ಬೆಂಗಳೂರು: ರಾಜ್ಯ ಹೈಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 53 ವಕೀಲರಿಗೆ ಹಿರಿಯ ವಕೀಲರಾಗಿ ಹೈಕೋರ್ಟ್ ಪದೋನ್ನತಿ ನೀಡಿದೆ.
ಈ ಕುರಿತು ಇಂದು ಹೈಕೋರ್ಟ್ ರಿಜಿಸ್ಚ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಅಧಿಸೂಚನೆ ಹೊರಡಿಸಿದ್ದಾರೆ.
ವಕೀಲರ ಕಾಯ್ದೆಯ ಸೆಕ್ಷನ್ 16(2) ಹಾಗೂ ಕರ್ನಾಟಕ ಹೈಕೋರ್ಟ್ (ಡೆಸಿಗ್ನೇಷನ್ ಆಫ್ ಸೀನಿಯರ್ ಅಡ್ವೊಕೇಟ್) ನಿಯಮಗಳು-2018ರ ಪ್ರದತ್ತವಾದ ಅಧಿಕಾರ ಬಳಸಿ 53 ವಕೀಲರಿಗೆ ಹಿರಿಯ ವಕೀಲರಾಗಿ ಪದೋನ್ನತಿ ನೀಡಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸಮಿತಿ ವರದಿ ಬಂದ ಬಳಿಕ ಪರಿಹಾರ: ಸಚಿವ ಅಶ್ವತ್ಥ್ನಾರಾಯಣ