ETV Bharat / city

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಬಂತು ಪ್ಲಾಸ್ಟಿಕ್​ ಬಾಟಲಿ ಪುಡಿ ಮಾಡುವ ಯಂತ್ರಗಳು - Machine for crushing plastic bottles

ಬೆಂಗಳೂರಿನ 3 ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್​ ಬಾಟಲಿಗಳನ್ನು ಪುಡಿ ಮಾಡುವ ಯಂತ್ರಗಳು ಬಂದಿವೆ..

Machine for crushing plastic bottles at Bangalore railway stations
ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್​ ಬಾಟಲಿಗಳನ್ನು ಪುಡಿ ಮಾಡುವ ಯಂತ್ರ
author img

By

Published : Dec 3, 2021, 7:20 PM IST

ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಯಶವಂತಪುರ, ಬೆಂಗಳೂರು ದಂಡು ಮತ್ತು ಕೃಷ್ಣರಾಜಪುರಂ ರೈಲು ನಿಲ್ದಾಣಗಳಲ್ಲಿ ತಲಾ ಒಂದರಂತೆ 3 ಪ್ಲಾಸ್ಟಿಕ್​ ಬಾಟಲ್(PET ಬಾಟಲ್​) ಪುಡಿ ಮಾಡುವ ಯಂತ್ರಗಳನ್ನು ಸ್ಥಾಪಿಸಿದೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿ ಈ ಯಂತ್ರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸಿದೆ.

ಪ್ರತಿ ಯಂತ್ರವು ಗಂಟೆಗೆ 500 ಬಾಟಲಿಗಳನ್ನು ಕತ್ತರಿಸಲಿದ್ದು, 12 ರಿಂದ 16 ಸೆ.ಮೀ ಗಾತ್ರದ ಸಣ್ಣ ತುಣುಕುಗಳಾಗಿ ಪರಿವರ್ತಿಸುತ್ತದೆ. ಈ ತುಣುಕುಗಳನ್ನು ಮರುಬಳಕೆ ಮಾಡಬಹುದು. 2 ಲೀಟರ್ ವರೆಗಿನ ಗಾತ್ರದ ಬಾಟಲಿಗಳನ್ನು ಯಂತ್ರಗಳಿಗೆ ನೀಡಬಹುದು.

ಇದನ್ನೂ ಓದಿ: 3 ವರ್ಷದ ಹಿಂದೆ ತಪ್ಪಿಸಿಕೊಂಡು ಪರೋಟ ಮಾರುತ್ತಿದ್ದ ಕೈದಿ ಅರೆಸ್ಟ್ : ಫೋನ್ ಬಳಸದವನನ್ನು ಹಿಡಿದದ್ದೇ ರೋಚಕ!!

ಈ ಯಂತ್ರಗಳು ವಾರ್ಷಿಕವಾಗಿ 42 ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಉಳಿಸುವ ಮೂಲಕ ರೈಲ್ವೆಯ ಹಸಿರು ಉಪಕ್ರಮವನ್ನು ಬೆಂಬಲಿಸಲು ಸಹಕಾರಿ. ಅಲ್ಲದೇ, 1000 ಲೀಟರ್‌ಗಳಷ್ಟು ಹೆಚ್ಚುವರಿ ಇಂಧನ ದಹನವನ್ನು ಉಳಿಸುತ್ತವೆ ಮತ್ತು ಯಾವುದೇ ಭೂಮಿ ತುಂಬುವಿಕೆ ಅಥವಾ ವನ ತುಂಬುವಿಕೆ ಆಗುವುದಿಲ್ಲ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.