ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್ ಡೌನ್ ಉತ್ತಮ ಫಲಿತಾಂಶ ನೀಡುತ್ತಿದೆ. ದಿನವೊಂದಕ್ಕೆ 50 ಸಾವಿರ ದಾಟಿದ್ದ ಸೋಂಕಿತರ ಸಂಖ್ಯೆ ತಗ್ಗುತ್ತಿದ್ದು, ಇಂದು 25 ಸಾವಿರಕ್ಕೆ ಇಳಿಕೆ ಕಂಡಿದೆ. ಆದ್ರೆ 626 ಜನರು ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.
ರಾಜ್ಯದಲ್ಲಿಂದು 25,979 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 24,24,904 ಕ್ಕೆ ಏರಿಕೆ ಆಗಿದೆ. 35,573 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 19,26,615 ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು ನಿಧಾನಗತಿಯಲ್ಲಿ ಇಳಿಕೆಯಾಗ್ತಿದ್ದು, ಸದ್ಯ 4,72,986 ಕೇಸ್ಗಳಿವೆ. ಇಂದು 626 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 25,282 ಕ್ಕೆ ಏರಿದೆ.
ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಶೇಕಡವಾರು ಶೇ.20.76ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ ಶೇ.2.40 ರಷ್ಟು ಇದೆ.
ಬೆಂಗಳೂರು ವರದಿ:
ರಾಜಧಾನಿಯಲ್ಲಿ ಇಂದು 7,494 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11,19,552 ಕ್ಕೆ ಏರಿದೆ. 12,407 ಸೋಂಕಿತರು ಗುಣಮುಖರಾಗಿದ್ದು, ಈ ತನಕ 8,52,493 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 362 ಸೋಂಕಿತರು ಮೃತರಾಗಿದ್ದು, ನಗರದಲ್ಲಿ ಸಾವಿನ ಸಂಖ್ಯೆ 11,216ಕ್ಕೆ ಏರಿಕೆ ಆಗಿದೆ. ಸದ್ಯ ನಗರದಲ್ಲಿ 2,55,842 ಸಕ್ರಿಯ ಪ್ರಕರಣಗಳು ಇವೆ.
ಸೋಂಕು ಇಳಿಕೆ, ಡಿಸ್ಚಾರ್ಜ್ ಏರಿಕೆ - ಸಾವಿನಲ್ಲಿ ಏರಿಳಿತ
ದಿನಾಂಕ - ಸೋಂಕಿತರು- ಗುಣಮುಖರು- ಸಾವು
ಮೇ-16- 31,531 - 36,475 - 403
ಮೇ -17- 38,603 - 34,635- 476
ಮೇ -18- 30,309 - 58,395- 525
ಮೇ- 19- 34,281 - 49,953- 468
ಮೇ- 20- 28,869 - 52,257- 548
ಮೇ- 21- 32,218 - 52,581- 353
ಮೇ- 22- 31,183 - 61,766- 451
ಮೇ- 23- 25,979 - 35,573 -626