ETV Bharat / city

ಹೊಸಕೋಟೆ: ಅಕ್ರಮವಾಗಿ ಸಾಗಿಸುತ್ತಿದ್ದ 62 ಲಕ್ಷ ರೂ. ಮೌಲ್ಯದ ರಕ್ತಚಂದನ ವಶ - ರಕ್ತಚಂದನ ವಶಪಡಿಸಿಕೊಂಡ ಹೊಸಕೋಟೆ ಪೊಲೀಸರು

ಗೂಡ್ಸ್​ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2,112 ಕೆಜಿಯ ರಕ್ತಚಂದನವನ್ನು ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಲ್ವರು ಆರೋಪಿಗಳ ಪೈಕಿ ಓರ್ವ ಆರೋಪಿ ಸೆರೆ ಸಿಕ್ಕಿದ್ದು, ಉಳಿದ ಮೂವರು ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

man-arrested-for-smuggling-red-sandalwood-in-hosakote
ರಕ್ತಚಂದನ ವಶ
author img

By

Published : Sep 2, 2021, 8:49 PM IST

ಹೊಸಕೋಟೆ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ರಕ್ತಚಂದನವನ್ನು ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 62 ಲಕ್ಷ ರೂ. ಮೌಲ್ಯದ ರಕ್ತಚಂದನ ವಶ

ಕೋಲಾರ ಕಡೆಯಿಂದ ಹೊಸಕೋಟೆಯತ್ತ ರಕ್ತಚಂದನ ಹೊತ್ತ ಗೂಡ್ಸ್​ ವಾಹನ ಬರುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಿಡಘಟ್ಟ ಗ್ರಾಮದ ಬಳಿ ದಾಳಿ ನಡೆಸಿದ ಡಿವೈಎಸ್ಪಿ ಉಮಾಶಂಕರ್ ಮತ್ತು ಇನ್ಸ್​ಪೆಕ್ಟರ್ ಮಂಜುನಾಥ್ ತಂಡ 62 ಲಕ್ಷ ರೂ. ಮೌಲ್ಯದ 2,112 ಕೆ.ಜಿಯ 80 ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆದರು.

ಗೂಡ್ಸ್​​ ವಾಹನದ ಹಿಂದೆಮುಂದೆ ಎರಡು ಕಾರುಗಳಲ್ಲಿ ಬರುತ್ತಿದ್ದ ಆರೋಪಿಗಳು ಪೊಲೀಸರು ದಾಳಿ ಮಾಡುತ್ತಿದ್ದಂತೆ ಅರಣ್ಯ ಕಡೆಗೆ ವಾಹನ ತಿರುಗಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಕ್ತಚಂದನವಿದ್ದ ಗೂಡ್ಸ್ ವಾಹನ,ಎರಡು ಕಾರು‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ನಾಲ್ವರು ಆರೋಪಿಗಳಲ್ಲಿ ಮೂವರು ತಪ್ಪಿಸಿಕೊಂಡಿದ್ದು, ಶಬ್ಬಿರ್ ಅಹಮದ್ ಸಿಕ್ಕಿಬಿದ್ದಿದ್ದಾನೆ. ಉಳಿದ ಮೂವರಿಗಾಗಿ ಪೊಲೀಸರು ಸೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.