ETV Bharat / city

ಪಠ್ಯ ವಿವಾದ ಜಟಿಲ: ಇಂಟರ್ ನ್ಯಾಷನಲ್ ಬಸವ ಮ್ಯೂಸಿಯಂ ಎಕ್ಸ್ಪರ್ಟ್ ಕಮಿಟಿಯ 7 ಲೇಖಕರ ರಾಜೀನಾಮೆ

author img

By

Published : Jun 2, 2022, 7:54 AM IST

ಪಠ್ಯ ಪರಿಷ್ಕರಣೆ ವಿವಾದ ಹೊಸ ಸ್ವರೂಪ ಜತೆಗೆ ಎರಡು ಆಯಾಮ ಪಡೆದುಕೊಂಡಿದೆ. ಒಂದು ಕಡೆ ಪಠ್ಯಪುಸ್ತಕದಿಂದ ತಮ್ಮ ಲೇಖನ ಕೈಬಿಡುವಂತೆ ಸಾಹಿತಿಗಳು ಆಗ್ರಹ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿಷ್ಠಾನಗಳಿಂದ ಸಾಹಿತಿಗಳು ಹೊರ ನಡೆಯುತ್ತಿದ್ದಾರೆ. ಇದೀಗ ಇಂಟರ್ ನ್ಯಾಷನಲ್ ಬಸವ ಮ್ಯೂಸಿಯಂ ಎಕ್ಸ್ಪರ್ಟ್ ಕಮಿಟಿಯ 7 ಜನ ಲೇಖಕರ ರಾಜೀನಾಮೆ ನೀಡಿದ್ದಾರೆ.

ಪಠ್ಯ ವಿವಾದ ಜಟಿ
ಪಠ್ಯ ವಿವಾದ ಜಟಿ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೇ ತೀವ್ರವಾಗುತ್ತಿದೆ. ಸರ್ಕಾರದ ಕ್ರಮ ಖಂಡಿಸಿ ಸಾಹಿತಿಗಳ ಸರಣಿ ಪತ್ರ ಚಳವಳಿ ಮುಂದುವರಿದಿದೆ. ಈ ಮಧ್ಯೆ ಇದೀಗ ಪಠ್ಯದಲ್ಲಿ ಬಸವ ತತ್ವಕ್ಕೆ ವಿರುದ್ಧವಾಗಿ ಪರಿಷ್ಕರಣೆ ಮಾಡಲಾಗಿದೆ ಎಂದು ಇಂಟರ್ ನ್ಯಾಷನಲ್ ಬಸವ ಮ್ಯೂಸಿಯಂ ಎಕ್ಸ್ಪರ್ಟ್ ಕಮಿಟಿಯ 7 ಜನ ಲೇಖಕರ ರಾಜೀನಾಮೆ ನೀಡಿದ್ದಾರೆ. ಸರ್ಕಾರ ಇತಿಹಾಸವನ್ನು ತಿರುಚುವ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪ್ರತಿಭಟನೆ ಅಂಗವಾಗಿ ಕಮಿಟಿಯ ಲೇಖಕರು ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡಿದ ಸಾಹಿತಿಗಳು:

  • ಎಸ್ ಎಂ ಜಾಮಾದಾರ್ , ಐಎಎಸ್ ಅಧಿಕಾರಿ
  • ಡಾ. ಗುರುಪಾದ ಮರೀಗುದ್ದಿ - ಸಾಹಿತಿ
  • ಡಾ. ಹನುಮಾಕ್ಷಿಗೋಗಿ - ಸಾಹಿತಿ
  • ಡಾ. ಬಸವರಾಜ್ ಸಬರಾದ್ - ಸಾಹಿತಿ
  • ರಂಜಾನ್ ದರ್ಗಾ- ಸಾಹಿತಿ
  • ಶಂಕರ್ ದೇವನೂರು - ಸಾಹಿತಿ
  • ಡಾ.ಟಿ ಆರ್ ಚಂದ್ರಶೇಖರ್ - ಸಾಹಿತಿ
    ಲೇಖಕಿ, ಸಾಮಾಜಿಕ ಚಿಂತಕಿ ದು.ಸರಸ್ವತಿ ಪತ್ರ
    ಲೇಖಕಿ, ಸಾಮಾಜಿಕ ಚಿಂತಕಿ ದು.ಸರಸ್ವತಿ ಪತ್ರ

ಇತ್ತ, ಸಾಹಿತಿ ಎಚ್.ಎಸ್.ಅನುಪಮಾ ತಮ್ಮ‌ ಎರಡು ಬರೆಹಗಳನ್ನು ಪಠ್ಯಪುಸ್ತಕಗಳಿಂದ ಹಿಂಪಡೆಯಲು ಮುಂದಾಗಿದ್ದಾರೆ. 7ನೇ ತರಗತಿಯ ಕನ್ನಡ ಭಾಷಾ( ಪ್ರಥಮ) ಪಠ್ಯ ಪುಸ್ತಕದಲ್ಲಿ ಸಾವಿತ್ರಿಬಾಯಿ ಫುಲೆ( ಗದ್ಯ) ಬರಹವನ್ನ ಹಾಗೂ 7ನೇ ತರಗತಿಯ ಕನ್ನಡ ಭಾಷಾ( ತೃತೀಯ) ಪಠ್ಯಪುಸ್ತಕದಲ್ಲಿ 'ನೆನೆವುದೆನ್ನ ಮನ' ಅಳವಡಿಸಲು ಈ ಮೊದಲು ಒಪ್ಪಿಗೆ ನೀಡಿದ್ದೆ. ಆದರೆ ಶಿಕ್ಷಣದ ಬಗೆಗಾಗಲಿ, ಕನ್ನಡಿಯಂತಹ ಮನಸ್ಸಿನ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿರದ ದುರುಳರ ಪಠ್ಯಪುಸ್ತಕದಲ್ಲಿ ಕೈಕಾಲಾಡಿಸಿ ಮಾಡಿರುವ ಅವಾಂತರ ತುಂಬಾ ಬೇಸರ ತಂದಿದೆ. ಈ ಕಾರಣದಿಂದ ನನ್ನ ಬರಹ ಅಳವಡಿಸಲು ನೀಡಿದ್ದ ಒಪ್ಪಿಗೆಯನ್ನ ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ಹಾಗೇ, ಲೇಖಕಿ, ಸಾಮಾಜಿಕ ಚಿಂತಕಿ ದು.ಸರಸ್ವತಿಯವರು ತಮ್ಮ ಬರೆಹವನ್ನು ಹಿಂದಕ್ಕೆ ಪಡೆದಿದ್ದಾರೆ. ಏಳನೇ ತರಗತಿಯ ಕನ್ನಡ ಭಾಷಾ ಪಠ್ಯ ಪುಸ್ತಕದಲ್ಲಿ ನನ್ನ ಅಯ್ಯ ಎಂಬ ಗದ್ಯ ಬರಹವನ್ನ ಅಳವಡಿಸಲಾಗಿದೆ. ಆದರೆ ಕುವೆಂಪು ಅವರಂತಹ ವ್ಯಕ್ತಿತ್ವವನ್ನ ಅವಮಾನಿಸುತ್ತಿರುವ ಹಿನ್ನೆಲೆಯಲ್ಲಿ ಗದ್ಯ ಬರಹವನ್ನ ಹಿಂಪಡೆಯುವುದಾಗಿ ಹೇಳಿದ್ದಾರೆ. ಈ ಮೂಲಕ ಸಾಹಿತಿಗಳ ವಾಪಸ್ ಚಳವಳಿ ಮುಂದುವರೆದಿದೆ.

ಸಾಹಿತಿ ಹೆಚ್.ಎಸ್.ಅನುಪಮಾ ಪತ್ರ
ಸಾಹಿತಿ ಹೆಚ್.ಎಸ್.ಅನುಪಮಾ ಪತ್ರ

ಅಷ್ಟೇ ಅಲ್ಲ ಸ್ವಾಮೀಜಿಗಳು ಕೂಡ ಪಠ್ಯ ಪರಿಷ್ಕರಣೆ ವಿರುದ್ಧ ಧ್ವನಿ ಎತ್ತಿದ್ದಾರೆ. ಪಠ್ಯ ಪರಿಷ್ಕರಣೆ ವಿವಾದ ಹೊಸ ಸ್ವರೂಪ ಜತೆಗೆ ಎರಡು ಆಯಾಮ ಪಡೆದುಕೊಂಡಿದೆ. ಒಂದು ಕಡೆ ಪಠ್ಯಪುಸ್ತಕದಿಂದ ತಮ್ಮ ಲೇಖನ ಕೈಬಿಡುವಂತೆ ಸಾಹಿತಿಗಳು ಆಗ್ರಹ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿಷ್ಠಾನಗಳಿಂದ ಸಾಹಿತಿಗಳು ಹೊರ ನಡೆಯುತ್ತಿದ್ದಾರೆ. ಇದರಿಂದಾಗಿ ವಿವಾದ ಮತ್ತಷ್ಟು ಜಟಿಲವಾಗುವಂತಾಗಿದೆ. ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಬಿಸಿತುಪ್ಪವಾಗಿ ಪರಿಣಮಿಸಿದೆ.

ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ರದ್ದುಗೊಳಿಸಿ, ವರದಿಯನ್ನು ತಿರಸ್ಕರಿಸಬೇಕೆಂದು ಮಾಜಿ ಶಿಕ್ಷಣ ಸಚಿವರೂ ಆಗಿರುವ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಹೆಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ. ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವವನ್ನು ತಿಳಿಸಬೇಕು. ಆದರೆ, ಪ್ರಜಾಪ್ರಭುತ್ವ ಬಿಟ್ಟು ಕೇಸರೀಕರಣ ಮಾಡಲಾಗುತ್ತಿದೆ ಎಂದು ಆಡಳಿತಾರೂಢ ಪಕ್ಷದ ಸದಸ್ಯರೇ ಆರೋಪಿಸಿರುವುದು ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ.

ವಿವಾದ ತೀವ್ರವಾದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ನಾಗೇಶ್ ಅವರ ವರದಿ ತಯಾರಿಸಿದ್ದು, ಇಂದು ಅದನ್ನು ಸಿಎಂ ಬೊಮ್ಮಾಯಿ ಅವರಿಗೆ ಸಲ್ಲಿಸಲಿದ್ದಾರೆ. ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಸಿಎಂ ಭರವಸೆ ನೀಡಿದ್ದಾರೆ.

(ಓದಿ: ಪಠ್ಯ ಪರಿಷ್ಕರಣೆಯ ಪ್ರಮಾದಗಳ ಬಗ್ಗೆ ಪ್ರತಿರೋಧ ತೀವ್ರ.. ಸರ್ಕಾರದ ವಿರುದ್ಧ ಸಾಹಿತಿಗಳಿಂದ ದೊಡ್ಡ ಸಂಘರ್ಷ!?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.