ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ಮುಂದುವರಿಸಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಡಿ.ಕೆ.ಶಿವಕುಮಾರ್, ವಯಸ್ಸಿಗೂ ಅನುಭವಕ್ಕೂ ವ್ಯತಾಸ ತಿಳಿಯದ ʼಯಂಗ್ ಅಂಡ್ ಎನರ್ಜಿಟಿಕ್ʼ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್ ಬಗ್ಗೆ ತುತ್ತೂರಿ ಊದುತ್ತಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಯಲ್ಲಿ ಕಾಲು ಭಾಗವಷ್ಟಾದರೂ ಬಿಜೆಪಿ ಪಾಲಿದೆಯಾ? ಹಿಂಬಾಗಿಲ ರಾಜಕೀಯದಿಂದ ಅಧಿಕಾರ ಹಿಡಿಯುತ್ತಿರುವ ಬಿಜೆಪಿಗೆ ಟೀಕಿಸುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಇನ್ನು ಮುಂದೆ ನಾನು ಕಣ್ಣಲ್ಲಿ ನೀರು ಹಾಕೋದಿಲ್ಲ ಎಂದು ನಿರ್ಧರಿಸಿದ್ದೇನೆ : ಹೆಚ್ಡಿಕೆ
ದೇಶದ ಅನ್ನದಾತರನ್ನು ಒಂದೂವರೆ ವರ್ಷಗಳ ಕಾಲ ದಿಲ್ಲಿಯ ಬೀದಿಯಲ್ಲಿ ಕಾಲ ಕಳೆಯುವಂತೆ ಮಾಡಿದ, ಬೆಲೆ ಏರಿಕೆ, ನಿರುದ್ಯೋಗ, ಕೋವಿಡ್ ಅಸಮರ್ಪಕ ನಿರ್ವಹಣೆಯಂತಹ ಕೊಡುಗೆ ನೀಡಿರುವ ಬಿಜೆಪಿಯನ್ನು ಜನರು 2023ರ ಚುನಾವಣೆಯಲ್ಲಿ ವಿಸರ್ಜಿಸದೇ ಬಿಡಲ್ಲ. ಅಲ್ಲಿಯವರೆಗೂ ತಾಳ್ಮೆಯಿಂದ ಕಾದು ನೋಡಿ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೇ, ವಿಧಾನಪರಿಷತ್ ಚುನಾವಣಾ ಪ್ರಚಾರ ವೇದಿಕೆಗಳಲ್ಲಿ ಸರ್ಕಾರ ಹಾಗೂ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.