ETV Bharat / city

ರಾಜ್ಯಕ್ಕೆ ಮುಂದಿನ ನಾಲ್ಕು ದಿನ ಉತ್ತಮ ಮಳೆ: ದ.ಒಳನಾಡಲ್ಲೂ ವ್ಯಾಪಕ ವರ್ಷಧಾರೆ - ಮಳೆ ಪ್ರಮಾಣ ವರದಿ

ಇಂದು ದ.ಕನ್ನಡ, ಉಡುಪಿ, ಉ.ಕನ್ನಡದಲ್ಲಿ ಧಾರಾಕಾರ ಮಳೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿತ್ತು. ನಾಳೆಯೂ ಭಾರೀ ಮಳೆಯಾಗಬಹುದೆಂದು ಮೂನ್ಸೂಚನೆ ನೀಡಿದೆ. ಉತ್ತರದ ಒಳನಾಡಿನ ಭಾಗದಲ್ಲಿಯೂ ಜುಲೈ 21 ರ ವರೆಗೆ ಸಾಧಾರಣ ಮಳೆಯಾಗಲಿದೆ ಎಂದಿದೆ.

karnataka-weather-report
ಸಿಎಸ್ ಪಾಟೀಲ್
author img

By

Published : Jul 17, 2020, 10:56 PM IST

ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಜುಲೈ 17 ರಿಂದ 20 ರವರೆಗೆ ವ್ಯಾಪಕ ಮಳೆಯಾಗಲಿದ್ದು, 21 ರಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞರಾದ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಇಂದು ದ.ಕನ್ನಡ, ಉಡುಪಿ, ಉ.ಕನ್ನಡದಲ್ಲಿ ಧಾರಾಕಾರ ಮಳೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿತ್ತು. ನಾಳೆಯೂ ಭಾರೀ ಮಳೆಯಾಗಬಹುದೆಂದು ಮೂನ್ಸೂಚನೆ ನೀಡಿದೆ. ಉತ್ತರದ ಒಳನಾಡಿನ ಭಾಗದಲ್ಲಿಯೂ ಜುಲೈ 21 ರ ವರೆಗೆ ಸಾಧಾರಣ ಮಳೆಯಾಗಲಿದೆ ಎಂದಿದೆ.

ರಾಜ್ಯಕ್ಕೆ ಮುಂದಿನ ನಾಲ್ಕು ದಿನ ಉತ್ತಮ ಮಳೆ

ದ.ಒಳನಾಡಿನಲ್ಲಿ ಜುಲೈ 17 ಹಾಗೂ 21 ರಂದು ವ್ಯಾಪಕ ಮಳೆ ಮತ್ತು 18-19 ರಂದು ದ.ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಜುಲೈ 20 ರಂದು ಎಲ್ಲೋ ಅಲರ್ಟ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಇಂದು ಕೂಡಾ ಸಾಧಾರಣ ಮಳೆಯಾಗಿದ್ದು, ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 19 ಸೆಂ.ಮೀ ಮಳೆಯಾಗಿದ್ದು ಇದು ರಾಜ್ಯದಲ್ಲೇ ಗರಿಷ್ಟ ಮಳೆಯಾದ ಪ್ರದೇಶವಾಗಿದೆ.

ಭಾಗಮಂಡಲದಲ್ಲಿ 1 2 ಸೆಂ.ಮೀ, ಕೊಲ್ಲೂರು 13, ಮುಲ್ಕಿ, ಶಿರಾ ಕೋಟಾದಲ್ಲಿ ತಲಾ 11 cm, ಕುಂದಾಪುರ-9, ಧರ್ಮಸ್ಥಳ, ಹೊನ್ನಾವರ 9 cm, ಮನಿ, ಉಪ್ಪಿನಂಗಡಿ, ಮೂಡಿಗೆರೆ, ಗೋಕರ್ಣ ತಲಾ 8 cm , ಚಿಕ್ಕಮಂಗಳೂರು 9.8 cm, ಕೊಟ್ಟಿಗೆಹಾರ 8 cm, ಮಡಿಕೇರಿಯಲ್ಲಿ 7 cm ಮಳೆಯಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.