ETV Bharat / city

ಮನೆ ಕಟ್ಟುವ ಕನಸು ಇನ್ನು ದುಬಾರಿ: ಕಾರ್ಮಿಕರೂ ಇಲ್ಲ.. ಸಿಮೆಂಟ್ ಬೆಲೆಯಲ್ಲೂ ಹೆಚ್ಚಳ! - cement rate increase

ಲಾಕ್​ಡೌನ್​ ನೀಡಿದ ಅತಿದೊಡ್ಡ ಪೆಟ್ಟಿನಿಂದ ಕಾರ್ಮಿಕರು ಮತ್ತು ಸಿಮೆಂಟ್ ಕೊರತೆಯಿಂದ ರಿಯಲ್​ ಎಸ್ಟೇಟ್​ ಉದ್ಯಮ ಸಂಪೂರ್ಣ ನೆಲಕಚ್ಚಿದೆ.

Lockdown effect on real estate industry
ರಿಯಲ್​ ಎಸ್ಟೇಟ್​
author img

By

Published : Nov 25, 2020, 1:43 PM IST

Updated : Dec 23, 2020, 9:06 PM IST

ಬೆಂಗಳೂರು: ಕೊರೊನಾ ನಂತರ ಸಿಮೆಂಟ್ ಬೆಲೆ ಏಕಾಏಕಿ ಹೆಚ್ಚಳ ಹಾಗೂ ಕಾರ್ಮಿಕರ ಕೊರತೆಯಿಂದ ಮನೆ ಕಟ್ಟುವ ಬೆಲೆ ಈಗ ದುಪ್ಪಟ್ಟಾಗಿದೆ.

2019ರ ಸೆಪ್ಟೆಂಬರ್​​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ರಿಯಲ್ ಎಸ್ಟೇಟ್​ ಉದ್ಯಮಕ್ಕೆ ₹25,000 ಕೋಟಿ ಆರ್ಥಿಕ ನೆರವು ಘೋಷಿಸಿದ್ದರು. ಹೀಗಾಗಿ, ಕುಸಿಯುತ್ತಿದ್ದ ವಲಯ ಸುಧಾರಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಕೊರೊನಾ ಅದೆಲ್ಲವೂ ತಲೆಕೆಳಕಾಗಿಸಿದೆ.

ಲಾಕ್​ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ ಹಿನ್ನೆಲೆಯಲ್ಲಿ ಮನೆ ಕಟ್ಟಡ ಕೆಲಸಕ್ಕೆ ಅಗತ್ಯವಿರುವ ಕಾರ್ಮಿಕರ ಕೊರತೆ ಹೆಚ್ಚಾಯಿತು. ಹೀಗಾಗಿ, ಕಟ್ಟಡ ಕೆಲಸಕ್ಕೆ ನೀಡುವ ಭತ್ಯೆ ದರದಲ್ಲಿ ಏರಿಕೆ ಕಂಡಿತು.

ಕೆಲ ಮೇಸ್ತ್ರಿಗಳು ಈ ಸಂದರ್ಭ ದುರುಪಯೋಗ ಮಾಡುತ್ತಿರುವುದು ಕಂಡುಬಂದಿದೆ. ಕೂಲಿ ಕಾರ್ಮಿಕರ ಕೊರತೆ ಇದೆ. ಹೀಗಾಗಿ, ಅವರಿಗೆ ಹಣ ಹೆಚ್ಚು ನೀಡಬೇಕು ಎಂದು ಹೇಳಿ ಕಾರ್ಮಿಕರಿಗೆ ಸೇರುವ ಹಣವನ್ನು ಇವರ ಜೇಬಿಗೆ ಹೋಗುತ್ತಿರುವುದು ಕಂಡು ಬಂದಿದೆ.

ಕ್ರೇಡಾಯಿ ಅಧ್ಯಕ್ಷ ಸುರೇಶ್ ಹರಿ

ಸಿಮೆಂಟ್ ದಂಧೆಗೆ ಕುಗ್ಗಿದ ಮಧ್ಯಮ ವರ್ಗ: ಎಲ್ಲ ಸಿಮೆಂಟ್ ತಯಾರಿಕಾ ಸಂಸ್ಥೆಗಳು ಸೇರಿ ಏಕಾಏಕಿ 50 ಕೆಜಿ ಸಿಮೆಂಟ್ ಮೂಟೆಗೆ ಬೆಲೆಯನ್ನು ₹100 ಹೆಚ್ಚಿಸಿವೆ. ಈ ಹಿಂದೆ ಸಿಸಿಐ ವಿಧಿಸಿದ ದಂಡ ಕಟ್ಟಿಯೂ, ಬೆಲೆ ಹೆಚ್ಚಳ ಮಾಡುತ್ತಲೇ ಇವೆ.

ಆರ್ಥಿಕ ಹಿಂಜರಿತದಿಂದ ಮುಕ್ತಿ ಸಿಗುತ್ತದೆ ಎಂಬ ಆಶಾಭಾವನೆ ರಿಯಲ್ ಎಸ್ಟೇಟ್ ವಲಯದವರು ಇಟ್ಟುಕೊಂಡಿದ್ದರು. ಕೊರೊನಾ ನಂತರ ಇದು ಸುಳ್ಳಾಗಿರುವ ಜೊತೆಗೆ ಈಗ ತುಟ್ಟಿಯಾಗಿದೆ. ಇದರಿಂದ ಮತ್ತಷ್ಟು ಹೊಡೆತ ನೀಡಿದೆ. ಮನೆ ನಿರ್ಮಾಣ ಬೆಲೆ ಹೆಚ್ಚಾದ ಕಾರಣ ಮಧ್ಯಮ ವರ್ಗದ ಜನರಿಗೆ ಬಿಸಿ ತುಪ್ಪದಂತಾಗಿದೆ.

ಅತ್ತ ಕಟ್ಟಡ ನಿರ್ಮಾಣ ಸ್ಥಗಿತ ಮಾಡಿದರೆ ಕಾರ್ಮಿಕರು ಮತ್ತೆ ಸಿಗುವುದು ಕಷ್ಟ, ನಿರ್ಮಾಣ ಮುಂದುವರೆಸೋಣ ಎಂದರೆ ಬೆಲೆ ದುಪ್ಪಟಾಗಿದೆ. ಮೇಲ್ವರ್ಗದವರಿಗೆ ಬೆಲೆ ಹೆಚ್ಚಳ ಕಾಡದಿದ್ದರೂ ಮಧ್ಯಮ ವರ್ಗದವರಿಗೆ ಅದರಲ್ಲೂ ಮುಖ್ಯವಾಗಿ ಮನೆ ನಿರ್ಮಾಣ ಮಾಡುತ್ತಿರುವವರಿಗೆ ದುಬಾರಿಯಾಗಿದೆ.

Last Updated : Dec 23, 2020, 9:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.