ETV Bharat / city

2021-22ರ ನಿಗದಿತ ಗುರಿ ದಾಟಿ ಭರ್ಜರಿ ರಾಜಸ್ವ ಸಂಗ್ರಹ ಮಾಡಿದ ಅಬಕಾರಿ ಇಲಾಖೆ

ಲಾಕ್‌ಡೌನ್ ಸೇರಿ ಇತರ ಕೋವಿಡ್ ನಿರ್ಬಂಧಗಳ ಮಧ್ಯೆ ಅಬಕಾರಿ ಇಲಾಖೆ ಭರ್ಜರಿ ತೆರಿಗೆ ಸಂಗ್ರಹ ಮಾಡಿದ್ದು, ನಿರೀಕ್ಷಿತ ಆದಾಯ ಗುರಿಗಿಂತಲೂ ಅಧಿಕ ತೆರಿಗೆ ಸಂಗ್ರಹ ಮಾಡಿ ಉತ್ತಮ ಸಾಧನೆ ತೋರಿದೆ.

karnataka-excise-department-income-beyond-its-stated-target-of-2021-22
2021-22ರ ನಿಗದಿತ ಗುರಿ ದಾಟಿ ಭರ್ಜರಿ ರಾಜಸ್ವ ಸಂಗ್ರಹ ಮಾಡಿದ ಅಬಕಾರಿ ಇಲಾಖೆ
author img

By

Published : Apr 2, 2022, 7:51 AM IST

ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆ ನಿಗದಿತ ಗುರಿಯನ್ನೂ ಮೀರಿ ತೆರಿಗೆ ಸಂಗ್ರಹ ಮಾಡಿದೆ. 2021-22 ಸಾಲಿನಲ್ಲಿ ಅಬಕಾರಿ ಇಲಾಖೆ 26,276.83 ಕೋಟಿ ರೂ. ರಾಜಸ್ವ ಸಂಗ್ರಹಿಸಿ ನಿರೀಕ್ಷೆಗಿಂತಲೂ ಉತ್ತಮ ಪ್ರಗತಿ ಸಾಧಿಸಿದೆ. 2021-22 ಸಾಲಿನ ಆರ್ಥಿಕ ವರ್ಷ ಮುಕ್ತಾಯವಾಗಿದೆ. ರಾಜ್ಯ ಸರ್ಕಾರ ಈ ಬಾರಿಯೂ ತೆರಿಗೆ ಸಂಗ್ರಹದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಆದರೆ ಈ ಬಾರಿಯೂ ರಾಜ್ಯದ ಬೊಕ್ಕಸದ‌ ಕೈ ಹಿಡಿದಿರುವುದು ಅಬಕಾರಿ ಇಲಾಖೆ. ಅಬಕಾರಿ ಇಲಾಖೆ ನಿರೀಕ್ಷಿತ ಆದಾಯ ಗುರಿಗಿಂತಲೂ ಅಧಿಕ ತೆರಿಗೆ ಸಂಗ್ರಹ ಮಾಡಿ ಉತ್ತಮ ಸಾಧನೆ ತೋರಿಸಿದೆ. ಲಾಕ್‌ಡೌನ್ ಸೇರಿ ಇತರ ಕೋವಿಡ್ ನಿರ್ಬಂಧಗಳ ಮಧ್ಯೆ ಅಬಕಾರಿ ಇಲಾಖೆ ಭರ್ಜರಿ ತೆರಿಗೆ ಸಂಗ್ರಹಿಸಿದೆ.

ಒಟ್ಟು ತೆರಿಗೆ ಸಂಗ್ರಹ ಹೇಗಿದೆ?: ಅಬಕಾರಿ ಇಲಾಖೆ 2021-22 ಸಾಲಿನ ಅಂತ್ಯಕ್ಕೆ ಬರೋಬ್ಬರಿ 26,276.83 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಿದೆ. ನಿಗದಿತ ಗುರಿ ಹೊಂದಿದ್ದು 24,580 ಕೋಟಿ ರೂ. ಅಂದರೆ ನಿಗದಿತ ಗುರಿಗಿಂತ 1,696 ಕೋಟಿ ರೂ. ಅಧಿಕ ರಾಜಸ್ವ ಸಂಗ್ರಹ ಮಾಡಿರುವುದಾಗಿ ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಆರ್ಥಿಕ ಕೊನೆ ತಿಂಗಳು ಮಾರ್ಚ್ ನಲ್ಲಿ 2,551.97 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಮಾಡಲಾಗಿದೆ. ಫೆಬ್ರವರಿಯಲ್ಲಿ 2174.93 ಕೋಟಿ ರೂ. ರಾಜಸ್ವ ತೆರಿಗೆ ಸಂಗ್ರಹ ಮಾಡಲಾಗಿತ್ತು. ಜನವರಿಯಲ್ಲಿ 2,115.52 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿತ್ತು. 2020-21 ಸಾಲಿನಲ್ಲಿ ಅಬಕಾರಿ ಇಲಾಖೆ 23,332.10 ಕೋಟಿ ರೂ.‌ ರಾಜಸ್ವ ಸಂಗ್ರಹ ಮಾಡಿತ್ತು. ಆ ಮೂಲಕ ಕಳೆದ ಸಾಲಿಗೆ ಹೋಲಿಸಿದರೆ 2021-22 ಸಾಲಿನಲ್ಲಿ 2,944.73 ಕೋಟಿ ರೂ. ಅಧಿಕ ರಾಜಸ್ವ ಸಂಗ್ರಹ ಕಂಡಿದೆ. ಅಂದರೆ ಸುಮಾರು 12.62% ಏರಿಕೆ ಕಂಡಿದೆ.

ಮದ್ಯ ಮಾರಾಟದಲ್ಲೂ ಏರಿಕೆ: 2021-22 ಸಾಲಿನಲ್ಲಿ ಮದ್ಯ ಮಾರಾಟದಲ್ಲೂ ಉತ್ತಮ ಸಾಧನೆ ತೋರಲಾಗಿದೆ. ಒಟ್ಟು 660 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಮದ್ಯ ಮಾರಾಟವಾಗಿದೆ. ಅದೇ 268.83 ಲಕ್ಷ ಬಾಕ್ಸ್ ಬಿಯರ್ ಮಾರಾಟ ಮಾಡಲಾಗಿದೆ. 2020-21ರಲ್ಲಿ 583.23 ಲಕ್ಷ ಬಾಕ್ಸ್ ಐಎಂಎಲ್ ಮಾರಾಟ ವಾಗಿದ್ದರೆ, 237.82 ಲಕ್ಷ ಬಾಕ್ಸ್ ಬಿಯರ್ ಮಾರಾಟ ಮಾಡಲಾಗಿತ್ತು. ಕಳೆದ ಸಾಲಿಗೆ ಹೋಲಿಸಿದರೆ 2021-22 ಸಾಲಿನಲ್ಲಿ 76.93 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟ ಮಾಡಲಾಗಿದ್ದರೆ, 31.01 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2021-22 ಸಾಲಿನ ಕೊನೆ ತಿಂಗಳು ಮಾರ್ಚ್‌ನಲ್ಲಿ ಬರೋಬ್ಬರಿ 38.37 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಇನ್ನು 63.66 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದೆ.

ಇದನ್ನೂ ಓದಿ: ದೂರ ಶಿಕ್ಷಣ ಫಲಿತಾಂಶ ಹಿಂಪಡೆದು ಮರುಪರೀಕ್ಷೆಗೆ ನಿರ್ಧರಿಸಿದ ಕುವೆಂಪು ವಿವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.