ಬೆಂಗಳೂರು: ಅನಧಿಕೃತ ಸಾಫ್ಟ್ವೇರ್ ಬಳಸಿ ರೈಲ್ವೆ ಟಿಕೆಟ್ ಬುಕಿಂಗ್ ಮಾಡುತ್ತಿದ್ದ ಅಕ್ರಮ ಇ-ಟಿಕೆಟ್ ದಂಧೆಯ ಕಿಂಗ್ಪಿನ್ ಒಬ್ಬರನ್ನು ನೈಋತ್ಯ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ನಕಲಿ ಸಾಫ್ಟ್ವೇರ್ ಮೂಲಕ ಐಆರ್ಸಿಟಿಸಿಯ ತತ್ಕಾಲ್ ವ್ಯವಸ್ಥೆ ಹಾಗೂ ಬ್ಯಾಂಕ್ ಓಟಿಪಿ ಬರದೆ ಟಿಕೆಟ್ ಬುಕಿಂಗ್ ಮಾಡಿ ಮೂಲ ಟಿಕೆಟ್ ದರಕ್ಕಿಂತ 4ರಿಂದ 5 ಪಟ್ಟು ಹೆಚ್ಚಿನ ದರ ವಸೂಲಿ ಮಾಡುತ್ತಿದ್ದ ಎಂಬ ಆರೋಪವಿದೆ. ಈ ಸಾಫ್ಟ್ವೇರ್ ಮುಖ್ಯಸ್ಥನನ್ನು ರೈಲ್ವೆ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ವಿಚಾರಣೆಯ ವೇಳೆ ಸ್ಫೋಟಕ ಮಾಹಿತಿ ಬಾಯಿಬಿಟ್ಟ ಈತ ಪಾಕಿಸ್ತಾನದ ಸಾಫ್ಟ್ವೇರ್ ಬಳಿಸಿ ಇಸ್ರೋ, ರೈಲ್ವೆ ಹಾಗೂ ಇತರೆ ಸರ್ಕಾರಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲು ಹೊಂಚು ಹಾಕಿದ್ದ. 3,000 ಬ್ಯಾಂಕ್ ಖಾತೆಯ ವಿವರ ಜೊತೆಗೆ ಬಿಟ್ ಕಾಯಿನ್ ಮಾಹಿತಿ ಸಹ ಇವನ ಬಳಿ ಇತ್ತು ಎಂದು ರೈಲ್ವೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
25,000 ಹ್ಯಾಕರ್ಗಳ ಜೊತೆ ಸಂಪರ್ಕ ಇರಿಸಿಕೊಂಡಿದ್ದ. ಭಾರತದ ವಿರುದ್ಧ ಕೆಲಸ ಮಾಡುವರೊಂದಿಗೆ ಸಂವಹನ ನಡೆಸುತ್ತಿದ್ದ. ಹ್ಯಾಂಕಿಂಗ್ ಹಾಗೂ ನಕಲಿ ಟಿಕೆಟ್ನಿಂದ ಬಂದ ಅಕ್ರಮ ಹಣ ಭಾರತದ ವಿರೋಧಿ ಕೃತ್ಯಕ್ಕೆ ಕೆಲಸಕ್ಕೆ ಬಳಸುತ್ತಿದ್ದ. 100ಕ್ಕೂ ಅಧಿ ಆರೋಪಿಗಳನ್ನು ದೇಶಾದ್ಯಂತ ಬಂಧಿಸಿರುವ ರೈಲ್ವೆ ಪೊಲೀಸರು, ಸಾಫ್ಟ್ವೇರ್ ಹಾಗೂ ಕೋಡ್ಗಳನ್ನು ನಾಶಪಡಿಸಿದ್ದಾರೆ.