುವುದು ಎಂದು ರವಿಕುಮಾರ್ ವಿವರಿಸಿದ್ದಾರೆ.

Mandala level rallies by 30th June for mass communication campaign
ಜನಸಂಪರ್ಕ ಅಭಿಯಾನಕ್ಕಾಗಿ ಜೂ.30ರೊಳಗೆ ಎಲ್ಲಾ ಮಂಡಲ ಮಟ್ಟದ ರ‍್ಯಾಲಿ ನಡೆಸಿ: ರವಿ ಕುಮಾರ್ ಕರೆ
author img

By

Published : Jun 21, 2020, 1:12 AM IST

ಬೆಂಗಳೂರು: ಸಮರ್ಥ ನಾಯಕತ್ವ-ಸ್ವಾವಲಂಬಿ ಭಾರತ ಅಭಿಯಾನದ ಹಿನ್ನೆಲೆ ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಬೂತ್ ಮಟ್ಟದಲ್ಲಿ ಸಂಚರಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಜೊತೆಗೆ ಜೂನ್ 30ರ ಒಳಗಾಗಿ ಎಲ್ಲಾ ಮಂಡಲ ಮಟ್ಟದ ರ‍್ಯಾಲಿಗಳನ್ನು ನಡೆಸಬೇಕೆಂದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಕರೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಪಕ್ಷ ಆಯೋಜಿಸಿರುವ ‘ಸಮರ್ಥ ನಾಯಕತ್ವ-ಸ್ವಾವಲಂಬಿ ಭಾರತ ಅಭಿಯಾನ’ದ ಅಂಗವಾಗಿ ವಿವಿಧ ಸಾಮಾಜಿಕ ಜಾಲತಾಣ ಬಳಸಿಕೊಂಡು ರಾಜ್ಯಾದ್ಯಂತ ಜೂ. 6ರಿಂದ 30ರವರೆಗೆ 600ಕ್ಕೂ ಹೆಚ್ಚು ರ‍್ಯಾಲಿ ಹಾಗೂ ಮನೆ ಮನೆ ಸಂಪರ್ಕ ಕಾರ್ಯಕ್ರಮ ನಡೆಸಲಾಗುವುದು ಎಂದು ವಿವರಿಸಿದ್ದಾರೆ.

ಜೊತೆಯಲ್ಲಿ ಜೂ. 23ರಂದು ಮಹಾಸಂಪರ್ಕ ದಿನ ಆಚರಿಸಲು ತೀರ್ಮಾನಿಸಲಾಗಿದೆ. ಈ ಅಭಿಯಾನದ ಭಾಗಿಯಾಗಿ ರಾಜ್ಯದ 58 ಸಾವಿರ ಬೂತ್‌ಗಳ 50 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಜೂ. 6ರಿಂದ ಈವರೆಗೆ 37,598 ಬೂತ್‌ಗಳಲ್ಲಿ 4,41,852 ಕಾರ್ಯಕರ್ತರು 28,91,821 ಮನೆಗಳನ್ನು ಸಂಪರ್ಕಿಸಿದ್ದಾರೆ. ಇದುವರೆಗೆ 7 ಮೋರ್ಚಾಗಳಲ್ಲಿ 83 ರ‍್ಯಾಲಿಗಳು ನಡೆದಿದ್ದು, ಅಂದಾಜು 20,750 ಜನ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಜೂನ್ 20ರಂದು ನಡೆದ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾದ್ಯಂತ ಜೂ. 23ರಂದು ಮಹಾಸಂಪರ್ಕ ದಿನ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಬೂತ್‌ಗಳಲ್ಲಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮನೆ-ಮನೆಗೆ ತೆರಳಿ ಮೋದಿ ಸರ್ಕಾರದ ಒಂದು ವರ್ಷದ ಸಾಧನೆ, ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ವಿಶೇಷವಾಗಿ ಚೀನಾ ಅಟ್ಟಹಾಸವನ್ನು ಮುರಿಯಲು ಸ್ವದೇಶಿ ವಸ್ತುಗಳನ್ನು ಬಳಸಬೇಕೆಂದು ಮನವಿ ಮಾಡಲಿದ್ದಾರೆ. ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಅರ್ಪಿಸುವ ನೈಜ ಶ್ರದ್ಧಾಂಜಲಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.