ETV Bharat / city

ನನಗೂ ಗೊತ್ತಾಗ್ತಿಲ್ಲ ಏನಾಗ್ತಿದೆ ಎಂದು: ಗೊಂದಲವಿದೆ ಎಂದ ಕೆ.ಎಸ್.ಈಶ್ವರಪ್ಪ - Resignation of BS Yediyurappa

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಈ ಕುರಿತು ನನಗೂ ಗೊತ್ತಾಗ್ತಿಲ್ಲ ಏನಾಗ್ತಿದೆ ಅಂತ, ನನಗೂ ಗೊಂದವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

KS Eshwarappa
ಕೆ.ಎಸ್.ಈಶ್ವರಪ್ಪ
author img

By

Published : Jul 26, 2021, 11:05 AM IST

ಬೆಂಗಳೂರು: ಬಿಎಸ್​ವೈ ರಾಜೀನಾಮೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ನನಗೂ ಗೊತ್ತಾಗ್ತಿಲ್ಲ ಏನಾಗ್ತಿದೆ ಅಂತ, ನನಗೂ ಗೊಂದಲವಿದೆ ಎಂದು ಹೇಳಿದರು.

ಇದು ಇಡೀ ರಾಜ್ಯದ ಭವಿಷ್ಯದ ವಿಚಾರ, ಹೈಕಮಾಂಡ್ ಮತ್ತು ಯಡಿಯೂರಪ್ಪ ಇಬ್ಬರೂ ಚರ್ಚೆ ಮಾಡ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಯಡಿಯೂರಪ್ಪ ಅವರು ಈಗಾಗಲೇ ಹೇಳಿದ್ದಾರೆ. ಏನಾಗ್ತಿದೆ ಅಂತ ವರಿಷ್ಠರು ಮತ್ತು ಯಡಿಯೂರಪ್ಪಗೆ ಗೊತ್ತು. ಇವರಿಬ್ಬರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿ, ನಿರ್ಧರಿಸುತ್ತಾರೆ ಎಂದರು.

ಸಿಎಂ ರಾಜಭವನ ಭೇಟಿ ಬಗ್ಗೆ ಗೊತ್ತಿಲ್ಲ:

ಕೊರೊನಾ, ಪ್ರವಾಹದ ಮಧ್ಯೆಯೂ ಸಿಎಂ ಬಿಎಸ್​ವೈ ಉತ್ತಮ ಆಡಳಿತ ಕೊಟ್ಟಿದ್ದಾರೆ. ಸಿಎಂ ಬದಲಾವಣೆಗೆ ಇದು ಸೂಕ್ತ ಸಮಯ ಹೌದೋ, ಅಲ್ಲವೋ ಎಂದು ಗೊತ್ತಿಲ್ಲ ಎಂದು ಬಿ.ಸಿ ಪಾಟೀಲ್ ಹೇಳಿದರು.

ಇನ್ನು ಸಿಎಂ ರೇಸ್​ನಲ್ಲಿ ನಿಮ್ಮ ಹೆಸರು ಇದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ನಾನು ಅಷ್ಟು ದೊಡ್ಡವನಲ್ಲ, ಸದ್ಯದ ಬೆಳವಣಿಗೆ ಬಗ್ಗೆ ನನಗೆ ಗೊತ್ತಿಲ್ಲ. ಅದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಇಂದು ಸಿಎಂ ರಾಜಭವನ ಭೇಟಿ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.