ETV Bharat / city

ಲಕ್ಷದ ಸಮೀಪ ಕೊರೊನಾ‌ ಸೋಂಕಿತರ ಸಂಖ್ಯೆ.. ರಾಜ್ಯದಲ್ಲಿಂದು 5072 ಹೊಸ ಪಾಸಿಟಿವ್ ಕೇಸ್

author img

By

Published : Jul 25, 2020, 9:23 PM IST

ಈಗಾಗಲೇ 200 ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ. ತಂತ್ರಜ್ಞರ ಕೊರತೆಯಿಂದಾಗಿ ಪ್ರತಿ ತಂಡಕ್ಕೆ ಇಬ್ಬರ ನೇಮಕಕ್ಕೆ ಕ್ರಮವಹಿಸಿದ್ದು, ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ..

karnataka-corona-updates
ಸೋಂಕಿತರ ಸಂಖ್ಯೆ

ಬೆಂಗಳೂರು : ರಾಜ್ಯದಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಲಕ್ಷ ದಾಟುವ ಸಮೀಪದಲ್ಲಿದೆ. ಇಂದು 5072 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 90,942 ಏರಿದೆ. ಇಂದು 72 ಮಂದಿಯೂ ಸೇರಿ ಕೊರೊನಾಗೆ ಈವರೆಗೆ 1796 ಮೃತಪಟ್ಟಿದ್ದಾರೆ. 33,750 ಮಂದಿ ಗುಣಮುಖರಾಗಿದ್ದು, 55,388 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

karnataka-corona-updates
ಲಕ್ಷದ ಸಮೀಪದಲ್ಲಿ ಕೊರೊನಾ‌ ಸೋಂಕಿತರ ಸಂಖ್ಯೆ

ಬೆಂಗಳೂರಿನಲ್ಲಿ ಕೊರೊನಾ‌ ಸೋಂಕು ಹೆಚ್ಚುತ್ತಿದ್ದು, ಸೋಂಕು ತಡೆಯಲು ಕೋವಿಡ್ ಪರೀಕ್ಷೆ‌ ಹೆಚ್ಚಿಸುವುದು ಅನಿರ್ವಾಯ. ಆದರೆ, ಫೀವರ್ ಕ್ಲಿನಿಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಂತ್ರಜ್ಞರ ಕೊರತೆ ಎದುರಾಗುತ್ತಿದೆ. ಹೀಗಾಗಿ 6 ತಿಂಗಳ ಅವಧಿಗೆ ಪ್ರಯೋಗ ಶಾಲಾ ತಂತ್ರಜ್ಞರ ನೇಮಕಕ್ಕೆ ಆದೇಶಿಸಿದ್ದಾರೆ.

ಈಗಾಗಲೇ 200 ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ. ತಂತ್ರಜ್ಞರ ಕೊರತೆಯಿಂದಾಗಿ ಪ್ರತಿ ತಂಡಕ್ಕೆ ಇಬ್ಬರ ನೇಮಕಕ್ಕೆ ಕ್ರಮವಹಿಸಿದ್ದು, ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಮಾಸಿಕ 5 ಸಾವಿರ ವೇತನ ಜೊತೆಯಲ್ಲಿ 5 ಸಾವಿರ ಕೋವಿಡ್ ಭತ್ಯೆ‌ ನಿಗದಿ ಮಾಡಲಾಗಿದೆ.

ಕಂಟೇನ್ಮೆಂಟ್​​ ಝೋನ್​ಗಳಲ್ಲಿ ರಾಸಾಯನಿಕ ಸಿಂಪಡಣೆ : ನಗರದಲ್ಲಿ ಸೋಂಕು ಹೆಚ್ಚುತ್ತಿದ್ದು, ಕಂಟೇನ್ಮೆಂಟ್​​ ಝೋನ್​ಗಳಾಗಿ ಬದಲಾಗುತ್ತಿದೆ. ಇಂದು ಒಂದೇ ದಿನ ಬಿಟಿಎಂ ಲೇಔಟ್​ನಲ್ಲಿ 100 ಕೇಸ್ ಪತ್ತೆಯಾಗಿವೆ. ಕೆಲ ರಸ್ತೆಗಳಲ್ಲಿ 8-10 ಕೇಸ್ ಪತ್ತೆಯಾಗಿವೆ. ಸದ್ಯ ಕಂಟೇನ್ಮೆಂಟ್​​ ವಲಯಗಳಿಗೆ ಪಾಲಿಕೆಯಿಂದ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.