ETV Bharat / city

ಮಳೆಯಿಂದ ಕೆರೆಯಂತಾದ ಕೊಡಿಗೇಹಳ್ಳಿ ಅಂಡರ್ ಪಾಸ್!  ವಾಹನ ಸವಾರರು ಹೈರಾಣು - undefined

ಮಳೆಯಿಂದಾಗಿ ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್​ನಲ್ಲಿ ನೀರು ತುಂಬಿದ್ದು, ವಾಹನ ಸಾವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್​ನಲ್ಲಿ ನೀರು
author img

By

Published : Apr 20, 2019, 3:31 PM IST

ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ಮಳೆ ಬಂತು ಎಂದರೆ ಸಾಕು ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಅಂತೆಯೇ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್ ಕೆರೆಯಾಗಿ ಮಾರ್ಪಾಡಾಗಿತ್ತು

ಬಿಬಿಎಂಪಿ ವಾರ್ಡ್ ನಂ.8ರ ವ್ಯಾಪ್ತಿಗೆ ಬರುವ ಕೊಡಿಗೇಹಳ್ಳಿ ರೈಲ್ವೆ ಅಂಡರ್​​ಪಾಸ್ ಮಳೆ ನೀರು ತುಂಬಿ, ಬಂದ್​ ಆಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್​ನಲ್ಲಿ ನೀರು

ಕೊಡಿಗೇಹಳ್ಳಿಯಿಂದ ತಿಂಡ್ಲುಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ರಸ್ತೆ ಇದಾಗಿದ್ದು, ಬಸ್, ಕಾರು, ಬೈಕ್ ಸೇರಿದಂತೆ ಸಾವಿರಾರು ವಾಹನಗಳು ನಿತ್ಯ ಸಂಚರಿಸುತ್ತವೆ. ಕಳಪೆ ಕಾಮಗಾರಿಯಿಂದಾಗಿ ಮಳೆ ನೀರು ಹೊರ ಹೋಗುವ ಪೈಪ್​​ಗಳು ಬ್ಲಾಕ್ ಆಗಿದ್ದು, ನೀರು ಶೇಖರಣೆಯಾಗಿ ಅಂಡರ್ ಪಾಸ್ ಕೆರೆಯಂತಾಗಿದೆ.

ಕೆಟ್ಟು ನಿಂತ ವಾಹನಗಳು:

ಮಳೆ ನೀರು ತುಂಬಿರುವ ಅಂಡರ್ ಪಾಸ್ ಮೂಲಕ ಸಂಚರಿಸಲು ಪ್ರಯತ್ನಿಸಿದ ಬೈಕ್, ಸ್ಕೂಟಿ, ಒಮಿನಿ ಸೇರಿದಂತೆ ನೂರಾರು ವಾಹನಗಳು ಕೆಟ್ಟು ನಿಂತಿವೆ. ಕಳೆದೆರಡು ದಿನಗಳಿಂದಲೂ ಇದೇ ಸಮಸ್ಯೆಯಾಗಿದ್ದು, ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ವಾಹನ ಸವಾರರ ಪರದಾಟ:

ಅಂಡರ್​ ಪಾಸ್​ ನೀರಿನಿಂದ ಅಸ್ತವ್ಯಸ್ತಗೊಂಡಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಕೊಡಿಗೇಹಳ್ಳಿಯಿಂದ ತಿಂಡ್ಲುಗೆ ಹೋಗಬೇಕಾದರೆ, ಅನಗತ್ಯವಾಗಿ ಸುಮಾರು 2 ಕಿ.ಮೀ ಸುತ್ತಬೇಕು. ಆದರೀಗ, ಬದಲಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮತ್ತು ಬದಲಿ ಮಾರ್ಗ ಅನುಸರಿಸಬೇಕಾಗಿರುವುದರಿಂದ ಸುಮಾರು 3ಕಿ.ಮೀ ಸುತ್ತು ಹಾಕಿ ಬರಬೇಕಿದೆ ಎಂದು ವಾಹನ ಸವಾರರೊಬ್ಬರು ದೂರಿದ್ದಾರೆ.

ಕಾರ್ಪೋರೇಟರ್ ಪತ್ತೆ ಇಲ್ಲ:

ಕಳೆದ 5ವರ್ಷಗಳ ಹಿಂದೆ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಂದು ಶುರುವಾದ ಧೂಳು, ನೀರು, ಒಳಚರಂಡಿ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಕೊಡಿಗೇಹಳ್ಳಿ ಕಾರ್ಪೊರೇಟರ್ ಚೇತನ್ ಅವರ ಬಳಿ ದೂರು ನೀಡಲು ಹೋದರೆ ಕೈಗೆ ಸಿಗುವುದಿಲ್ಲ ಎಂಬುದು ಸ್ಥಳೀಯರ ಆರೋಪ. ಪೋನ್ ಮಾಡಿದರೂ ರಿಸೀವ್ ಮಾಡುವುದಿಲ್ಲ ಎಂಬ ಆರೋಪವೂ ಇದೆ.

ಮಳೆ ನೀರಿನ ಜೊತೆ ಕೊಳಚೆ ನೀರು ಸೇರಿಕೊಳ್ಳುವ ಪರಿಣಾಮ ಇಲ್ಲಿ ಸಂಚರಿಸುವ ವಾಹನ ಸವಾರರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ.

Intro:ಸಂಜಯ್ ನಾಗ್, ಬೆಂಗಳೂರು. KA10014
**********************************

ಕೆರೆಯಂತಾಗಿರುವ ಕೊಡಿಗೇಹಳ್ಳಿ ಅಂಡರ್ ಪಾಸ್
ಈ ಅಂಡರ್ ಪಾಸ್ ನಲ್ಲಿ ಚಲಿಸಿದರೆ ನಿಮ್ಮ ವಾಹನ ಕೆಟ್ಟು ನಿಲ್ಲೋದು ಗ್ಯಾರಂಟಿ..!!

ಬೆಂಗಳೂರು: ಬೆಂಗಳೂರಿನಂತ ಮಹಾನಗರದಲ್ಲಿ ಮಳೆ ಬಂತೆದಂರೆ ಅನೇಕ ಅವಾಂತರಗಳು ಆಗುತ್ತವೆ. ಹೀಗೆಯೆ ಮೊನ್ನೆ ಬಿದ್ದ ಮಳೆಯಿಂದಾಗಿ ಬಿಬಿಎಂಪಿ ವಾರ್ಡ್ ನಂ.8ರ ವ್ಯಾಪ್ತಿಯ ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಿಗೇಹಳ್ಳಿಯಿಂದ ತಿಂಡ್ಲುಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ರಸ್ತೆ ಇದಾಗಿದ್ದು ಬಸ್, ಕಾರು,ಬೈಕ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಕಳಪೆ ಕಾಮಗಾರಿಯಿಂದಾಗಿ ಮಳೆ ನೀರು ತುಂಬಿಕೊಂಡ ಪರಿಣಾಮ ಹೊರ ಹೋಗುವ ಪೈಪ್ ಗಳು ಬ್ಲಾಕ್ ಆಗಿ ಅಂಡರ್ ಪಾಸ್ ಕೆರೆಯಂತೆ ಮಾರ್ಪಾಡಾಗಿದೆ. ಇನ್ನು, ಈ ಮಾರ್ಗವಾಗಿ ದಿನನಿತ್ಯ ಸಂಚರಿಸುವ ವಾಹನ ಸವಾರರ ಪಾಡು ಹೇಳ ತೀರದಂತಾಗಿದೆ.

Body:
ನಾನು ಹೆಬ್ಬಾಳ ಬಳಿಯಿರುವ ಆಸ್ಪತ್ರೆಗೆ ಅರ್ಜೆಂಟ್ ಆಗಿ ಹೋಗಬೇಕಿತ್ತು. ಹೀಗಾಗಿ, ಈ ಅಂಡರ್ ಪಾಸ್ ನಲ್ಲಿ ಬಂದೆ. ವಾಹನಕ್ಕೆ ನೀರು ತುಂಬಿಕೊಂಡು ಇಲ್ಲಿಯೇ ಕೆಟ್ಟು ನಿಂತಿದೆ. ಇದಕ್ಕೆ ಹೊಣೆಯಾರು? ಎನ್ನುತ್ತಾರೆ. ಇನ್ನು, ದೊಡ್ಡ, ದೊಡ್ಡ ವಾಹನಗಳು ಹೇಗೋ ನೀರಿನೊಳಗೆ ಸಂಚರಿಸಿ ಬಿಡುತ್ತವೆ. ಆದರೆ, ನಮ್ಮಂತಹ ಹೆಣ್ಣು ಮಕ್ಕಳು ಈ ಅಂಡರ್ ಪಾಸ್ ಒಳಗೆ ಸಂಚರಿಸುವುದಾದರೂ ಹೇಗೆ ಎಂದು ಸಮಸ್ಯೆ ಹೇಳಿಕೊಳ್ಳುತ್ತಾರೆ.Conclusion:ಕೆಟ್ಟು ನಿಂತಿರುವ ವಾಹನಗಳು: ಈ ನೀರು ತುಂಬಿರುವ ಅಂಡರ್ ಪಾಸ್ ಮೂಲಕ ಸಂಚರಿಸಲು ಪ್ರಯತ್ನಿಸಿದ ಬೈಕ್, ಸ್ಕೂಟಿ, ಒಮಿನಿ ಸೇರಿದಂತೆ ನೂರಾರು ವಾಹನಗಳು ಕೆಟ್ಟು ನಿಂತಿವೆ. ಕಳೆದೆರಡು ದಿನಗಳಿಂದಲೂ ಇದೇ ಸಮಸ್ಯೆಯಾಗಿದ್ದು, ಯಾವೊಬ್ಬ ಅಧಿಕಾರಿಯೂ ಕೂಡಾ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

3 ಕಿ.ಮೀ ಸುತ್ತಬೇಕು: ಕೊಡಿಗೇಹಳ್ಳಿಯಿಂದ ತಿಂಡ್ಲುಗೆ ಹೋಗಬೇಕಾದರೆ, ಅನಗತ್ಯವಾಗಿ ಸುಮಾರು 2 ಕಿ.ಮೀ ಸುತ್ತಬೇಕು. ಮೊದಲಾದರೆ ಹೇಗೋ ಹೋಗಬಹುದಿತ್ತು. ಆದರೀಗ, ಬದಲಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮತ್ತು ಬದಲಿ ಮಾರ್ಗ ಅನುಸರಿಸಬೇ ಕಿರುವುದರಿಂದ 3ಕಿ.ಮೀ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಾಹನ ಸವಾರರೊಬ್ಬರು ದೂರಿದರು.

ಕಾರ್ಪೋರೇಟರ್ ಪತ್ತೆ ಇಲ್ಲ: ಕಳೆದ 5ವರ್ಷಗಳ ಹಿಂದೆ ರೈಲ್ವೆ ಅಂಡರ್ ಪಾಸ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಂದು ಶುರುವಾದ ದೂಳು, ನೀರು, ಒಳಚರಂಡಿ ಸಮಸ್ಯೆಗಳು ತೊಂದರೆ ಇಲ್ಲಿಯ ಸ್ಥಳೀಯ ನಾಗರೀಕರನ್ನು ಹೈರಾಣಾಗಿಸಿದೆ. ಕೊಡಿಗೇಹಳ್ಳಿ ಕಾರ್ಪೊರೇಟರ್ ಚೇತನ್ ಅವರ ಬಳಿ ದೂರು ನೀಡಲು ಹೋದರೆ ಯಾವುದೇ ಕಾರಣಕ್ಕೂ ಕೈಗೆ ಸಿಗುವುದಿಲ್ಲ. ಪೋನ್ ಮೂಲಕ ಸಂಪರ್ಕಿಸೋಣ ಎಂದರೂ ಪೋನ್ ರಿಸೀವ್ ಮಾಡುವುದಿಲ್ಲ ಎಂಬುದು ಸ್ಥಳಿಯರ ಆರೋಪವಾಗಿದೆ.

ಡ್ರೈನೇಜ್ ವಾಟರ್: ಮಳೆ ನೀರಿನ ಜೊತೆಗೆ ಕೊಳಚೆ ನೀರು ಸೇರಿಕೊಂಡಿರುವ ಪರಿಣಾಮ ಇಲ್ಲಿ ಸಂಚರಿಸುವ ವಾಹನ ಸವಾರರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಸ್ಥಳಕ್ಕಾಗಮಿಸಿ ನೀರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.