ETV Bharat / city

ಬಂದ್​ಗೆ ಬೆಂಬಲ ನೀಡದಿರಲು ಪ್ರವೀಣ್ ಶೆಟ್ಟಿ ಬಣ ತೀರ್ಮಾನ: ಯಲಹಂಕದಲ್ಲಿ ಬೃಹತ್ ಪ್ರತಿಭಟನೆ

ಡಿಸೆಂಬರ್ 31ರಂದು ಕರೆ ನೀಡಿರುವ ಕರ್ನಾಟಕ ಬಂದ್ ಮಾಡುವುದು ಬೇಡ. ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಿಗೆ ಬಂದ್ ಮುಂದೂಡುವಂತೆ ಮನವಿ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ
ಕರ್ನಾಟಕ ರಕ್ಷಣಾ ವೇದಿಕೆ
author img

By

Published : Dec 30, 2021, 1:21 PM IST

ಬೆಂಗಳೂರು: ಡಿಸೆಂಬರ್ 31ರಂದು ಕರೆ ನೀಡಿರುವ ಬಂದ್​ಗೆ ಬೆಂಬಲ ನೀಡದಿರಲು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ನಿರ್ಧರಿಸಿದೆ. ಅಲ್ಲದೇ, ‌ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಿಗೆ ಬಂದ್ ಮುಂದೂಡುವಂತೆ ಮನವಿ ಮಾಡುವುದಾಗಿ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಮನವಿ ಮಾಡಿದರು. ಬಳಿಕ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು‌. ಕೇಂದ್ರ ಸರ್ಕಾರ ಹಾಗೂ ಲೋಕಸಭಾ ಸದಸ್ಯರನ್ನು ಎಚ್ಚರಿಸುವ ಸಂಕೇತವಾಗಿ ಜಾಗಟೆ ಚಳವಳಿ ನಡೆಸಿದರು. ಉದ್ಧವ್ ಠಾಕ್ರೆ ವಿರುದ್ಧ ಧಿಕ್ಕಾರ ಕೂಗಿ, ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ಗಡಿಭಾಗದ ಎಂಇಎಸ್ ಶಾಸಕರನ್ನು, ಕೇಂದ್ರ ಸರ್ಕಾರವನ್ನು ಎಚ್ಚರಿಸಲು ಜಾಗಟೆ ಚಳವಳಿ ಮಾಡಲಾಗ್ತಿದೆ. ಎಂಇಎಸ್ ನಿಷೇಧಿಸಬೇಕು. ಅವರ ಗೂಂಡಾಗಿರಿ ವಿರುದ್ಧ ಹೋರಾಟ ಯಾವತ್ತೂ ಇರುತ್ತದೆ. ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿ, ಬಸವೇಶ್ವರರ ಪುತ್ಥಳಿಗೆ ಮಸಿ ಬಳಿದು, ರಾಜ್ಯಸರ್ಕಾರದ ಶವಯಾತ್ರೆ ಮಾಡಿ ಗೂಂಡಾಗಿರಿ ಮಾಡಿದ್ದಾರೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಇಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಸಿಎಂ ಕೂಡ ಸಕಾರಾತ್ಮಕವಾಗಿ ಆಶ್ವಾಸನೆ ನೀಡಿದ್ದಾರೆ ಎಂದರು.

ಇಂದಿನ ಹೋರಾಟ ಮುಗಿದ ಕೂಡಲೇ ವಾಟಾಳ್ ಅವರನ್ನು ಭೇಟಿಯಾಗಿ ಕೈ ಮುಗಿದು ಮನವಿ ಮಾಡ್ತೇವೆ. ಬಂದ್ ಮುಂದೂಡಬೇಕು. ಕನ್ನಡಿಗರ ಹಿತದೃಷ್ಟಿಯಿಂದ, ಕರ್ನಾಟಕದ ಉದ್ಯಮಿಗಳು, ಚಿತ್ರರಂಗದ ಹಿತದೃಷ್ಟಿಯಿಂದ ವಾಟಾಳ್ ಅವರನ್ನು ಹಾಗೂ ಇತರೆ ಸಂಘಟನೆಗಳ ಮನವೊಲಿಸುವ ಕೆಲಸ ಮಾಡುತ್ತೇನೆ. ಸರ್ಕಾರಕ್ಕೂ ಕಾಲಾವಕಾಶ ಕೊಡಬೇಕಾಗುತ್ತದೆ. ಮುಖ್ಯಮಂತ್ರಿಗಳು ಕೂಡ ವಾಟಾಳ್ ಅವರಿಗೆ ಬಂದ್ ನಡೆಸದಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.