ETV Bharat / city

ವಿಧಾನಸೌಧದಲ್ಲಿ ಸಿಬ್ಬಂದಿ ಆತ್ಮಹತ್ಯೆ ಯತ್ನ ಪ್ರಕರಣ: ಆಕ್ರೋಶಗೊಂಡ ಗ್ರಂಥಪಾಲಕರಿಂದ ಧರಣಿ - ವಿಧಾನಸೌಧ

ವಿಧಾನಸೌಧದಲ್ಲಿ ಸಹಾಯಕ ಗ್ರಂಥಪಾಲಕ ರೇವಣ್ಣ ಕುಮಾರ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೂರ್ವ ದ್ವಾರದ ಮುಂದೆ ಸಹಾಯಕ ಗ್ರಂಥಪಾಲಕರು ಪ್ರತಿಭಟನೆ ನಡೆಸಿದರು. ಅನುಮತಿ ಇಲ್ಲದೇ ವಿಧಾನಸೌಧ‌ ದ್ವಾರದಲ್ಲಿ ಧರಣಿ ಕುಳಿತ ಹಿನ್ನೆಲೆ ಪೊಲೀಸರು ಪ್ರತಿಭಟನಾನಿರತರನ್ನು ತೆರವು ಮಾಡಿದರು.

ಗ್ರಂಥಪಾಲಕರಿಂದ ಧರಣಿ
author img

By

Published : Jun 25, 2019, 7:01 PM IST

ಬೆಂಗಳೂರು: ಸಹಾಯಕ ಗ್ರಂಥಪಾಲಕ ರೇವಣ್ಣ ಕುಮಾರ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೂರ್ವ ದ್ವಾರದ ಮುಂದೆ ಸಹಾಯಕ ಗ್ರಂಥಪಾಲಕರು ಪ್ರತಿಭಟನೆ ನಡೆಸಿದರು.

ನಿನ್ನೆ ಸಹಾಯಕ ಗ್ರಂಥಪಾಲಕ ರೇವಣ್ಣ ಕುಮಾರ್ ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದ್ರಿಂದ ಆಕ್ರೋಶಗೊಂಡಿರುವ ಸಹಾಯಕ ಗ್ರಂಥಪಾಲಕರು ಪ್ರತಿಭಟನೆ ನಡೆಸಿದರು.

ರೇವಣ್ಣ ಕುಮಾರ್​ ಆತ್ಮಹತ್ಯೆ ಯತ್ನಕ್ಕೆ ಹುದ್ದೆ ಕಾಯಂಗೊಳಿಸದೇ ಇರುವುದೇ ಕಾರಣ ಎಂಬ ಮಾತು ಕೇಳಿ ಬಂದಿತ್ತು. ಅಲ್ಲದೆ, ನೌಕರರಿಗೆ ಕನಿಷ್ಠ ವೇತನ ಸಹ ನೀಡುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ, ಕನಿಷ್ಠ ವೇತನ ಜಾರಿಗೊಳಿಸುವಂತೆ ಗ್ರಂಥಪಾಲಕರು ಪ್ರತಿಭಟನೆ ನಡೆಸಿದರು.

ಗ್ರಂಥಪಾಲಕರಿಂದ ಧರಣಿ

ಈ ವೇಳೆ ಮಾತಾನಾಡಿದ ಗ್ರಂಥಪಾಲಕರು, ರಾಜ್ಯದಲ್ಲಿ 6,500 ಮಂದಿ ಗ್ರಂಥಪಾಲಕರಿದ್ದೇವೆ. ಸರ್ಕಾರ ಕನಿಷ್ಠ ವೇತನ ಕೂಡ ಜಾರಿ ಮಾಡಿಲ್ಲ. ಕೇವಲ 7 ಸಾವಿರ ಸಂಭಾವನೆ ನೀಡುತ್ತಿದ್ದಾರೆ. ಇದರಲ್ಲಿ ಹೆಂಡತಿ ಮಕ್ಕಳನ್ನು ಸಾಕುವುದು ಹೇಗೆ ಎಂದು ಪ್ರಶ್ನಿಸಿದರು. ಇವೆಲ್ಲ ನೋವಿನಿಂದ ನಾವು ಮಾನಸಿಕವಾಗಿ ನೊಂದಿದ್ದೇವೆ. ಈ ಕಾರಣಕ್ಕಾಗಿಯೇ ನಮ್ಮ ಸಹದ್ಯೋಗಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.‌ ಈ ಕೂಡಲೇ ಸರ್ಕಾರ ಕನಿಷ್ಠ ವೇತನ ಜಾರಿ ಮಾಡಬೇಕು. ಇಲ್ಲವಾದರೆ ನಾವೆಲ್ಲರೂ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅನುಮತಿ ಇಲ್ಲದೇ ವಿಧಾನಸೌಧ‌ ದ್ವಾರದಲ್ಲಿ ಧರಣಿ ಕುಳಿತ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾನಿರತರನ್ನು ತೆರವು ಮಾಡಿದರು. ಕೆಲ‌ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ವೇಳೆ ವಿಧಾನಸೌಧ ಮುಂದೆ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕೆಂದ್ರ ವಿಭಾಗದ ಡಿಸಿಪಿ ದೇವರಾಜ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರನ್ನು ಕೂಡಲೇ ತೆರವು ಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Intro:Librarian protestBody:KN_BNG_04_25_LIBRARIANPROTEST_VIDHANSAUDHA_SCRIPT_VENKAT_7201951

ರೇವಣ್ಣ ಕುಮಾರ್ ಆತ್ಮಹತ್ಯೆ ಯತ್ನ: ವಿಧಾನಸೌಧ ಪೂರ್ವ ದ್ವಾರದಲ್ಲಿ ಗ್ರಂಥಪಾಲಕರ ಧರಣಿ

ಬೆಂಗಳೂರು: ವಿಧಾನಸೌಧ ಪೂರ್ವ ದ್ವಾರದ ಮುಂದೆ ಸಹಾಯಕ ಗ್ರಂಥಪಾಲಕರು ಪ್ರತಿಭಟನೆ ನಡೆಸಿದರು.

ನಿನ್ನೆ ರೇವಣ್ಣ ಕುಮಾರ್ ವಿಧಾನಸೌಧದಲ್ಲಿ ಆತ್ಮಹತ್ಯೆ ಯತ್ನ ಹಿನ್ನೆಲೆ ಆಕ್ರೋಶಗೊಂಡ ಸಹಾಯಕ ಗ್ರಂಥಪಾಲಕರು ಪ್ರತಿಭಟನೆ ಕೈಗೊಂಡರು. ಪೂರ್ವ ದ್ವಾರದಲ್ಲಿ ಕೂತು ಪ್ರತಿಭಟನೆ ನಡೆಸಿದ ಗ್ರಂಥಪಾಲಕರು ಕನಿಷ್ಟ ವೇತನ ಜಾರಿಗೊಳಿಸುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ 6500 ಮಂದಿ ಗ್ರಂಥಪಾಲಕರಿದ್ದೇವೆ. ಸರ್ಕಾರ ಕನಿಷ್ಠ ವೇತನ ಜಾರಿ ಮಾಡಿಲ್ಲ. ಕೇವಲ 7 ಸಾವಿರ ಸಂಭಾವನೆ ನೀಡುತ್ತಿದೆ. ಇದರಲ್ಲಿ ಹೆಂಡತಿ ಮಕ್ಕಳನ್ನು ಸಾಕೋಕು ಆಗುತ್ತಿಲ್ಲ. ಇದರಿಂದಾಗಿ ನಾವು ಮಾನಸಿಕವಾಗಿ ನೊಂದಿದ್ದೇವೆ. ಇದರಿಂದಾಗಿಯೇ ನಮ್ಮ ಸಹದ್ಯೋಗಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ವಿಧಾನಸೌಧದಲ್ಲೇ ನಿನ್ನೆ ಆತ್ಮಹತ್ಯೆ ಗೆ ಪ್ರಯತ್ನ ಮಾಡಿದ್ದಾರೆ.‌ಕೂಡಲೇ ಸರ್ಕಾರ ಕನಿಷ್ಟ ವೇತನ ಜಾರಿ ಮಾಡಬೇಕು. ಇಲ್ಲವಾದರೆ ನಾವೆಲ್ಲರೂ ರಾಜೀನಾಮೆ ನೀಡ್ತೇವೆ ಎಂದು ಎಚ್ಚರಿಕೆ ನೀಡಿದರು.

ಅನುಮತಿ ಇಲ್ಲದೆ ವಿಧಾನಸೌಧ‌ ದ್ವಾರದಲ್ಲಿ ಧರಣಿ ಕೂತ ಹಿನ್ನೆಲೆ ಪೊಲೀಸರು ಪ್ರತಿಭಟನಾನಿರತರನ್ನು ತೆರವು ಮಾಡಿದರು. ಕೆಲ‌ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ವಿಧಾನಸೌಧ ಮುಂದೆ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೆಂದ್ರ ವಿಭಾಗದ ಡಿಸಿಪಿ ದೇವರಾಜ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರನ್ನು ಕೂಡಲೇ ತೆರವು ಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.Conclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.