ಬೆಂಗಳೂರು: ನಟ ಕೋಮಲ್ ಕುಮಾರ್ ಮೇಲೆ ಹಲ್ಲೆ ಪ್ರಕರಣದ ತನಿಖೆಯನ್ನು ಮಲ್ಲೇಶ್ವರಂ ಪೊಲೀಸರು ಚುರುಕುಗೊಳಿಸಿದ್ದಾರೆ.
ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಖುದ್ದು ತನಿಖೆ ನಡೆಸುತ್ತಿದ್ದು, ಹಲ್ಲೆ ನಡೆಸಿದ ಆರೋಪದಡಿ ಬಂಧಿತನಾಗಿರುವ ವಿಜಯ್ ಜಕ್ಕರಾಯನಕೆರೆನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ನಡೆದ ಜಾಗದಲ್ಲಿರುವ ಸಿಸಿಟಿವಿ ಹಾಗೂ ಆರೋಪಿಯ ಚಲನವಲನ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಘಟನೆಗೆ ಮುಖ್ಯ ಕಾರಣ ಎಂಬುದು ಇನ್ನಷ್ಟೆ ತನಿಖೆಯಿಂದ ತಿಳಿಯಬೇಕಾಗಿದೆ.
ಆರೋಪಿ ಮೇಲೆ ಸೆಕ್ಷನ್ 307 ಸಮಂಜಸವೆ ?
ಇನ್ನು ನಿನ್ನೆ ಮಲ್ಲೇಶ್ವರಂ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ಆರೋಪಿ ವಿಜಯ್, ಕೋಮಲ್ ಮೇಲೆ ಹಲ್ಲೆ ನಡೆಸಿದ್ದರು. ಮುಖಕ್ಕೆ ಬಲವಾದ ಏಟು ಬಿದ್ದಿದ್ದರಿಂದ ಕೋಮಲ್ ಬಾಯಲ್ಲಿ ರಕ್ತ ಒಸರುತ್ತಿತ್ತು. ಈ ಕುರಿತು ಪ್ರಕರಣದ ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಪೊಲೀಸ್ರು, ಆರೋಪಿ ಮೇಲೆ ಐಪಿಸಿ ಸೆಕ್ಷನ್ 307ರ ಅಡಿ ಕೇಸ್ ದಾಖಲು ಮಾಡಿದ್ದಾರೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಾರಾಸ್ತ್ರಗಳಿಂದ ಹಲ್ಲೆ, ಇಲ್ಲವೇ ದೇಹದ ಯಾವುದೇ ಭಾಗದಲ್ಲಿ ಶಾಶ್ವತ ಊನವಾದಂತಹ ಸಂದರ್ಭದಲ್ಲಿ ಈ ಸೆಕ್ಷನ್ನಡಿ ಪ್ರಕರಣ ದಾಖಲಿಸಬೇಕಾಗುತ್ತದೆ.ಆದರೆ, ಕೋಮಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಈ ಸೆಕ್ಷನ್ ಸಮಂಜಸಲ್ಲ. ಆದ್ದರಿಂದ ಈ ಕೇಸ್ ಕೋರ್ಟ್ನಲ್ಲಿ ನಿಲ್ಲುವುದು ಅನುಮಾನ ಎಂಬ ಮಾತು ಸಹ ಕೇಳಿ ಬರ್ತಿದೆ.