ದೇವನಹಳ್ಳಿ: ತನ್ನ ಜಮೀನಿಗೆ ಗಿಡಗಳ ನೆರಳು ಬೀಳುತ್ತೆ ಎಂದು ಶಾಲಾ ಕಾಂಪೌಂಡ್ನಲ್ಲಿ ಸೊಂಪಾಗಿ ಬೆಳೆದಿದ್ದ ಮರಗಳನ್ನು ಗ್ರಾಮ ಪಂಚಾಯತ್ ಸದಸ್ಯೆಯ ಪತಿ ಕಡಿದು ಹಾಕಿದ ಘಟನೆ ತಾಲೂಕಿನ ಕುಂದಾಣ ಗ್ರಾಮದಲ್ಲಿ ನಡೆದಿದೆ.
ಕುಂದಾಣ ಗ್ರಾಮ ಪಂಚಾಯತ್ ಸದಸ್ಯೆ ಶಶಿಕಲಾ ಎಂಬುವರ ಜಮೀನು ಸರ್ಕಾರಿ ಶಾಲೆಯ ಪಕ್ಕದಲ್ಲಿದ್ದು, ಶಾಲೆಯ ಆವರಣದಲ್ಲಿ ಬೆಳೆದಿದ್ದ ಮರಗಳ ನೆರಳು ಜಮೀನಿನ ಮೇಲೆ ಬೀಳುತ್ತಿದೆ ಎಂಬ ಸಣ್ಣ ಕಾರಣಕ್ಕೆ ಶಶಿಕಲಾ ಗಂಡ ರಮೇಶ್ ಕಡಿದು ಹಾಕಿದ್ದಾನೆ.
ಶಾಲೆಯಲ್ಲಿ ನೆಟ್ಟಿದ್ದ ಮರಗಳನ್ನು ಕಡಿದದ್ದು ಅಲ್ಲದೆ ಬೃಹತ್ ಮರಕ್ಕೂ ಕೊಡಲಿ ಪೆಟ್ಟು ಹಾಕಲು ಮುಂದಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮಸ್ಥರು ತಡೆಹಿಡಿದಿದ್ದಾರೆ. ಪಂಚಾಯತ್ ಸದಸ್ಯೆಯ ಗಂಡನ ಅಂಧ ದರ್ಬಾರ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.