ETV Bharat / city

ರಾಜ್ಯದಲ್ಲಿ ಲಕ್ಷ ದಾಟಿದ ಕೇಸ್​: ಕೊರೊನಾ ನಿರ್ವಹಣೆಯ ಖರ್ಚು-ವೆಚ್ಚದ ಕಂಪ್ಲೀಟ್​ ಮಾಹಿತಿ - ಕೊರೊನಾ ಸೋಂಕಿತರ ಮಾಹಿತಿ

ರಾಜ್ಯಾದ್ಯಂತ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯವಿರುವ ಸುಮಾರು 10,000 ಬೆಡ್​ಗಳಲ್ಲಿ 5,000 ಬೆಡ್ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ ಮತ್ತು ಕೆಲವರು ಕೊರೊನಾ ಪರೀಕ್ಷೆ ವೇಳೆ ತಪ್ಪು ವಿಳಾಸ ನೀಡುತ್ತಿರುವ ಹಿನ್ನೆಲೆ ಇನ್ಮೇಲಿಂದ ಓಟಿಪಿ ಒಂದ ನಂತರವೇ ಪರೀಕ್ಷೆ ಮಾಡಲಾಗುತ್ತದೆ. ಅಲ್ಲದೆ ಕೊರೊನಾ ನಿಯಂತ್ರಣ ಖರ್ಚು ವೆಚ್ಚದ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಮಾಹಿತಿ ನೀಡಿದ್ದಾರೆ.

karnataka-corona-updates
ಕೊರೊನಾ‌ ಸೋಂಕಿತರ ಸಂಖ್ಯೆ
author img

By

Published : Jul 27, 2020, 8:05 PM IST

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಕಾಲಿಟ್ಟು ಇಂದಿಗೆ 150 ದಿನಗಳು ಕಳೆದಿವೆ. ಕೇವಲ 150 ದಿನಗಳಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ.

1,01,465 ಸೋಂಕಿತರ ಪೈಕಿ ಕೇವಲ 37,685 ಮಾತ್ರ ಗುಣಮುಖರಾಗಿದ್ದು, ಉಳಿದ 61,819 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಂದೇ ದಿನ 5324 ಹೊಸ ಪಾಸಿಟಿವ್ ಪತ್ತೆ ಆಗಿದ್ದರೆ, 75 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 1953ಕ್ಕೆ ಏರಿದೆ. 598 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,39,411 ನಿಗಾದಲ್ಲಿದ್ದಾರೆ.

ರಾಜ್ಯದ ಮೆಡಿಕಲ್ ಕಾಲೇಜು 5000 ಹಾಸಿಗೆ ಮೀಸಲು:

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸುವಲ್ಲಿ ರಾಜ್ಯದ ಸರ್ಕಾರಿ & ಖಾಸಗಿ ವೈದ್ಯಕೀಯ ಕಾಲೇಜುಗಳು ಮುಂಚೂಣಿಯಲ್ಲಿವೆ ಎಂದು ಸಚಿವ ಡಾ ಸುಧಾಕರ್ ಟೀಟ್​ ಮಾಡಿದ್ದಾರೆ.‌ ರಾಜ್ಯಾದ್ಯಂತ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯವಿರುವ ಸುಮಾರು 10,000 ಬೆಡ್​ಗಳಲ್ಲಿ 5,000 ಬೆಡ್ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಓಟಿಪಿ (OTP) ಬಂದ ನಂತರವಷ್ಟೇ ಪರೀಕ್ಷೆ:

ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಕೋವಿಡ್‌ ಟೆಸ್ಟ್‌ ಮಾಡಿದರಷ್ಟೇ ಸುಲಭವಾಗುತ್ತದೆ. ರಾಜ್ಯದಲ್ಲಿ ಪ್ರತಿದಿನ 30-40 ಸಾವಿರ ಟೆಸ್ಟ್‌ ಮಾಡಲಾಗುತ್ತಿದೆ. ಕೆಲವರು ತಪ್ಪು ವಿಳಾಸ, ಮೊಬೈಲ್‌ ನಂಬರ್‌ ಕೊಡುತ್ತಿದ್ದಾರೆ. ಕಡ್ಡಾಯವಾಗಿ ಆಧಾರ್‌, ಐಡಿ ಕಾರ್ಡ್‌ ತೋರಿಸಿ ಓಟಿಪಿ ಬಂದ ಮೇಲೆ ಟೆಸ್ಟ್‌ ಮಾಡಲು ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ.

ಕೋವಿಡ್ ನಿಯಂತ್ರಣಾ ಕಾರ್ಯಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸುವಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮಹತ್ವದ ಪಾತ್ರ ವಹಿಸಿದೆ. ಸುಮಾರು 2,000 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸೋಂಕಿತರ ಚಿಕಿತ್ಸೆಗೆ ಮತ್ತು 2,000 ಎಂಬಿಬಿಎಸ್, ನರ್ಸಿಂಗ್ ವಿದ್ಯಾಥಿಗಳನ್ನು ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಕೋವಿಡ್ ಸಂಕಷ್ಟದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹಲವಾರು ರಾಜ್ಯಗಳು ವೈದ್ಯರ ವೇತನ ಕಡಿತಗೊಳಿಸಿರುವ ಈ ಸಂದರ್ಭದಲ್ಲಿ 7ನೇ ವೇತನ ಆಯೋಗ ಅನ್ವಯ ವೈದ್ಯಕೀಯ ಬೋಧಕ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಲಾಗಿದೆ.

karnataka corona updates
ಖರ್ಚು ವೆಚ್ಚದ ಪ್ರತಿ

ಕೋವಿಡ್ ರೋಗಿಯ ನಿರ್ವಹಣೆಯ ಖರ್ಚು ವೆಚ್ಚ ಎಷ್ಟು ಗೊತ್ತಾ..?

ಹಾಸಿಗೆ ಖರ್ಚು: 100 ಹಾಸಿಗೆಗೆ ದಿನಕ್ಕೆ 500 ರೂಪಾಯಿಯಂತೆ ತಿಂಗಳಿಗೆ 15 ಲಕ್ಷ ಖರ್ಚು ಆಗಲಿದೆ.

ಸಿಬ್ಬಂದಿ ಖರ್ಚು: ತಿಂಗಳಿಗೆ 60 ಸದಸ್ಯರುಳ್ಳ 4 ತಂಡಗಳ ರಚನೆ ಮಾಡಿದರೆ 70 ಲಕ್ಷದ 8 ಸಾವಿರ ಖರ್ಚು ಬರಲಿದೆ.

ಇದರಲ್ಲಿ ನಾಲ್ವರು ಹಿರಿಯ ವೈದ್ಯರಿಗೆ ನಾಲ್ಕು ಲಕ್ಷ. 8 ಮಂದಿ ಪಿಜಿ ವೈದ್ಯರಿಗೆ (ಕಿರಿಯ) ತಿಂಗಳಿಗೆ 40 ಸಾವಿರದಂತೆ 3 ಲಕ್ಷದ 20 ಸಾವಿರ ಖರ್ಚು ಬರಲಿದೆ. 36 ಶುಶ್ರೂಕರಿಗೆ ತಿಂಗಳಿಗೆ 25 ಸಾವಿರದಂತೆ 9 ಲಕ್ಷ ಖರ್ಚು, 12 ಮಂದಿ ಹೌಸ್ ಕೀಪಿಂಗ್ ನವರಿಗೆ ತಿಂಗಳಿಗೆ 11 ಸಾವಿರದಂತೆ 1 ಲಕ್ಷದ 32 ಸಾವಿರ ಖರ್ಚು ಬರಲಿದೆ.

ಪಿಪಿಇ ಕಿಟ್: ಪ್ರತಿ ದಿನ 65ರಂತೆ ಒಂದಕ್ಕೆ 2 ಸಾವಿರ ರೂಪಾಯಿ ಲೆಕ್ಕಹಾಕಬೇಕು. ಜೊತೆಗೆ ರೇಡಿಯೋಲಜಿ, ಸ್ವ್ಯಾಬ್ ತೆಗೆಯೋರಿಗೆ ಶಂಕಿತ ರೋಗಿಗಳ ಕನ್ಸಲ್ಟೆಂಟ್ ಗೂ ಕಿಟ್ ಗಳು ಬೇಕು. ಇದಕ್ಕೆ 39 ಲಕ್ಷದಷ್ಟು ಖರ್ಚು ಬರಲಿದೆ.

ಕ್ವಾರಂಟೈನ್​ ಖರ್ಚು: 88 ಲಕ್ಷದ 80 ಸಾವಿರ ಖರ್ಚು ಬರಲಿದೆ. 120 ಸದಸ್ಯರುಳ್ಳ 2 ತಂಡಗಳ ಕ್ವಾರಂಟೈನ್​ ರೂಂಗೆ ದಿನಕ್ಕೆ ಒಬ್ಬರಿಗೆ 1500 ರೂಪಾಯಿನಂತೆ 54ಲಕ್ಷ. ಆಹಾರಕ್ಕೆ ದಿನಕ್ಕೆ 500 ರಂತೆ 18 ಲಕ್ಷ. ಮೂಗಿನ ಸ್ವ್ಯಾಬ್, ಎಕ್ಸ್ ರೇ ಟೆಸ್ಟ್ ಸೇರಿದಂತೆ ಒಬ್ಬರಿಗೆ 7 ಸಾವಿರದಂತೆ 16 ಲಕ್ಷ 80 ಸಾವಿರ ರೂ. ಖರ್ಚು ಆಗಲಿದೆ.

ಬಟ್ಟೆ ಖರ್ಚು: ಬೆಡ್ ಶೀಟ್, ಪಿಲ್ಲೋ ಕವರ್ಸ್, ಸೋಪು ಶಾಂಪು ಟವಲ್ ಸೇರಿದಂತೆ ಹಲವು ಖರ್ಚು 24 ಸಾವಿರ ರೂ.

ಆಹಾರದ ವೆಚ್ಚ: ಒಬ್ಬರಿಗೆ 500 ದಿನಕ್ಕೆ ಅಂತಾ ಲೆಕ್ಕ ಹಾಕಿದರೆ 9 ಲಕ್ಷ ಖರ್ಚು ಬರಲಿದೆ

ವಿದ್ಯುತ್ ದರ: ತಿಂಗಳಿಗೆ 1 ಲಕ್ಷ ಬಿಲ್ ಬರಲಿದೆ

ಹೌಸ್ ಕೀಪಿಂಗ್ ಖರ್ಚು: ಟ‍ಾಯ್ಲೆಟ್ ಕ್ಲೀನಿಂಗ್, ಹೈಡ್ರೋಕ್ಲೋರೇಟ್, ಆಸ್ಪತ್ರೆ ಕ್ಲೀನಿಂಗ್ ಮಟಿರಿಯಲ್ ಗೆ 25 ಸಾವಿರ ಖರ್ಚು

ಬಳಕೆಯಾದ ಮೆಡಿಸಿನ್ ನಿರ್ವಹಣೆಗೆ: ಪ್ರತಿ ತಿಂಗಳು 25 ಸಾವಿರ ರೂ. ಖರ್ಚು

ಒಟ್ಟು ನಿಗದಿತ ಖರ್ಚು: ತಿಂಗಳಿಗೆ ನಿಗದಿತ ಖರ್ಚು 2 ಕೋಟಿ 23 ಲಕ್ಷದ 62 ಸಾವಿರ ರೂಪಾಯಿ. ದಿನವೊಂದಕ್ಕೆ 7 ಲಕ್ಷದ 45 ಸಾವಿರದ 400 ರೂಪಾಯಿ. ಒಬ್ಬ ರೋಗಿಗೆ ದಿನವೊಂದಕ್ಕೆ 7 ಸಾವಿರದ 454 ರೂಪಾಯಿ ಮೆಡಿಸನ್ ಹೊರತುಪಡಿಸಿ ಖರ್ಚು ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.