ETV Bharat / city

ಎಸ್​ಡಿಪಿಐ ವಿರುದ್ಧ ವಿಸ್ತೃತ ವರದಿ ಸಿದ್ಧಪಡಿಸುತ್ತಿರುವ ಸರ್ಕಾರ: ಸಂಘಟನೆ ವಿರುದ್ಧದ ಕ್ರೈಂ‌ ಡೈರಿಯಲ್ಲೇನಿದೆ?

author img

By

Published : Aug 21, 2020, 1:46 AM IST

ಬೆಂಗಳೂರು ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾದ ಆರೋಪದ ಮೇಲೆ ಎಸ್​ಡಿಪಿಐ ಸಂಘಟನೆ ನಿಷೇಧದ ಕೂಗು ಕೇಳಿಬರುತ್ತಿದೆ. ಅಂತೆಯೇ ರಾಜ್ಯ ಸರ್ಕಾರ, ಸಂಘಟನೆ ಮೇಲಿನ ಪ್ರಕರಣಗಳ ಪಟ್ಟಿ ಮಾಡಿ ಕೇಂದ್ರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ಎಸ್​ಡಿಪಿಐ ವಿರುದ್ಧ ವಿಸ್ತೃತ ವರದಿ ಸಿದ್ಧಪಡಿಸುತ್ತಿರುವ ಸರ್ಕಾರ

ಬೆಂಗಳೂರು: ಎಸ್​​ಡಿ​​ಪಿಐ ಸಂಘಟನೆ ನಿಷೇಧದ ಕೂಗು ಸದ್ಯ ಜೋರಾಗಿ ಕೇಳಿ ಬರುತ್ತಿದೆ. ರಾಜ್ಯ ಸರ್ಕಾರ ಎಸ್​ಡಿಪಿಐ ಸಂಘಟನೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದೆ. ಅಷ್ಟಕ್ಕೂ ಕಳೆದ ಎಂಟು ವರ್ಷಗಳಲ್ಲಿ ಎಸ್​ಡಿಪಿಐ ಭಾಗಿಯಾಗಿರುವ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿರುವ ಸರ್ಕಾರ, ಸಾಕ್ಷ್ಯ ಸಮೇತ ವಿಸ್ತೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ.

ಸಂಘಟನೆ ವಿರುದ್ಧ ವಿಸ್ತೃತ ವರದಿ ಸಿದ್ಧಪಡಿಸುತ್ತಿರುವ ಸರ್ಕಾರ

ಎಸ್​ಡಿಪಿಐ ಸಂಘಟನೆ‌ ನಿಷೇಧ ಸದ್ಯ ರಾಜ್ಯದಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿರುವ ವಿಚಾರ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯ ಬಳಿಕ ಬಿಜೆಪಿ ಸರ್ಕಾರ ಈ ಬಾರಿ ಎಸ್​ಡಿಪಿಐ ಸಂಘಟನೆ ನಿಷೇಧ ಮಾಡಲು ಮುಂದಾಗಿದೆ. ಇದಕ್ಕಾಗಿ ಎಸ್​ಡಿಪಿಐ ವಿರುದ್ಧ ಈವರೆಗೆ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ಕಲೆ ಹಾಕುತ್ತಿದೆ. ಈ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ, ಸಂಘಟನೆ ಬ್ಯಾನ್​ಗೆ ಶಿಫಾರಸು ಮಾಡಲು ನಿರ್ಧರಿಸಿದೆ.

ಈ ಬಾರಿ ರಾಜ್ಯ ಗೃಹ ಇಲಾಖೆ ಸಾಕ್ಷಿ ಸಮೇತವಾಗಿ ಗೃಹ ಇಲಾಖೆಗೆ ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದೆ. ಎಸ್​ಡಿಪಿಐ, ಪಿಎಫ್​ಐ ಸದಸ್ಯರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸ್ವರೂಪ, ಪ್ರಕರಣಗಳ ತನಿಖೆ, ಪ್ರಕರಣಗಳಲ್ಲಿ ಸಂಘಟನೆಯ ಪಾತ್ರ, ಕೋರ್ಟ್​ಗೆ ಸಲ್ಲಿಕೆಯಾಗಿರುವ ಆರೋಪಪಟ್ಟಿ ಸೇರಿ ಸಂಪೂರ್ಣ ಸವಿವರವಾದ ವರದಿಯನ್ನು ಕಡತಗಳ ಸಮೇತವಾಗಿ ಕಳುಹಿಸಿ ಕೊಡಲು ತೀರ್ಮಾನಿಸಿದೆ. ಬಿಜೆಪಿ ಸರ್ಕಾರ ಹೇಳುವಂತೆ ಎಸ್​​ಡಿಪಿಐ ಮತ್ತು ಅದರ ಮೂಲ ಸಂಘಟನೆ ಪಿಎಫ್​ಐ ಸದಸ್ಯರ ವಿರುದ್ಧ 2008ರಿಂದೀಚೆಗೆ ಒಟ್ಟು 19 ಪ್ರಕರಣಗಳು ದಾಖಲಾಗಿವೆ.

ಸಂಘಟನೆಯ ವಿರುದ್ಧದ ಕ್ರೈಂ ಡೈರಿ:

  • 2008- ವಸಂತಕುಮಾರ್ ಪಿಳ್ಳೈ, ಹುಣಸೂರು
  • 2009- ಮೈಸೂರು ಉದಯಗಿರಿಯ ಸೂರ್ಯ ನಾರಾಯಣ ದೇವಸ್ಥಾನದ ಮುಂದೆ ಎಳನೀರು ವ್ಯಾಪಾರಿ ವೆಂಕಟೇಶ್ ಎಂಬವನ ಹತ್ಯೆ
  • 2009- ಆನಂದ ಪೈ ಮತ್ತು ರಮೇಶ್ ಎಂಬ ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ, ಹತ್ಯೆ ಪ್ರಕರಣ
  • 2009- ಮೈಸೂರು ಅಶೋಕ ರಸ್ತೆಯಲ್ಲಿ ಹರೀಶ್ ಎಂಬವನ ಹತ್ಯೆ
  • 2009- ಶಶಿಕುಮಾರ್ ಎಂಬ ಸವಿತಾ ಸಮಾಜದ ಯುವಕನ ಹತ್ಯೆ
  • 2009- ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾದ ಗಿರಿಧರ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ
  • 2011- ಹುಣಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಕೊಲೆ
  • 2013- ಮಂಗಳೂರಿನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ
  • 2015- ಶಿವಮೊಗ್ಗದಲ್ಲಿ ವಿಶ್ವನಾಥ್ ಎಂಬ ಆರ್ ಎಸ್ ಎಸ್​​ ಕಾರ್ಯಕರ್ತನ ಹತ್ಯೆ
  • 2015- ಮೂಡಬಿದಿರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಎಂಬಾತನ ಹತ್ಯೆ
  • 2016- ಹುಣಸೂರಿನ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ರಾಜು ಎಂಬ ಹಿಂದೂಪರ ಕಾರ್ಯಕರ್ತನ ಹತ್ಯೆ
  • 2016- ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ ಕುಟ್ಟಪ್ಪ ಎಂಬವರ ಹತ್ಯೆ
  • 2016- ಕುಶಾಲನಗರದಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ
  • 2016- ಬೆಂಗಳೂರಿನ ಶಿವಾಜಿನಗರದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ
  • 2019- ಕಲಾಸಿಪಾಳ್ಯದಲ್ಲಿ ಆರ್ ಎಸ್​ ಎಸ್​ ಕಾರ್ಯಕರ್ತ ವರುಣ್ ಮೇಲೆ ಹಲ್ಲೆ
  • 2020- ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸಂಚು
  • 2020- ಸಿಎಎ ವಿರುದ್ಧದ ಮಂಗಳೂರು ಗಲಭೆ
  • 2020- ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.